ʻಸ್ವಚ್ಛ ಸರ್ವೇಕ್ಷಣಾ 2024-25ʼ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ರಾಷ್ಟ್ರಪತಿ

ʻಸ್ವಚ್ಛ ಸರ್ವೇಕ್ಷಣಾ 2024-25ʼ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ರಾಷ್ಟ್ರಪತಿ

ಇಂದೋರ್, ಸೂರತ್, ನವೀ ಮುಂಬೈ ಪ್ರತಿಷ್ಠಿತ ʻಸೂಪರ್ ಸ್ವಚ್ಛ ಲೀಗ್ʼಗೆ ಪ್ರವೇಶಿಸಿವೆಅಹ್ಮದಾಬಾದ್, ಭೋಪಾಲ್ ಮತ್ತು ಲಕ್ನೋ ಭಾರತದ ಹೊಸ ʻಸ್ವಚ್ಛ ನಗರʼಗಳಾಗಿ ಹೊರಹೊಮ್ಮಿವೆರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 34 ನಗರಗಳಿಗೆ ʻಭರವಸೆಯ ಸ್ವಚ್ಛ ನಗರಗಳುʼ ಪ್ರಶಸ್ತಿʻಸ್ವಚ್ಛ ನಗರ ಪಾಲುದಾರಿಕೆʼ ಆರಂಭಿಸಿದ ಸರ್ಕಾರ: ಕಳಪೆ ಸಾಧನೆ ತೋರಿದ ನಗರಗಳಿಗೆ ಶ್ರೇಷ್ಠ ನಗರಗಳು ಮಾರ್ಗದರ್ಶನ ನೀಡಲಿವೆ ʻವೇಗವರ್ಧಿತ ಡಂಪ್ಸೈಟ್ (ಕಸದ ರಾಶಿ ಸ್ಥಳ) ಪರಿಹಾರ ಕಾರ್ಯಕ್ರಮʼವು ನಗರ ತ್ಯಾಜ್ಯ ನಿರ್ವಹಣೆಗೆ ವೇಗ ನೀಡಲಿದೆ: ಕೇಂದ್ರ ಸಚಿವರುಫಲಿತಾಂಶ ಹೊರಬಿದ್ದಿದೆ! ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂಒಎಚ್ಯುಎ) ಆಯೋಜಿಸಿದ್ದ ʻಸ್ವಚ್ಛ ಸರ್ವೇಕ್ಷಣಾ 2024-25ʼ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಮತ್ತು ಸಹಾಯಕ ಸಚಿವರಾದ ಶ್ರೀ ತೋಖಾನ್ ಸಾಹು ಅವರ ಉಪಸ್ಥಿತಿಯಲ್ಲಿ 23 ʻಸೂಪರ್ ಸ್ವಚ್ಛ ಲೀಗ್ ನಗರʼಗಳು ಪ್ರಶಸ್ತಿ ಸ್ವೀಕರಿಸಿದವು. ಭಾರತದಲ್ಲಿ ಹೊಸ ತಲೆಮಾರಿನ ಸ್ವಚ್ಛ ನಗರಗಳು ಉದಯಿಸಿದ್ದು ಅಹಮದಾಬಾದ್, ಭೋಪಾಲ್ ಮತ್ತು ಲಕ್ನೋ ಅಗ್ರ ʻಸ್ವಚ್ಛ ನಗರʼಗಳಾಗಿ ಹೊರಹೊಮ್ಮಿವೆ. 43 ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಮಹಾಕುಂಭ ಮೇಳಕ್ಕೆ ವಿಶೇಷ ಮಾನ್ಯತೆ ನೀಡಲಾಗಿದೆ. ಪ್ರತಿಷ್ಠಿತ ʻಸ್ವಚ್ಛ ಸರ್ವೇಕ್ಷಣಾ 2024-25ʼ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಅವರು ಪ್ರಯಾಗ್ ರಾಜ್ ಗೆ ʻಅತ್ಯುತ್ತಮ ಗಂಗಾ ಪಟ್ಟಣʼ ಪ್ರಶಸ್ತಿಯನ್ನು ಪ್ರದಾನ ಮಾಡಿದರು, ಸಿಕಂದರಾಬಾದ್ ಕಂಟೋನ್ಮೆಂಟ್ ಅನ್ನು ಅದರ ಅನುಕರಣೀಯ ನೈರ್ಮಲ್ಯ ಪ್ರಯತ್ನಗಳಿಗಾಗಿ ಅತ್ಯುತ್ತಮ ಕಂಟೋನ್ಮೆಂಟ್ ಮಂಡಳಿ ಎಂದು ಗೌರವಿಸಲಾಯಿತು

. ನೈರ್ಮಲ್ಯ ಕಾರ್ಮಿಕರ ಸುರಕ್ಷತೆ ಮತ್ತು ಘನತೆಗೆ ನೀಡಿದ ಅತ್ಯುತ್ತಮ ಬದ್ಧತೆಗಾಗಿ ಜಿವಿಎಂಸಿ ವಿಶಾಖಪಟ್ಟಣಂ, ಜಬಲ್ ಪುರ್ ಮತ್ತು ಗೋರಕ್ ಪುರ ನಗರಗಳನ್ನು ʻಅತ್ಯುತ್ತಮ ಸಫಾಯಿಮಿತ್ರ ಸುರಕ್ಷಿತ ನಗರʼ ಎಂದು ಘೋಷಿಸಲಾಯಿತು. ಅಂದಾಜು 66 ಕೋಟಿ ಜನರು ಭೇಟಿ ನೀಡಿದ ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾಗಮವಾದ ಮಹಾಕುಂಭದ ಸಂದರ್ಭದಲ್ಲಿ ಅಸಾಧಾರಣ ನಗರ ತ್ಯಾಜ್ಯ ನಿರ್ವಹಣೆಗಾಗಿ ಉತ್ತರ ಪ್ರದೇಶ ಸರ್ಕಾರ, ಪ್ರಯಾಗ್ರಾಜ್ ಮೇಳ ಅಧಿಕಾರಿ ಮತ್ತು ಪ್ರಯಾಗ್ರಾಜ್ ನಗರಸಭೆಗೆ ವಿಶೇಷ ಮಾನ್ಯತೆ ನೀಡಲಾಯಿತು.

ಈ ವರ್ಷದ ʻಸ್ವಚ್ಛ ಸರ್ವೇಕ್ಷಣಾʼ ದೊಡ್ಡ ನಗರಗಳ ನೀತಿ ಚೌಕಟ್ಟನ್ನು ಪರಿಷ್ಕರಿಸಿರುವುದು ಮತ್ತು ಸುವ್ಯವಸ್ಥಿತಗೊಳಿಸಿರುವುದು ಮಾತ್ರವಲ್ಲದೆ, ಸಣ್ಣ ನಗರಗಳಿಗಾಗಿ ಅದನ್ನು ಸರಳೀಕರಿಸಿದೆ. ಆ ಮೂಲಕ ಸ್ವಚ್ಛತೆಯ ಏಣಿಯಲ್ಲಿ ಸ್ಪರ್ಧಿಸಲು ಮತ್ತು ಮೇಲೇರಲು ಸಣ್ಣ ನಗರಗಳನ್ನು ಪ್ರೋತ್ಸಾಹಿಸಲಾಗಿದೆ. ಸಮೀಕ್ಷೆಯಲ್ಲಿ ಸಣ್ಣ ನಗರಗಳು ದೊಡ್ಡ ನಗರಗಳೊಂದಿಗೆ ಸಮಾನ ಅವಕಾಶವನ್ನು ಕಂಡುಕೊಂಡಿವೆ. ‘ಒಂದು ನಗರ, ಒಂದು ಪ್ರಶಸ್ತಿ’ ತತ್ವವನ್ನು ಅನುಸರಿಸಿ, ಪ್ರತಿ ರಾಜ್ಯದಿಂದ ಉತ್ತಮವಾಗಿ ಕಾರ್ಯನಿರ್ವಹಿಸುವ ನಗರಗಳನ್ನು ʻಭರವಸೆಯ ಸ್ವಚ್ಛ ನಗರʼಗಳಾಗಿ ಗುರುತಿಸಲಾಗಿದೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 34 ನಗರಗಳು ಈ ವಿಶಿಷ್ಟತೆಯನ್ನು ಗಳಿಸಿದ್ದು,

ನಗರ ಸ್ವಚ್ಛತೆ ಮತ್ತು ನೈರ್ಮಲ್ಯ ಉತ್ಕೃಷ್ಟತೆಯಲ್ಲಿ ಗಮನಾರ್ಹ ಪ್ರಗತಿಯನ್ನು ಪ್ರದರ್ಶಿಸಿವೆ.ಈ ಸಂದರ್ಭದಲ್ಲಿ ಮಾತನಾಡಿದ ಗೌರವಾನ್ವಿತ ರಾಷ್ಟ್ರಪತಿಗಳು, “ಬಳಕೆ ಕಡಿಮೆ ಮಾಡುವುದು, ಸಂಸ್ಕರಿಸುವುದು ಮತ್ತು ಮರುಬಳಕೆ ಮಾಡುವುದು (3 ಆರ್) ವಿಧಾನವನ್ನು ಉತ್ತೇಜಿಸಿದ್ದಕ್ಕಾಗಿ ಸಚಿವಾಲಯವನ್ನು ಶ್ಲಾಘಿಸಿದರು. ಜೊತೆಗೆ, ತಮಗೆ ನೀಡಿದ ತ್ಯಾಜ್ಯದಿಂದ ತಯಾರಿಸಲಾದ ವಿಶೇಷ ಸ್ಮರಣಿಕೆಯನ್ನು ರಾಷ್ಟ್ರಪತಿಗಳು ಶ್ಲಾಘಿಸಿದರು

. “ವೇಸ್ಟ್ ಈಸ್ ಬೆಸ್ಟ್” ಎಂಬುದು ಈಗಿನ ಮಂತ್ರವಾಗಿದೆ ಮತ್ತು ಇದು ಆರ್ಥಿಕತೆಯಲ್ಲಿ ಆವರ್ತನೆಗೆ ಬಲವನ್ನು ನೀಡುತ್ತದೆ ಎಂದು ಅವರು ಹೇಳಿದರು. ಯುವಕರನ್ನು ಸಬಲೀಕರಣಗೊಳಿಸುವಲ್ಲಿ, ಹಸಿರು ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಮತ್ತು ಉದ್ಯಮಶೀಲ ಅವಕಾಶಗಳನ್ನು ಸೃಷ್ಟಿಸುವಲ್ಲಿ, ಸ್ವಸಹಾಯ ಗುಂಪುಗಳನ್ನು ತೊಡಗಿಸಿಕೊಳ್ಳುವಲ್ಲಿ ತ್ಯಾಜ್ಯದ ಪಾತ್ರವನ್ನು ಅವರು ಎತ್ತಿ ತೋರಿದರು. “ನಗರಗಳು ನಮ್ಮ ಸ್ವಾಭಿಮಾನ ಮತ್ತು ಸಂಸ್ಕಾರದ ಭಾಗವಾಗಿ ಆವರ್ತನೆಯ ಆರ್ಥಿಕತೆ ಮತ್ತು ಸ್ವಚ್ಚತೆಯ ತತ್ವಗಳನ್ನು ಅಳವಡಿಸಿಕೊಂಡಿರುವುದನ್ನು ನೋಡಿ ನನಗೆ ಸಂತೋಷವಾಗಿದೆ,ʼʼ ಎಂದರು. ಗೌರವಾನ್ವಿತ ರಾಷ್ಟ್ರಪತಿಗಳು 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ನಗರಗಳು ಸ್ವಚ್ಛತೆಯ ಅತ್ಯುತ್ತಮ ಮಾನದಂಡಗಳನ್ನು ಸ್ಥಾಪಿಸಿವೆ ಎಂದು ಶ್ಲಾಘಿಸಿದರು.

ಶಾಲಾ ಮಟ್ಟದ ಉಪಕ್ರಮಗಳು, ಮೂಲದಲ್ಲೇ ಕಸದ ವಿಂಗಡಣೆ ನವೋದ್ಯಮಗಳ ಉಪಕ್ರಮಗಳು, ಶೂನ್ಯ ತ್ಯಾಜ್ಯ ಕಾಲೋನಿಗಳು ಸ್ವಚ್ಛ ಭಾರತದ ಸಂಕಲ್ಪವನ್ನು ಹೇಗೆ ಬಲಪಡಿಸುತ್ತಿವೆ ಎಂಬುದನ್ನು ಅವರು ಶ್ಲಾಘಿಸಿದರು. “2047ರ ವಿಕಸಿತ ಭಾರತವು ವಿಶ್ವಕ್ಕೆ ಅನುಕರಣೀಯವಾಗಲಿದೆ” ಎಂದು ಹೇಳುವ ಮೂಲಕ ರಾಷ್ಟ್ರಪತಿಗಳು ತಮ್ಮ ಮಾತು ಮುಗಿಸಿದರು. ಸ್ವಚ್ಛ ನಗರ ಸಹಭಾಗಿತ್ವ ಉಪಕ್ರಮಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಅವರು, ಸಮಾನಮನಸ್ಕ ಕಲಿಕೆಯ ಮಹತ್ವವನ್ನು ಒತ್ತಿ ಹೇಳಿದರು. ಎಲ್ಲಾ ಜನಸಂಖ್ಯಾ ವಿಭಾಗಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಎಲ್ಲಾ 78 ನಗರಗಳು ಆಯಾ ರಾಜ್ಯಗಳಿಂದ ತಲಾ 1 ಕಳಪೆ ಪ್ರದರ್ಶನ ನೀಡುವ ನಗರವನ್ನು ದತ್ತು ತೆಗೆದುಕೊಂಡು ಮಾರ್ಗದರ್ಶನ ನೀಡುತ್ತವೆ ಎಂದು ಅವರು ಹೇಳಿದರು. “ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಅಗತ್ಯವಿದೆ,ʼʼ ಎಂದು ಸಚಿವರು ಒತ್ತಿ ಹೇಳಿದರು. ʻಪ್ರತಿಯೊಬ್ಬರೂ ಸ್ವಚ್ಛʼ ಎಂಬ ಮಂತ್ರವನ್ನು ಅನುಸರಿಸಿ, “ವಿಜೇತ ನಗರಗಳು ಇತರ ನಗರಗಳಿಗೆ ಮಾರ್ಗದರ್ಶನ ನೀಡುತ್ತವೆ, ಬೆಂಬಲ ನೀಡುತ್ತವೆ ಮತ್ತು ದಾರಿಯನ್ನು ಮುನ್ನಡೆಸುತ್ತವೆ. ಕಡಿಮೆ ಕಾರ್ಯಕ್ಷಮತೆ ಹೊಂದಿರುವ ನಗರಗಳನ್ನು ಅಗ್ರಸ್ಥಾನಕ್ಕೆ ತರುವ ಸಮಯ ಇದು” ಎಂದು ಹೇಳಿದರು. ವೇಗವರ್ಧಿತ ಡಂಪ್ಸೈಟ್‌(ಕಸದ ರಾಶಿ ಸ್ಥಳ)ಪರಿಹಾರ ಕಾರ್ಯಕ್ರಮವನ್ನು ಘೋಷಿಸಿದ ಕೇಂದ್ರ ಸಚಿವರು, “ಆಗಸ್ಟ್ 15, 2025ರಿಂದ ಪ್ರಾರಂಭವಾಗುವ ಈ 1 ವರ್ಷದ ವಿಶೇಷ ಕಾರ್ಯಕ್ರಮವು ಪಾರಂಪರಿಕ ತ್ಯಾಜ್ಯ ಪರಿಹಾರವನ್ನು ತ್ವರಿತಗೊಳಿಸಲು ಮಾತ್ರವಲ್ಲದೆ, ಬೃಹತ್ ನಗರಗಳಲ್ಲಿನ ಸ್ಥಳಾವಕಾಶವನ್ನು ವಿಶಾಲಗೊಳಿಸಲು ಸಹಾಯ ಮಾಡುತ್ತದೆ.

ಜೊತೆಗೆ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ” ಎಂದು ಹೇಳಿದರು.ಪ್ರತಿನಿಧಿಗಳನ್ನು ಸ್ವಾಗತಿಸಿದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ಶ್ರೀನಿವಾಸ್ ಕಾಟಿಕಿತ್ತಲ ಅವರು, ಕಳೆದ ದಶಕದಲ್ಲಿ ಸ್ವಚ್ಛ ಭಾರತ ಅಭಿಯಾನದ ಪರಿವರ್ತನಾತ್ಮಕ ಪಯಣದ ಬಗ್ಗೆ ವಿವರಿಸಿದರು.

ಸ್ವಚ್ಛತೆ ಮತ್ತು ನೈರ್ಮಲ್ಯವು ಹೇಗೆ ಕೇಂದ್ರ ಸ್ಥಾನವನ್ನು ಪಡೆದುಕೊಂಡಿದೆ, ನಾಗರಿಕರ ಮೌಲ್ಯಗಳು ಮತ್ತು ದೈನಂದಿನ ಜೀವನದ ಅಂತರ್ಗತ ಭಾಗವಾಗಿದೆ – ಅವರ ಸ್ವಾಭಿಮಾನ ಮತ್ತು ಸಂಸ್ಕಾರದಲ್ಲಿ ಹೇಗೆ ಆಳವಾಗಿ ಬೇರೂರಿದೆ ಎಂಬ ಬಗ್ಗೆ ಅವರು ಗಮನ ಸೆಳೆದರು. ನಗರಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೇರೇಪಿಸಿದ ಪ್ರಬಲ ಸ್ಪರ್ಧಾತ್ಮಕ ಸಾಧನವಾಗಿ ʻಸ್ವಚ್ಛ ಸರ್ವೇಕ್ಷಣ್ʼನ ಪಾತ್ರವನ್ನು ಶ್ರೀ ಕಾಟಿಕಿತ್ತಲ ಅವರು ಎತ್ತಿ ತೋರಿದರು. 10 ಹೊಸ ನಿಯತಾಂಕಗಳು ಮತ್ತು ಐದು ವಿಭಿನ್ನ ಜನಸಂಖ್ಯೆ ವಿಭಾಗಗಳನ್ನು ಒಳಗೊಂಡ ಪರಿಷ್ಕೃತ ಮಾನದಂಡವು ಸಣ್ಣ ನಗರಗಳಿಗೆ ದೊಡ್ಡ ನಗರಗಳೊಂದಿಗೆ ಸಮಾನವಾಗಿ ಸ್ಪರ್ಧಿಸಲು ಅನುವು ಮಾಡಿಕೊಟ್ಟಿದೆ, ಅಂತರ್ಗತ ಮತ್ತು ವ್ಯಾಪಕ ಪ್ರಗತಿಯನ್ನು ಉತ್ತೇಜಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ʻಸ್ವಚ್ಛ ಭಾರತ ಅಭಿಯಾನʼದ 10 ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಮುಂದಿನ ದಶಕಕ್ಕೆ ಮಾತ್ರವಲ್ಲ, 2047ರ ವೇಳೆಗೆ ʻವಿಕಸಿತ ಭಾರತʼಕ್ಕಾಗಿ ಮಾರ್ಗಸೂಚಿಯನ್ನು ನಿಗದಿಪಡಿಸುವ ಸಮಯವೂ ಇದಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮೆಚ್ಚುಗೆಯ ಸಂಕೇತವಾಗಿ ಕೇಂದ್ರ ಸಚಿವರು ಸೊಗಸಾದ ಸಾರಂಗಿಯನ್ನು ಉಡುಗೊರೆಯಾಗಿ ನೀಡಿದರು. ಈ ಸ್ಮರಣಿಕೆಯು ತ್ಯಜಿಸಿದ ವಸ್ತುಗಳನ್ನು ಅರ್ಥಪೂರ್ಣ, ಕಲಾತ್ಮಕ ಸೃಷ್ಟಿಗಳಾಗಿ ಪರಿವರ್ತಿಸುವ ಮೂಲಕ ‘ಕಸದಿಂದ ರಸʼ ನೀತಿಗಳಿಗೆ ಉದಾಹರಣೆಯಾಗಿದೆ – ಸುಸ್ಥಿರತೆಯನ್ನು ಕರಕುಶಲತೆಯೊಂದಿಗೆ ಸಂಯೋಜಿಸಿದೆ.ʻಸ್ವಚ್ಛ ಸರ್ವೇಕ್ಷಣಾ-2024-25ʼರ ಫಲಿತಾಂಶಗಳ ಡ್ಯಾಶ್ ಬೋರ್ಡ್ ಅನ್ನು ಈ ಸಂದರ್ಭದಲ್ಲಿ ಡಿಜಿಟಲ್ ಆಗಿ ಪ್ರಾರಂಭಿಸಲಾಯಿತು, ಇದು ಶ್ರೇಯಾಂಕಗಳು ಮತ್ತು ಸಾಧನೆಗಳ ಸಂವಾದಾತ್ಮಕ ಅವಲೋಕನವನ್ನು ನೀಡುತ್ತದೆ. ʻಸ್ವಚ್ಛ ಸರ್ವೇಕ್ಷಣಾ-2024-25ʼರ ಪ್ರಮುಖ ಮುಖ್ಯಾಂಶಗಳು ಮತ್ತು ʻಸೂಪರ್ ಸ್ವಚ್ಛ ಲೀಗ್ʼ ನಗರಗಳ ಸಾಧನೆಗಳನ್ನು ಆಕರ್ಷಕ ಶ್ರವಣ-ದೃಶ್ಯ ಪ್ರಸ್ತುತಿಗಳ ಮೂಲಕ ಪ್ರದರ್ಶಿಸಲಾಯಿತು. ರಾಷ್ಟ್ರವ್ಯಾಪಿ ಸ್ವಚ್ಚತಾ ಆಂದೋಲನದ ಉತ್ಸಾಹ ಮತ್ತು ಪ್ರಮಾಣವನ್ನು ಸೆರೆಹಿಡಿಯಲಾಯಿತು.

Leave a Reply

Your email address will not be published. Required fields are marked *