ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ-ಶಾಸಕ ಜಿ ಎಸ್ ಪಾಟೀಲ್

**ಗಜೇಂದ್ರಗಡ

:ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ರೋಗಗಳಿಂದ ದೂರ ಇರಲು ಶುದ್ಧ ಕುಡಿಯುವ ನೀರು, ಒಳ್ಳೆಯ ಗಾಳಿ, ಬೆಳಕು ಹಾಗೂ ಉತ್ತಮವಾದ ಆಹಾರ ಪದ್ಧತಿ, ಜೀವನ ಶೈಲಿ ಅವಶ್ಯ’ ಎಂದು ವಿಧಾನ ಪರಿಷತ್ ಸದಸ್ಯ ಎಸ್ ವ್ಹಿ ಸಂಕನೂರ ಹೇಳಿದರು.ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ₹4 ಲಕ್ಷ ಅನುದಾನದಲ್ಲಿ ನಿರ್ಮಿಸಿರುವ ಶುದ್ಧ ಘಟಕ ಉದ್ಘಾಟಿಸಿ ಮಾತನಾಡಿದರು*ಗಜೇಂದ್ರಗಡ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಶಾಲಾ-ಕಾಲೇಜುಗಳಿಗೆ ಮೂಲ ಸೌಕರ್ಯ ಒದಗಿಸಲು ಪ್ರಥಮ ಆದ್ಯತೆ ಕೊಡುತ್ತಿದ್ದೇನೆ. ವಿದ್ಯಾರ್ಥಿ ಜೀವನದಲ್ಲಿ ಸಮಯ ಬಹಳ ಅಮೂಲ್ಯ. ಅದಕ್ಕಾಗಿ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕಾದರೆ ನಿರಂತರವಾಗಿ ಅಧ್ಯಯನ ಮಾಡಬೇಕು. ಆಗ ಗುರಿ ಮುಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ವಾರ್ಷಿಕ ಪರೀಕೆಯಲ್ಲಿ ಜಿಲ್ಲೆಯ ಫಲಿತಾಂಶ ಬಹಳ ಕೆಳಮಟ್ಟದಲ್ಲಿದೆ. ಫಲಿತಾಂಶವನ್ನು ಉನ್ನತೀಕರಿಸಲು ಉಪನ್ಯಾಸಕರು ಶ್ರಮಿಸಬೇಕು. ವರ್ಗ ಕೋಣೆಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟಕ್ಕೆ ಇಳಿದು ಉಪನ್ಯಾಸಕರು ವಿಷಯವನ್ನು ಬೋಧನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.ಈ ಸಂದರ್ಭದಲ್ಲಿ ಶಾಸಕ ಜಿ ಎಸ್ ಪಾಟೀಲ ಮಾತನಾಡಿದರು.

.ಈ ಸಂದರ್ಭದಲ್ಲಿ ರಮೇಶ್ ಮರಾಠಿ,ಹಾಗೂ ಪಿ ಎಸ್, ಐ, ಸೋಮನಗೌಡ ಗೌಡರ,ಸಿದ್ದಣ್ಣ, ಜಿ, ಬಂಡಿ, ಪುರಸಭೆ ಅಧ್ಯಕ್ಷರಾದ ಸುಭಾಸ್ ಮ್ಯಾಗೇರಿ,ಪುರಸಭೆ ಮುಖ್ಯಧಿಕಾರಿಗಳಾದ ಬಸವರಾಜ ಬಳಗಾನೂರ, ಶ್ರೀಧರ್ ಬಿದರಳ್ಳಿ, ಅರಿಹಂತ್ ಭಾಗಮಾರ್,ಯಲ್ಲಪ್ಪ ಬಂಕದ್, ರಾಜು ಸಾಂಗ್ಲಿಕರ್, ವೆಂಕಟೇಶ್ ಮುದಗಲ್, ಹನುಮಂತ ರಾಮಜಿ, ಭೀಮಣ್ಣ ತಳವಾರ,ಅಮರೇಶ್ ಬಳಿಗೆರ್, ಚನ್ನು ಪಾಟೀಲ್, ಅಂದಪ್ಪ ಅಂಗಡಿ, ಮತ್ತು ಸರಕಾರಿ ಪದವಿ ಪೂರ್ವ ಕಾಲೇಜುನ ಭೋಧಕ ಸಿಬ್ಬಂದಿಗಳು, ವಿದ್ಯಾರ್ಥಿ /ವಿದ್ಯಾರ್ಥಿನಿ ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *