
:
ಗದಗ: ಎನ್‌ಐಎ ಪರಪ್ಪರ ಅಗ್ರಹಾರ ಜೈಲಿನ ಮೇಲೆ ದಾಳಿಮಾಡಿದಾಗ ಕೇಂದ್ರ ಕಾರಾಗೃಹದ ಮನೋವೈದ್ಯ ಡಾ|| ನಾಗರಾಜ್, ಉತ್ತರ ವಿಭಾಗದ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಎಎಸ್‌ಐ ಚಾಂದ್ ಪಾಷಾ,ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಜುನೈದ್ ಅಹಮ್ಮದ್‌ನ ತಾಯಿ ಅನೀಸ್ ಫಾತಿಮಾ ಬಂಧಿಸಿ ಇವರಿಂದ ವಶಪಡಿಸಿಕೊಳ್ಳಲಾದ ವಸ್ತುಗಳಿಂದ ರಾಜ್ಯದಲ್ಲಿ ಉಗ್ರರ ಪೋಷಣೆ ಅವ್ಯಾಹತವಾಗಿ ನಡೆದಿದ್ದು ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಗದಗ ಜಿಲ್ಲೆಯ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀ ಸಂತೋಷ ಅಕ್ಕಿ ತೀವ್ರವಾಗಿ ಖಂಡಿಸಿದ್ದಾರೆ.
.ಶನಿವಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು,ಜೈಲಿನಲ್ಲಿ ಮನೋವೈದ್ಯ ನಾಗರಾಜ್ ನೀಡಿದ ಮೊಬೈಲ್‌ಗಳಿಂದಲೇ ಜೈಲಿನಿಂದ ದುಷ್ಕೃತ್ಯಕ್ಕೆಸಂಚು ಮಾಡಿದ್ದು ಎನ್‌ಐಎ ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲಾಗಿದ್ದು ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಜೈಲಿನಲ್ಲಿಂದಲೇ ಎಲ್ಲಾ ದುಷ್ಕೃತ್ಯಗಳಿಗೆ ಸಂಚು ನಡೆಯುತ್ತಿರುವದು ಕಳವಳಕಾರಿಯಾಗಿದೆ. ಇದು ಗೃಹ ಇಲಾಖೆಯ ವೈಫಲ್ಯತೆಯನ್ನು ಎದ್ದು ತೋರಿಸುತ್ತಿದೆ.ಪಶ್ಚಿಮ ಬಂಗಾಳ ಮೂಲದ ಯುವತಿ ಮೇಲೆ ಆಟೋ ಚಾಲಕ ಸೇರಿ ಮೂವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉಳ್ಳಾಲ ತಾಲೂಕಿನ ಮುನ್ನೂರುಕೊಟ್ಟಾರಿಮೂಲೆ ಬಂಗುಲೆ ನೇತ್ರಾವತಿ ನದಿ ಬಳಿ ಏಪ್ರಿಲ್ 17ರಂದು ನಡೆದಿದೆ.
ಜೂನ್ 1 ರಂದು ಬೆಳಗಾವಿ ಜಿಲ್ಲೆಯ ಕಾಕತಿಯಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಸ್ನೇಹಿತ ಸೇರಿ 6 ಮಂದಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬೆಂಗಳೂರಿನದೊಡ್ಡನಾಗಮಂಗಲದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಹಣ ಸುಲಿಗೆ ಮಾಡಿದ್ದಲ್ಲದೆ ಮನೆಯಲ್ಲಿದ್ದಪಿಠೋಪಕರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಜುಲೈ 9 ರಂದುನಡೆದಿದೆ. ಹರಿಯಾಣ ಮೂಲದ ಮೂವರು ಶಾರ್ಪ್‌ಶೂಟರ್‌ಗಳು ಬೆಂಗಳೂರಿಗೆ ಬಂದು ನಕಲಿ ಪಾಸ್ ಪೋರ್ಟ್ ಪಡೆದುಕೊಂಡು ಹೊರ ದೇಶಕ್ಕೆ ಹಾರಿ ಹೋಗುತ್ತಾರೆ.
ಹರಿಯಾಣದ ಎಟಿಎಸ್ ಪೊಲೀಸರಿಗೆ ತಿಳಿದ ಮಾಹಿತಿ ಪ್ರಕಾರ ಕೋರಮಂಗಲದ ಪಾಸ್‌ಪೋರ್ಟ್ ಕಚೇರಿಯಿಂದ ಇವರಿಗೆ ಪಾಸ್‌ಪೋರ್ಟ್ ಸಿಕ್ಕಿರುವುದುತಿಳಿದುಬರುತ್ತದೆ. ಅಮಿನ್ ಉಸ್ಮಾನ್ ಎನ್ನುವ ವ್ಯಕ್ತಿ ಈ ಪಾಸ್‌ಪೋರ್ಟ್ ನೀಡಿರುತ್ತಾರೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಇಂತಹ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದೇ ಕೊಲೆ, ಸುಲಿಗೆ, ಅತ್ಯಾಚಾರ ಗಳಿಗೆ ಉತ್ತೇಜನ ನೀಡುವ ಕೆಲಸವನ್ನು ರಾಜ್ಯ ಭೃಷ್ಟ ಕಾಂಗ್ರೆಸ್ ಸರ್ಕಾರಮಾಡುತ್ತಿದೆ ಅಪರಾಧಿಗಳಿಗೆ ಕರ್ನಾಟಕ ರಾಜ್ಯ ಅತ್ಯಂತ ಸುರಕ್ಷಿತ ತಾಣವಾಗಿ ದೇಶದ ನಾನಾ ಭಾಗಗಳಿಂದ ಕಾಂಗ್ರೆಸ್ ಅಡಳಿತದಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
