
ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ ಪ್ರಕಟಗೊಂಡ 1843ರ ಜುಲೈ 1ರ ಸವಿನೆನಪಿಗಾಗಿ ಪ್ರತಿ ವರ್ಷ ಈ ದಿನದಂದು ಪತ್ರಿಕಾ ದಿನವನ್ನು ಆಚರಿಸಲಾಗುತ್ತಿದೆ. ಈ 180ಕ್ಕೂ ಅಧಿಕ ವರ್ಷಗಳಲ್ಲಿ ಕನ್ನಡ ಪತ್ರಿಕೋದ್ಯಮ ಬೆಳೆದು ಸಾಗುತ್ತಿರುವ ಪರಿ ಗಮನಾರ್ಹ. ಸಂಪಾದಕರು, ವರದಿಗಾರರು ಹಾಗೂ ಸುದ್ದಿ ಮನೆಯ ಒಳಗೆ ತೆರೆಮರೆಯಲ್ಲಿ ಕೆಲಸ ಮಾಡುವ ಅಸಂಖ್ಯಾತ ಪತ್ರಕರ್ತರು, ಪತ್ರಿಕೆಗಳನ್ನು ಸಿದ್ಧಪಡಿಸುವಲ್ಲಿ ಅಗಾಧ ಶ್ರಮವಹಿಸುತ್ತಾರೆ. ಅದರ ಪರಿಣಾಮವಾಗಿ ನಮಗೆ ನಿಖರ ಹಾಗೂ ವಿಶ್ವಾಸಾರ್ಹ ಸುದ್ದಿಗಳು ಸಮಾಜಕ್ಕೆ ದೊರಕುತ್ತಿವೆ.ಪತ್ರಿಕೆಗಳು ಕೇವಲ ಸುದ್ದಿಯನ್ನಲ್ಲದೆ, ಸಾಹಿತ್ಯ, ಆರೋಗ್ಯ, ಶಿಕ್ಷಣ, ಉದ್ಯಮ ಸೇರಿದಂತೆ ಎಲ್ಲ ವಲಯಗಳ ಕುರಿತಾದ ಮಾಹಿತಿ ಒದಗಿಸುವುದರೊಂದಿಗೆ ಜ್ಞಾನ ವಿಸ್ತಾರಕ್ಕೂ ನೆರವಾಗುತ್ತವೆ. ಹೀಗಾಗಿ ನಾಡಿನ ಪ್ರಜೆಗಳ ಬೌದ್ಧಿಕ ವಿಕಸನದಲ್ಲಿಯೂ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಗಳನ್ನು ತರುವಲ್ಲಿ, ಆಡಳಿತ ವಲಯದ ಸುಧಾರಣೆಯಲ್ಲಿ ಹಾಗೂ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವಲ್ಲಿ ಪತ್ರಿಕೆಗಳು ಬದ್ಧತೆ ಮೆರೆಯುತ್ತಿವೆ. ಮಾಧ್ಯಮ ಕ್ಷೇತ್ರದಿಂದ ಭವಿಷ್ಯದಲ್ಲಿ ಮತ್ತಷ್ಟು ಸಕಾರಾತ್ಮಕ ಪರಿಣಾಮಗಳನ್ನು ನಿರೀಕ್ಷಿಸುತ್ತೇವೆ.ಸಮಸ್ತ ಪತ್ರಕರ್ತರಿಗೆ ಹಾಗೂ ಮಾಧ್ಯಮ ಸಹೋದರರಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು.

.🙏🌹ತಮ್ಮ ವಿಶ್ವಾಸಿ ಡಾ.ಚಂದ್ರಶೇಖರ ಕಾಳನ್ನವರ🙏