ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಅಭಿವೃದ್ಧಿಗೆ ಸದಾ ಸಿದ್ಧ -ಲಯನ್ನ ಕ್ಲಬ್

ಶಿಡ್ಲಘಟ್ಟ : ಸಮುದಾಯ ಹಾಗು ಸಂಘ ಸಂಸ್ಥೆಗಳ ಸಹಕಾರದಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿರುವುದು ಮಹತ್ವದ್ದಾಗಿದೆ ಎಂದು ಲಯನ್ಸ್ ಕ್ಲಬ್ ಆಫ್ ಬೆಂಗಳೂರು ವೆಸ್ಟ್ ನ ಅಧ್ಯಕ್ಷ ಹರಿಪ್ರಸಾದ್ ವರ್ದಾ ತಿಳಿಸಿದರು.ತಾಲ್ಲೂಕಿನ ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬೆಂಗಳೂರಿನ ವಿ.ಎಸ್‌.ಕೆ.ಶ್ರೀಫೌಂಡೇಶನ್ ಮತ್ತು ಲಯನ್ಸ್ ಕ್ಲಬ್‌ ಆಫ್ ಬೆಂಗಳೂರು ವೆಸ್ಟ್ ನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ನೋಟ್‌ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಗ್ರಾಮೀಣ ಭಾಗದ ಬಡ ಮಕ್ಕಳ ಶಿಕ್ಷಣಕ್ಕೆ ಎಲ್ಲಾರೂ ಕೈಜೋಡಿಸಬೇಕು ಗ್ರಾಮೀಣಭಾಗದ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ನಗರಪ್ರದೇಶದ ವಿದ್ಯಾರ್ಥಿಗಳೊಂದಿಗೆ ಕಲಿಕೆ, ಉದ್ಯೋಗಗಳಲ್ಲಿ ಸ್ಪರ್ಧೆ ಒಡ್ಡಲು ಸಮಾಜವು ಸಹಕರಿಸಬೇಕಿದೆ ಎಂದು ಹೇಳಿದರು

.ವಿ.ಎಸ್.ಕೆ .ಶ್ರೀಫೌಂಡೇಶನ್‌ನ ಉಪಾಧ್ಯಕ್ಷ ಎಸ್.ಎಲ್.ರಾಮಗೋಪಾಲ ಮಾತನಾಡಿ ಕಲಿಕೆಯು ಕೇವಲ ಅಂಕಪಟ್ಟಿ ಗಳಿಸಲು ಮಾತ್ರವಾಗದೇ ನಮ್ಮ ಬದುಕಿಗೆ ಪೂರಕವಾದ ಶಿಕ್ಷಣವಾಗಬೇಕು ,ಮಕ್ಕಳಲ್ಲಿ ಕಲಿಯುವಲ್ಲಿ ಆಶಕ್ತಿ, ಅಧ್ಯಯನಶೀಲತೆ, ಸಮಯದ ಸದ್ಬಳಕೆ, ಓದುವಲ್ಲಿ ಆತ್ಮವಿಶ್ವಾಸ, ದೃಢಛಲಗಳಂತಹ ಗುಣಗಳು ಸದೃಢವಾಗಬೇಕು ಎಂದು ಅಭಿಪ್ರಾಯಪಟ್ಟರು.ಈ ವೇಳೆ ಕುಂದಲಗುರ್ಕಿ ಗ್ರಾಮಪಂಚಾಯಿತಿಯ 9 ಶಾಲೆಗಳ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ ಪುಸ್ತಕ, ಜಾಮಿಟ್ರಿ ಬಾಕ್ಸ್, ಮತ್ತಿತರ ಲೇಖನಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಎಲ್.ವಿ.ವೆಂಕಟರೆಡ್ಡಿ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ವೆಸ್ಟ್ ನ ಕಾರ್ಯದರ್ಶಿ ಕೆ.ಆರ್.ಎನ್.ಚರಣ್, ಸದಸ್ಯ ವಿಷ್ಣು, ಮಂಜುನಾಥ್ ವರ್ದಾ,ಉಷಾ ಕಂಚಿ, ಚೈತನ್ಯ, ನಾಗಲಕ್ಷ್ಮಿ, ವಿ.ಎಸ್.ಕೆ.ಶ್ರೀ ಫೌಂಡೇಶನ್‌ನ ನಿರ್ದೇಶಕ ಟಿ.ಎಸ್.ಶಿವಸಂಕರ್‌, ಸದಸ್ಯ ಸುದರ್ಶನ್ ಕಂಚಿ, ಶಿಕ್ಷಕ ಸಿ.ಪ್ರಶಾಂತ್‌ಕುಮಾರ್,ಕೆ.ಎಂ.ರಮೇಶ್ ಕುಮಾರ್, ವಿ.ಮಂಜುನಾಥ್, ಎಸ್.ವೆಂಕಟರಾಜು, ಅರ್ಚನಾ, ಕಲ್ಪನಾ, ಶ್ರೀನಿವಾಸ್, ಶಬರೀನ್‌ತಾಜ್, ನರೇಂದ್ರಬಾಬು ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *