
ಸುವರ್ಣ ಸಾಧಕಿ ಡಾ. ಸಿ. ಮಹಾಲಕ್ಷ್ಮೀ : ವೀರಶೈವ ಲಿಂಗಾಯತ ಸಮಾಜದಿಂದ ಸನ್ಮಾನ
ಗಂಗಾವತಿ: ರಾಜ್ಯದಲ್ಲಿ ಏಷ್ಯಾ ನೆಟ್ ಸುವರ್ಣ ಟಿವಿ ಮತ್ತು ಕನ್ನಡಪ್ರಭ ಸಂಸ್ಥೆ ನೀಡುವ ಸುವರ್ಣ ಸಾಧಕಿ 2025 ಪ್ರಶಸ್ತಿಗೆ ಗಂಗಾವತಿ ನಗರದ ಪತ್ರಕರ್ತೆ, ಕಲಾವಿದೆ, ಸಮಾಜ ಸೇವಕಿ ಡಾ. ಸಿ. ಮಹಾಲಕ್ಷ್ಮಿ ಆಯ್ಕೆಯಾಗಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾಗಿದ್ದರು. ಇವರಿಗೆ ಒಲಿದು ಬಂದಿರುವ ಪ್ರಶಸ್ತಿಗೆ ನಗರದ ಹಲವಾರು ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು, ಸಮಾಜ ಸೇವಕರು ಪ್ರಸಂಶೆ ವ್ಯಕ್ತ ಪಡಿಸಿದ್ದಾರೆ. ಇವರಿಗೆ ವೀರಶೈವ ಲಿಂಗಾಯತ ಸಮಾಜದಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು..
ಈ ಸಂದರ್ಭದಲ್ಲಿ ಮಾಜಿ ಕಾಡಾ ಅಧ್ಯಕ್ಷ ಬಿ.ಹೆಚ್.ಎಂ.ತಿಪ್ಪೇರುದ್ರಸ್ವಾಮಿ ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಎಸ್.ವಿ.ಪಾಟೀಲ್ ಗುಂಡೂರು, ಸಂಗಯ್ಯಸ್ವಾಮಿ ಸಂಶಿಮಠ,ಎಸ್.ಬಿ.ಹಿರೇಮಠ .ಕೆ.ಎಂ.ಶರಣಯ್ಯಸ್ವಾಮಿ, ವಿಜಯ ಲಕ್ಷ್ಮೀ ಸೂಗೂರು ಸೇರಿದಂತೆ ಇತರರು ಉಪಸ್ಥಿತರಿದ್ದರು