ಅಂಗಾAಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಸಾಧಿಸಿಜೀವನ ಸಾರ್ಥಕತೆ ವೆಬ್‌ಸೈಟ್ ಮೂಲಕ ಅಂಗಾಗ ದಾನಕ್ಕೆ ಅವಕಾಶ

ಗದಗ (ಕರ್ನಾಟಕ ವಾರ್ತೆ) ಜೂನ್ 24:

ಜೀವನ ಸಾರ್ಥಕತೆ ಎಂಬ ವೆಬ್‌ಸೈಟ್ ಮೂಲಕ ಅಂಗಾAಗ ದಾನಕ್ಕೆ ಸರ್ಕಾರ ಅವಕಾಶ ನೀಡಿದೆ. ಅಂಗಾAಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಸಾಧನೆಗೆ ಮುಂದಾಗಬಹುದಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.ಗದಗ ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಜರುಗಿದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಅಂಗಾAಗ ದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಹಾಗೂ ಜೀವನ ಉಳಿಸಿದ ನೆಮ್ಮದಿ ನಿಮ್ಮದಾಗಲಿದೆ ಎಂದರು.

ನಗರದ ಯಲ್ಲಪ್ಪ ಕಾಂಬಳೇಕರ್ ಅವರು ಅಂಗಾAಗ ದಾನಕ್ಕೆ ಮುಂದಾಗುವ ಮೂಲಕ ಗದಗನಲ್ಲಿ ಮೂರನೇಯವರಾಗಿದ್ದಾರೆ. ಇಂದು ಅವರ ನಿವಾಸಕ್ಕೆ ತೆರಳಿ ದಿವಂಗತ ಯಲ್ಲಪ್ಪ ಕಾಂಬಳೇಕರ್ ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸಲಾಯಿತು. ಅವರ ಪತ್ನಿ ಗೀತಾಬಾಯಿ ಕಾಂಬಳೇಕರ್, ಮಗ ಅಭಿಷೇಕ , ಸಹೋದರರಾದ ಶಿವಾಜಿ ಹಾಗೂ ಭರತ್ ಅವರು ದಿವಂಗತ ಯಲ್ಲಪ್ಪ ಕಾಂಬಳೇಕರ್ ಅವರ ಅಂಗಾಗ ದಾನಕ್ಕೆ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಲಾಯಿತು.ಯಲ್ಲಪ್ಪ ಕಾಂಬಳೇಕರ್ ಅವರು ದಾನ ಮಾಡಿದ ಕಿಡ್ನಿಯನ್ನು ರೂರಲ್ ಮೆಡಿಕಲ್ ಸೊಸೈಟಿಯ ಹುಲಕೋಟಿ ಕೆ.ಎಚ್. ಪಾಟೀಲ ಆಸ್ಪತ್ರೆಯಲ್ಲಿ 27 ವರ್ಷದ ಯುವತಿಗೆ ಕಿಡ್ನಿ ಕಸಿ ಮಾಡಲಾಗಿದ್ದು, ಯಶಸ್ವಿಯಾಗಿದೆ ಎಂದು ವಿವರಿಸಿದರು. ಹುಲಕೋಟಿಯ ಕೆ.ಎಚ್. ಪಾಟೀಲ ರೂರಲ್ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಆಪರೇಷನ್ ಆರಂಭವಾದ ಮೇಲೆ ವೈದ್ಯರ ಪ್ರಯತ್ನದಿಂದ ಹೊಸ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದರು.ಒಂದು ಒಬ್ಬ ವ್ಯಕ್ತಿಯ ಜೀವ ಹಾಗೂ ಜೀವನ ಉಳಿಸಬಹುದು. ಅದರಂತೆ ಇಡೀ ದೇಹದಾನದಿಂದ ಹಲವರ ಜೀವ ಉಳಿಸಬಹುದಾಗಿದೆ. ಸಾರ್ವಜನಿಕರು ಅಂಗಾAಗ ದಾನದ ಬಗ್ಗೆ ಅರಿವು ಹೊಂದುವ ಮೂಲಕ ಅಂಗಾAಗ ದಾನಕ್ಕೆ ಜೀವನ ಸಾರ್ಥಕತೆ ವೆಬ್ ಸೈಟ್ ಮೂಲಕ ನೊಂದಾಯಿಸಿಕೊಳ್ಳಬೇಕು ಎಂದರು.ಜಗತ್ತಿನಲ್ಲಿ ಅಂಗಾAಗಗಳ ದಾನ ಮಾಡುವ ಬಗ್ಗೆ ಪ್ರೇರಣೆಯಾಗುವ ಕೆಲಸ ನಡೆದಿದೆ. ಆದರೆ, ಭಾರತದಲ್ಲಿ ಅಂಗಾಗಗಳ ದಾನ ಮಾಡುವ ಪದ್ಧತಿ ಬಹಳಷ್ಟು ವಿಳಂಬವಾಗಿದ್ದು, ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಪ್ರೇರಣೆ, ಪ್ರೋತ್ಸಾಹದಿಂದ ಚಾಲನೆ ಸಿಕ್ಕಂತಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ತಾಲೂಕಾ ಅಧ್ಯಕ್ಷ ಅಶೋಕ ಮಂದಾಲಿ, ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಡಾ. ಎಸ್.ಆರ್. ನಾಗನೂರ, ಡಾ. ಪ್ಯಾರಅಲಿ ನೂರಾನಿ, ಡಾ. ಅವಿನಾಶ ಓದುಗೌಡರ ಸೇರಿ ಹಲವರು ಇದ್ದರು.

Leave a Reply

Your email address will not be published. Required fields are marked *