
ರಾಜಕುಮಾರ್. ಮ.ಮಾಳಿ ಅವರಿಗೆ,,, “ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”ದೊರೆತಿದೆ.

ಅವರು ಬಾಗೇವಾಡಿ ತಾಲೂಕಿನ ಚಬನೂರಿನಲ್ಲಿ ಹಾಗೂ ವಿಜಯಪುರ ತಾಲೂಕಿನ ಜಂಬಗಿ( ಆ )ಶಾಲೆಯಲ್ಲಿ ಸಲ್ಲಿಸಿದ ಅಮೋಘ ಸೇವೆಯನ್ನು ಕಂಡು ಜಿಲ್ಲಾ ಆಡಳಿತ ಹಾಗೂ ಉಪ ನಿರ್ದೇಶಕರ ಕಾರ್ಯಾಲಯ ವಿಜಯಪುರ ಇವರಿಂದ 2025 -26 ನೇ ಸಾಲಿನ ಪ್ರಶಸ್ತಿ ದೊರೆತಿದೆ ಕಾರ್ಯಕ್ರಮದಲ್ಲಿ ಲೋಕಸಭೆ ಸದಸ್ಯರಾದ ರಮೇಶ್ ಜಿಗ್ಜಣಿಗಿ, ನಾಗಠಾಣ ಶಾಸಕರಾದ ವಿಠ್ಠಲ್ ಕಟಕದೊಂಡ, ಜಿಲ್ಲಾ ಪಂಚಾಯತ್ ಶಿವು ರಿಷಿ ಆನಂದ್ ಗೆನ್ನೂರು ಸರ್, ಉಪ ನಿರ್ದೇಶಕರಾದ ಹಿರೇಮಠ ಸರ್,ಆಡಳಿತ ಉಪನಿರ್ದೇಶಕರು, ಭಾಗವಹಿಸಿದರು.

ಅಲ್ಲದೆ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅರ್ಜುನ್ ಲಮಾಣಿ, ಜುಬೇರ್ ಕೆರೂರ್, ಶೇಡಿಶ್ಯಾಳ್ ಹಾಗೂ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎಲ್ಲಾ ಶಿಕ್ಷಕರು ಹಾಗೂ ಶಿಕ್ಷಕ ಬಾಂಧವರು ಭಾಗವಹಿಸಿದ್ದರು . ಕಾರ್ಯಕ್ರಮವು ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ದಿನಾಂಕ 05.09.2025 ರಂದು ನೆರವೇರಿತು.

. ಅವರಿಗೆ ಈಗಾಗಲೇ ರಾಜ್ಯಮಟ್ಟದ ಆರೂಢ ಶ್ರೀ,ಬಸವ ಶ್ರೀ, ಗಣಿತ ಚಿಂತನ ಶಿಕ್ಷಕ, ವಿವೇಕ ಶ್ರೀ, ವಿಧಾನಸಭೆಯ ಸಭಾಪತಿಯಾದ ಬಸವರಾಜ್ ಹೊರಟ್ಟಿ ರವರು ಕೂಡ ಮಾಡುವ ಅವ್ವ ಪ್ರಶಸ್ತಿ, ಒಡಗೇರಿ ಫೌಂಡೇಶನ್ ಕೂಡ ಮಾಡುವ ಜಿಲ್ಲಾ ಆದರ್ಶ ಶಿಕ್ಷಕ ಪುರಸ್ಕಾರ, ಅಲ್ಲದೆ ಬಸವನಬಾಗೇವಾಡಿ ಸಾಹಿತ್ಯ ಸಮ್ಮೇಳನದಲ್ಲಿ ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅಭಿನಂದಿಸಿ ಗೌರವಿಸಲಾಗಿದೆ.

