
ಗದಗ : ಇತ್ತೀಚಿಗೆ ಜರುಗಿದ ಸಿಎ ಪರೀಕ್ಷೆಯಲ್ಲಿ ಮಲ್ಲಿಕಾರ್ಜುನ ಹೂಗಾರ ಉತ್ತೀರ್ಣಗೊಂಡು ಸಾಧನೆ ಮಾಡಿದ್ದಾರೆ.
ಸುಮಾರು ೯ ವರ್ಷಗಳ ಸುದೀರ್ಘ ಅವಧಿಯಲ್ಲಿ ಚಾರ್ಟೆಡ್ ಅಕೌಂಟೆAಟ್ ಪರೀಕ್ಷೆ ತಯಾರಿ ನಡೆಸಿದ ಇವರು ಕಳೆದ ಮೇ ೨೦೨೫ ರಲ್ಲಿ ನಡೆಸಿದ ಸಿಎ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಹೊರಹೊಮ್ಮಿದ್ದಾರೆ. ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಗ್ರಾಮದ ತಂದೆ ಬಸಪ್ಪ ತಾಯಿ ಮಹಾಲಕ್ಷಿö್ಮÃ ಇವರ ಸುಪತ್ರರಾದ ಇವರು ಜೂನ್ ೧೯ ರಂದು ೨೦೦೮ ರಲ್ಲಿ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ಸಂಗೀತ ವಿದ್ಯಾಭ್ಯಾಸಕ್ಕಾಗಿ ಪ್ರವೇಶಾತಿ ಪಡೆದು ತಮ್ಮ ಪ್ರೌಢ ಶಿಕ್ಷಣವನ್ನು ಪಿಪಿಜಿ ಪ್ರೌಢಶಾಲೆಯಲ್ಲಿ ಪೂರ್ಣಗೊಳಿ ಸಿರುತ್ತಾರೆ. ನಂತರ ನಗರದ ಕೆವಿಎಸ್‌ಆರ್ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದಲ್ಲಿ ತಮ್ಮ ಪದವಿ ಪೂರ್ವ ಶಿಕ್ಷಣ ಪಡೆದು ಬಿಕಾಂ ಪದವಿಗಾಗಿ ಗದುಗಿನ ಜ. ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಪ್ರವೇಶಿಸಿ ೨೦೧೫-೧೬ ನೇ ಸಾಲಿನಲ್ಲಿ ಬಿಕಾಂ ಪದವಿಯನ್ನು ಪಡೆದಿರುತ್ತಾರೆ. ನಂತರ ೨೦೧೬ ರಲ್ಲಿ ಚಾರ್ಟೆಡ್ ಅಕೌಂಟೆAಟ್ ಪದವಿಗೆ ಪ್ರವೇಶ ಪಡೆದು ೩ ವರ್ಷಗಳ ವೃತ್ತಿಪರ ತರಬೇತಿಯನ್ನು ಎ. ರಾಘವೇಂದ್ರ ರಾವ್ ಅಂಡ್ ಅಸೋಸಿಯೇಟ್ಸ್, ಲೆಕ್ಕ ಪರಿಶೋಧನ ಸಂಸ್ಥೆಯ ಪ್ರಾಂಶುಪಾಲರಾದ ಆನಂದ್ ಪೋತ್ನಿಸ್ ಇವರಲ್ಲಿ ವೃತ್ತಿಪರ ತರಬೇತಿಯನ್ನು ಪಡೆದು ಚಾರ್ಟೆಡ್ ಅಕೌಂಟೆAಟ್ ಪರೀಕ್ಷೆಯ ತಯಾರಿ ನಡೆಸಿದ ಇವರು ಸಿಎ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಹೊರಹೊಮ್ಮಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನನ್ನ ಈ ಯಶಸ್ವಿಗೆ ಪ್ರೋತ್ಸಾಹ ಮತ್ತು ಆಶ್ರಯ ನೀಡಿದ ವೀರೇಶ್ವರ ಪುಣ್ಯಶ್ರಮದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಕಲ್ಲಯ್ಯಜ್ಜನವರಿಗೆ ಹಾಗೂ ಆಶ್ರಮದ ಹಿರಿಯ-ಕಿರಿಯ ಗುರು ಬಂಧುಗಳಿಗೆ, ನಮ್ಮ ಕುಟುಂಬ ವರ್ಗದವರಿಗೆ, ನನ್ನ ಸಹಪಾಠಿಗಳು ಮತ್ತು ಸ್ನೇಹಿತರಿಗೆ ನಾನು ಯಾವತ್ತು ಚಿರಋಣಿ ಎಂದು ಹೇಳಿದರು.