
ಸುದ್ದಿ 28 ಅಫಜಲಪುರ
ಮೌನೇಶ್ವರರ ದರ್ಶನಕ್ಕಾಗಿ ವ್ರತಾಚರಣೆ: ವೀರಣ್ಣ ಮುತ್ಯಾ–ಮಾಲಾಧಾರಿಗಳಿಗೆ ಸನ್ಮಾನ
ಕಲ್ಬುರ್ಗಿ, ಆ.28: ವೀರಣ್ಣ ಮುತ್ಯಾ ಹಾಗೂ ಮಾಲಾಧಾರಿಗಳು 41 ದಿನಗಳ ಕಾಲ ನಿರಂತರವಾಗಿ ಜಗದ್ಗುರು ಮೌನೇಶ್ವರರ ವ್ರತಾಚರಣೆ ನೆರವೇರಿಸಿ, ದಕ್ಷಿಣ ಕಾಶಿ ಮೌನೇಶ್ವರರ ದರ್ಶನಕ್ಕಾಗಿ ಹಾಗೂ ಲೋಕಕಲ್ಯಾಣ–ಸಮಾಜಕಲ್ಯಾಣಕ್ಕಾಗಿ ಕೈಗೊಂಡ ಯಾತ್ರೆಯ ಹಿನ್ನೆಲೆಯಲ್ಲಿ, ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭೆ ಹಾಗೂ ವಿಶ್ವಕರ್ಮ ಹೋರಾಟ ಸಮಿತಿಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಅನಿಸಿಕೆ 1ವೀರಣ್ಣ ಮುತ್ಯಾ ಹಾಗೂ ಮಾಲಾಧಾರಿಗಳು 41 ದಿನಗಳ ಕಾಲ ಶ್ರದ್ಧಾ–ಭಕ್ತಿಯಿಂದ ವ್ರತಾಚರಣೆ ನಡೆಸಿ, ಮೌನೇಶ್ವರರ ದರ್ಶನಕ್ಕಾಗಿ ಕೈಗೊಂಡಿರುವ ಈ ಯಾತ್ರೆ ಸಮಾಜಕ್ಕೆ ಮಾದರಿಯಾಗಿದೆ. ಇದು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ; ಸಮಾಜದಲ್ಲಿ ಏಕತೆ, ಶಿಸ್ತು ಮತ್ತು ಸೇವಾ ಮನೋಭಾವ ಬೆಳೆಸುವ ಚಳುವಳಿಯಾಗಿದೆ. ಇಂತಹ ಕಾರ್ಯಗಳು ಯುವ ಪೀಳಿಗೆಯಲ್ಲೂ ಧಾರ್ಮಿಕ ನಂಬಿಕೆ ಜೊತೆಗೆ ಸಮಾಜಮುಖಿ ಚಿಂತನೆಗೆ ದಾರಿ ಮಾಡಿಕೊಡುತ್ತವೆ.

– ದೇವೀಂದ್ರ ದೇಸಾಯಿ ಕಲ್ಲೂರ ( ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಹೋರಾಟ ರಾಜ್ಯ ಸಮಿತಿ ಅಧ್ಯಕ್ಷರು )ಈ ಸಂದರ್ಭದಲ್ಲಿ ಅ.ಕ. ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕಮಲಕರ್ ಅರಣಕಲ್, ಅಖಿಲ ಕರ್ನಾಟಕ ವಿಶ್ವಕರ್ಮ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ದೇವೀಂದ್ರ ದೇಸಾಯಿ ಕಲ್ಲೂರ, ಪ್ರಧಾನ ಕಾರ್ಯದರ್ಶಿ ಶಿವಾನಂದ ಕಲ್ಲೂರ, ದತ್ತು ಗಿಲ್ಡ, ದೇವೀಂದ್ರ ಹೇರೂರ, ಕಾಳಿದಾಸ ವಿಶ್ವಕರ್ಮ, ಶ್ರೀಕಾಂತ ಕಂದಕೂರ, ವಿಶ್ವನಾಥ ಹಣಕುಣಿ, ನಾಗರಾಜ ವಿಶ್ವಕರ್ಮ, ರಾಕೇಶ್ ಪೊದ್ದಾರ, ಲೋಕೇಶ, ಶಿಲವಂತ ಸೇರಿದಂತೆ ಸಮುದಾಯದ ಹಿರಿಯರು, ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು..

