ಕೊಪ್ಪಳ : ಗಂಗಾವತಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಇಕ್ಬಾಲ್ ಅನ್ಸಾರಿ ಅವರಿಂದ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ ಯುವ ಮುಖಂಡ ಹನುಮೇಶ, ಅಭಿಪ್ರಾಯ ವ್ಯಕ್ತಪಡಿಸಿದರು.

ಬುಧವಾರ ತಾಲೂಕಿನ ಇಂದರಗಿ ಗ್ರಾಮದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಅಭಿಮಾನಿ ಹಾಗೂ ಕಾಂಗ್ರೆಸ್ ಯುವ ಮುಖಂಡರಾದ ಹನುಮೇಶ್ ಇಂದರಗಿ ಮಾತನಾಡಿದ, ಇಕ್ಬಾಲ್ ಅನ್ಸಾರಿ ರವರು ಎರಡು ಬಾರಿ ಶಾಸಕರಾಗಿ ಗಂಗಾವತಿ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಈಗಲೂ ಗಂಗಾವತಿ ಕ್ಷೇತ್ರದ ಹಳ್ಳಿಗಳಲ್ಲಿ ಅವರ ಅಭಿವೃದ್ಧಿ ಮತ್ತು ಸರ್ಕಾರದಿಂದ ತಂದ ಅನುದಾನದಿಂದ ಆದ ಕಾಮಗಾರಿಗಳನ್ನ ನೋಡಬಹುದಾಗಿದೆ. 2023 ರಲ್ಲಿ ನಡೆದ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ್ ರೆಡ್ಡಿ ರವರು ಹಣ ಬಲದಿಂದಿ ಅಲ್ಪ ಮತಗಳಿಂದ ಅವರು ಸೋಲು ಕಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಒಮ್ಮತ ಇಲ್ಲದೆ ಇರುವುದು ಹಾಗೂ ಸಣ್ಣಪುಟ್ಟ ತಪ್ಪುಗಳಿಂದ ಇಕ್ಬಾಲ್ ಅನ್ಸಾರಿ ರವರು ಸೋಲು ಬೇಕಾದ ಅನಿವಾರ್ಯವಾಯಿತು.
ಅದು ಅನ್ಸಾರಿ ರವರ ಸೋಲಲ್ಲ ಕಾರ್ಯಕರ್ತರ ಸೋಲಾಗಿದೆ. ಗಂಗಾವತಿ ಕ್ಷೇತ್ರದಲ್ಲಿ ಗಾಲಿ ಜನಾರ್ದನ್ ರೆಡ್ಡಿ ರವರು ಬಡವರಿಗೆ ಡಬಲ್ ಬೆಡ್ ರೂಮ್ ಮನೆ ಕಟ್ಟಿಸಿ ಕೊಡುತ್ತೇನೆ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡುತ್ತೇನೆ, ಇರಕಲ್ಲಗಡಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯನ್ನ ನೀರಾವರಿ ಕ್ಷೇತ್ರ, ಕರಡಿ ದಾಮ ಸೇರಿದಂತೆ ಅಭಿವೃದ್ಧಿ ಮಾಡುವುದಾಗಿ ಭರವಸೆ ಕೊಟ್ಟಿದ್ದು ಅದು ಇಂದು ಉಷಿಯಾಗಿದೆ. ಈಗ ಗಂಗಾವತಿ ಕ್ಷೇತ್ರದ ಜನರಿಗೆ ಸತ್ಯ ಗೊತ್ತಾಗಿದೆ ಗಂಗಾವತಿ ಕ್ಷೇತ್ರವನ್ನ ಅಭಿವೃದ್ಧಿ ಕ್ಷೇತ್ರವನ್ನಾಗಿ ಮಾಡಿದ್ದು ಯಾರು.. ಸುಳ್ಳು ಹೇಳಿದವರು ಯಾರು ಎಂದು. ಸದ್ಯ ಗಂಗಾವತಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಆಸೆಯಂತೆ ಈ ಬಾರಿ ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರಾದ ಇಕ್ಬಾಲ್ ಅನ್ಸಾರಿ ರವರಿಗೆ ಟಿಕೆಟ್ ಕೊಟ್ರೆ ಗೆಲವು ಸುಲಭವಾಗುತ್ತೆ. ಸುಖ ಸುಮ್ಮನೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಇವರಿಗೆ ಕೊಡಬೇಕು ಎಂದು ಅಭಿಯಾನ ಮಾಡುತ್ತಿರುವುದು ಸರಿಯಲ್ಲ. ಇಕ್ಬಾಲ್ ಅನ್ಸಾರಿ ರವರ ಪರವಾಗಿ ನಾವು ಸ್ಟೇಟಸ್ ಅಥವಾ ಸುದ್ದಿ ಶೇರ್ ಮಾಡಿದರೆ ನಮ್ಮವರಿಂದಲೇ ನಮಗೆ ದೂರವಾಣಿ ಮೂಲಕ ಕರೆ ಮಾಡಿ ಇಕ್ಬಾಲ್ ಅನ್ಸಾರಿ ರವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಲ್ಲ ಎಂದು ಹೇಳುತ್ತಾರೆ.
ನಮಗೆ ಸಂಪೂರ್ಣ ವಿಶ್ವಾಸವಿದೆ ರಾಜ್ಯದ ಮುಖ್ಯಮಂತ್ರಿಗಳಾ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಕಾರ್ಯಕರ್ತರ ಆಸೆಯಂತೆ ಈ ಬಾರಿ ಇಕ್ಬಾಲ್ ಅನ್ಸಾರಿ ರವರಿಗೆ ಟಿಕೆಟ್ ನೀಡಿದರೆ ಖಂಡಿತ ಶಾಸಕರಾಗಿ ಕ್ಷೇತ್ರವನ್ನ ಅಭಿವೃದ್ಧಿ ಮಾಡುತ್ತಾರೆ. ಗಂಗಾವತಿ ಕ್ಷೇತ್ರವನ್ನ ಅಭಿವೃದ್ಧಿ ಮಾಡುವುದಾದರೆ ಅದು ಇಕ್ಬಾಲ್ ಅನ್ಸಾರಿ ಅವರಿಂದ ಮಾತ್ರ ಎಂದರು. ಈ ಸಂದರ್ಭದಲ್ಲಿ ಅನ್ಸಾರಿ ರವರ ಅಭಿಮಾನಿಗಳು ಇತರರು ಉಪಸ್ಥಿತರಿದ್ದರು.