ಯುವ ಸಮುದಾಯವು ಆರೋಗ್ಯದತ್ತ ಒಲವು ಮೂಡಿಸಲಿ : ಡಾ.ಅನಿಲಕುಮಾರ ತೋಟದ.

ಜೀವಗಳನ್ನು ಗುಣಪಡಿಸುವಲ್ಲಿ ವೈದ್ಯರ ಅಚಲ ಬದ್ದತೆ ಹಾಗೂ ಸಹಾನುಭೂತಿ ಶ್ರೇಷ್ಠವಾದದ್ದು : ಮುಸ್ತಾಕ ಹುಟಗೂರ.ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ: ರೋಗಿಗಳ ಜೀವಗಳನ್ನು ಗುಣಪಡಿಸುವಲ್ಲಿ ಹಾಗೂ ಉಳಿಸುವಲ್ಲಿ ವೈದ್ಯರ ಅಚಲ ಬದ್ದತೆ ಹಾಗೂ ಸಹಾನುಭೂತಿವು ಅತ್ಯಂತ ಶ್ರೇಷ್ಠವಾದದ್ದು ಎಂದು ಮುಸ್ತಾಕ ಹುಟಗೂರ ಹೇಳಿದರು

.ನಗರ ಸಮೀಪ್ ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ನಮ್ಮ ಆರೋಗ್ಯದ ಬಗ್ಗೆ, ಯೋಗಕ್ಷೇಮದ ಬಗ್ಗೆ ನಿಸ್ವಾರ್ಥ ವಾಗಿ ಕಾಳಜಿ ವಹಿಸುವ ಬಳಿ ಕೋಟುಗಳ ವೀರರನ್ನು ನಾವೆಲ್ಲರೂ ಗೌರವಿಸಬೇಕು,

ಅವರು ನೀಡಿರುವ ಸಲಹೆಗಳನ್ನು ಪಾಲನೆ ಮಾಡಬೇಕಿದೆ ಎಂದರು.ಬಳಿಕ ಸಂಸ್ಥೆಯ ಕಾರ್ಯದರ್ಶಿ ನಾಜೀಯಾ ಮುದಗಲ್ ಮಾತನಾಡಿ ಮಾನವನ ಜೀವಿತ ಅವಧಿಯಲ್ಲಿ ವೈದ್ಯಕೀಯ ಸೇವೆ ಅನನ್ಯವಾಗಿದೆ. ವೈದ್ಯರಿಲ್ಲದ ಲೋಕವನ್ನು ಊಹಿಸಿಕೊಳ್ಳಲು ಆಗುವುದಿಲ್ಲ ಹೀಗಾಗಿ ಪ್ರತಿವರ್ಷವೂ ಕೂಡಾ ನಮ್ಮ ಶಾಲಾ ಮಕ್ಕಳಿಗೆ ಶಿಕ್ಷಣ ಜೊತೆಗೆ ಆರೋಗ್ಯ ತಪಾಸಣೆ ಹಾಗೂ ವೈದ್ಯರ ದಿನಾಚರಣೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ವೈದ್ಯರು ನೀಡಿದ ಚಿಕಿತ್ಸೆಯನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಬೇಕು ಎಂದರು.

ಬಳಿಕ ಗಜೇಂದ್ರಗಡ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯ ಅಧಿಕಾರಿ ಡಾ. ಅನೀಲಕುಮಾರ ತೋಟದ ಮಾತನಾಡಿ ನಮ್ಮ ವೃತ್ತಿ ಜೀವನದಲ್ಲಿ ಅದೆಷ್ಟೋ ಮನ ಮಿಡಿಯುವ ಹಾಗೂ ಮನಸ್ಸಿಗೆ ನೋವುಂಟು ಮಾಡುವ ಸಂದರ್ಭದಲ್ಲಿಯೂ ಕೂಡಾ ಆತ್ಮ ಸ್ಥೈರ್ಯ ಕಳೆದುಕೊಳ್ಳದೆ, ನಿಸ್ವಾರ್ಥದಿಂದ ಕಾರ್ಯ ಮಾಡಬೇಕಾಗುತ್ತದೆ.

ಪ್ರಸ್ತುತ ಯುವ ಸಮೂಹವು ಹೆಚ್ಚು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿಬೇಕಿದೆ ಎಂದರು. ಬಳಿಕ ಡಾ. ಶರಣು ಗಾಣಗೇರ ಮಾತನಾಡಿದರು. ಸಂಸ್ಥೆಯ ವತಿಯಿಂದ ವೈದ್ಯರಿಗೆ ಗೌರವ ಸಲ್ಲಿಸಿ ಸನ್ಮಾನಿಸಲಾಯಿತು. ಇನ್ನೂ ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸೀತಲ ಓಲೇಕಾರ, ಶಿಕ್ಷಕಿಯರಾದ ಎಚ್.ಎಚ್.ಮಾದರ, ಬಾಳಮ್ಮ ಗೌಡರ, ಕಳಕಪ್ಪ ಡೊಳ್ಳಿನ, ಆಕಾಶ ತಾಳಿಕೋಟಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *