
ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸನ್ಮಾನ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗದಗ ವಿಭಾಗಕ್ಕೆ ನೂತನ ವಿಭಾಗೀಯ ನಿಯಂತ್ರಣಾಧಿಕಾರಿ ಆಗಿ ಅಧಿಕಾರ ವಹಿಸಿಕೊಂಡ ಶಶಿಧರ್ ಚನ್ನಪ್ಪಗೌಡ ಪಾಟೀಲ ಇವರನ್ನು ಸನ್ಮಾನಿಸಲಾಯಿತು.
ಗದಗ ವಿಭಾಗದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಶಶಿಧರ್ ಪಾಟೀಲ ಇವರಿಗೆ ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಡಿ.ಪ್ರಸಾದ್, ಎನ್.ಟಿ.ಸಂಕನಕಲ್ಲ್, ಎಸ್.ಕೆ.ಭಜಂತ್ರಿ, ಪಿ.ಎನ್.ವಡ್ಡರ, ಎಸ್.ಕೆ.ಪೂಜಾರ, ವಾಯ್.ವಿ.ಪಾಟೀಲ, ಡಿ.ಎಚ್.ತಳವಾರ ಸೇರಿದಂತೆ ಇನ್ನು ಹಲವು ಸಿಬ್ಬಂಧಿಗಳು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ✍️ಚಂದ್ರಶೇಖರ ಸೋಮಣ್ಣವರ
