ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕಟಿಂಗ್ ಮತ್ತು ವಸ್ತ್ರದಾನ ಕಾರ್ಯಕ್ರಮ:

ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕಟಿಂಗ್ ಮತ್ತು ವಸ್ತ್ರದಾನ ಕಾರ್ಯಕ್ರಮ:

ಗಂಗಾವತಿ:ಶ್ರೀ ಕೋಟೆ ಆಂಜನೇಯ ದೇವಸ್ಥಾನದ ಹತ್ತಿರದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮ್ಯಾನ್ಸ ಪಾರ್ಲರ್ ವತಿಯಿಂದ ಸತತವಾಗಿ 28 ವರ್ಷಗಳ ಕಾಲ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ನಗರದ ಅಂದ ಮಕ್ಕಳಿಗೆ, ವೃದ್ಧರಿಗೆ, ಬುದ್ಧಿಮಾಂದ್ಯಮಕ್ಕಳಿಗೆ, ನಿರ್ಗತಿಕರಿಗೆ ಸುಮಾರು 700 ನೂರಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಕಟಿಂಗ್ ಮಾಡುತ್ತಾ ಬಂದಿದ್ದಾರೆ, ಹಾಗೂ ಮಹಿಳೆಯರಿಗೆ ಉಚಿತವಾಗಿ ವಸ್ತ್ರದಾನ (ಸೀರೆ) ಮತ್ತು ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ

ಸಮಾಜದಲ್ಲಿ ನಮ್ಮದೇ ಆದ ಒಂದು ಸಮಾಜ ಸೇವೆ ಇರಲಿ ಎಂಬ ಉದ್ದೇಶದಿಂದ ಉಚಿತವಾಗಿ ಸಾರ್ವಜನಿಕರಿಗೆ ಹಾಗೂ ಬುದ್ದಿ ಮಾಧ್ಯ ಮಕ್ಕಳಿಗೆ ಕಟೀಗ್ ಮಾಡಲಾಯಿತು ಎಂದು ಮಾಲೀಕರು ಮಾಧ್ಯಮದೊಂದಿಗೆ ಮಾತನಾಡಿ ಹೇಳಿದರು.

ಈ ಸಂದರ್ಭದಲ್ಲಿ ಸವಿತಾ ಸಮಾಜದ ನಗರ ಘಟಕ ಅಧ್ಯಕ್ಷರಾದ ಪಿ.ಸಂತೋಷ ಹಾಗೂ ಕುಟುಂಬದವರು ಈ ಕಾರ್ಯಕ್ರಮ ವನ್ನು ನೆರವೇರಿಸಿದರು,

ಸಂದರ್ಭದಲ್ಲಿ ಪಿ.ಸಚಿನ್‌, ಕೆ.ಎಸ್. ಮಾರೇಶ್, ಕುಮಾರ, ಕಾಳಿಂಗ, ಅಭಿ, ರಾಮು, ಶಿವಕುಮಾರ್, ಆಂಜನೇಯ, ಲಕ್ಷ್ಮಣ, ಸಾಯಿ, ಹೆಚ್.ಗೋಪಾಲ, ಇ. ತಾಯಪ್ಪ, ಮೋಹನ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *