ಜಾಗತಿಕ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣ- ಮಾರುತಿ ಶಿಡ್ಲಾಪುರ

ಜಾಗತಿಕ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣ- ಮಾರುತಿ ಶಿಡ್ಲಾಪುರ


ಹಾವೇರಿ: ಕಾಯಕ ಮತ್ತು ದಾಸೋಹದೊಂದಿಗೆ ಸಮಾನತೆ ಹಾಗೂ ಜೀವನದ ಸತ್ಯದರ್ಶನದ ಮಹತ್ವವನ್ನು ಸಾರಿ, ಸಮ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆದ ದಾರ್ಶನಿಕ ಬಸವಣ್ಣನವರ ವಚನಾದರ್ಶಗಳನ್ನು ನಿತ್ಯ ಜೀವನದಲ್ಲಿ ಪಾಲಿಸುವ ಸಂಕಲ್ಪವನ್ನು ಮಾಡೋಣ ಎಂದು ಸಾಹಿತಿ ಮಾರುತಿ ಶಿಡ್ಲಾಪುರ ಅಭಿಪ್ರಾಯ ಪಟ್ಟರು.


ನಗರದ ಹೊರವಲಯದ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಕಳಬೇಡ, ಕೊಲಬೇಡ; ಹುಸಿಯ ನುಡಿಯಲು ಬೇಡ; ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ; ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ. ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ! ಎಂಬ ವಚನವನ್ನು ನಾವು ದಿನನಿತ್ಯದ ಜೀವನದಲ್ಲಿ ರೂಡಿಸಿಕೊಳ್ಳಬೇಕು.


ಸಮಾನತೆಯ ಹರಿಕಾರರು ಬಸವಣ್ಣನವರು ಯಾವದು ಈಗಿನ ಸಮಾಜದಲ್ಲಿ ಬೇಡ ಅನ್ನುವುದು ಈಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಚ್ಚಾಗಿರುವುದು ವಿಪರ್ಯಾಸದ ಸಂಗತಿ. ಈಗೀನ ಸಾಮಾಜಿಕ ವ್ಯವಸ್ಥೆ ಹಳಿತಪ್ಪುತ್ತಿದೆ ಇದನ್ನು ಸರಿಪಡಿಸುವ ಮೂಲ ಅಸ್ತ್ರವೇ ವಚನ ಸಾಹಿತ್ಯ ಎಂದರು.


ಕುಲಪತಿ ಪ್ರೊ.ಸುರೇಶ ಹೆಚ್ ಜಂಗಮಶೆಟ್ಟಿ ಮಾತನಾಡಿ,ನಿಮ್ಮ ಸ್ವಂತ ಗೌರವಕ್ಕೆ ಹೋರಾಡುವುದನ್ನು ಬಿಟ್ಟು, ಸಾಮಾಜಿಕ ಗೌರವಕ್ಕೆ ಹೋರಾಡಿ ಹಾಗೂ ದಿನನಿತ್ಯ ಬಸವಣ್ಣನವರ ವಚನಗಳನ್ನು ಒಂದೊಂದು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.


ಕಾರ್ಯಕ್ರಮದಲ್ಲಿ ಕುಲಸಚಿವ ಎಸ್.ಟಿ.ಬಾಗಲಕೋಟಿ, ಉಪಕುಲಸಚಿವ ಡಾ.ಮನೋಹರ ಕೋಳಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ರವೀಂದ್ರಕುಮಾರ ಬಣಕಾರ ಸೇರಿದಂತೆ ವಿವಿಯ ಭೋದಕ-ಭೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು.


ಶ್ರುತಿ ಹಾಗೂ ಸಂಘಟಿಗರು ಪ್ರಾರ್ಥಿಸಿದರು.
ಕುಮಾರಿ ಚೈತ್ರಾ ಸ್ವಾಗತಿಸಿದರು,ಡಾ.ಪುಟ್ಟಸ್ವಾಮಿ ಹೆಚ್.ಬಿ. ನಿರೂಪಿಸಿದರು. ಕುಮಾರಿ ಸ್ವಾತಿ ವಂದಿಸಿದರು.

Leave a Reply

Your email address will not be published. Required fields are marked *