
ಗದಗ : ಗ್ರಾಮೀಣ ವಿಭಾಗದ ವ್ಯಾಪ್ತಿಯಲ್ಲಿ ಬರುವ ಕೆ.ಎಚ್.ಬಿ. ಕಳಸಾಪೂರ ರಸ್ತೆಯಲ್ಲಿ ೨೦೨೪ರ ಸೆಪ್ಟಂಬರ್ ೧೧ ರಂದು ಬೆಳಗಾವಿ ಜಿಲ್ಲೆಯ ಇಂಡಿ ತಾಲ್ಲೂಕಿನ ವಾಳಕಿ ಗ್ರಾಮದ ವಿಠ್ಠಲ ಮಲ್ಲಪ್ಪ ಹಿರೇಕುಡಿ ಎಂಬುವರು ಕುರಿ ಕಾಯಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದರಿಂದ ಹೆಸ್ಕಾಂ ನಿಗಮದಿಂದ ಮೃತ ಕುಟುಂಬದವರಿಗೆ ಪರಿಹಾರ ಧನವಾಗಿ ೫ ಲಕ್ಷರೂ.ಗಳ ಚೆಕ್‌ನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯರಾದ ಎಂ.ಆರ್. ಪಾಟೀಲ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಹೆಸ್ಕಾಂ ಇಇ ರಾಜೇಶ ಕಲ್ಯಾಣಶೆಟ್ಟಿ, ಹಾಲುಮತ ಮಹಾಸಭಾದ ಗೌರಾಧ್ಯಕ್ಷ ನಾಗರಾಜ ಮೆಣಸಗಿ, ಸೋಮನಗೌಡ ಪಾಟೀಲ, ರಾಘು ವಗ್ಗನವರ, ಮುತ್ತು ಜಡಿ, ಕುರುಬರ ಸಂಘದ ಯುವ ಘಟಕದ ಜಿಲ್ಲಾಧ್ಯಕ್ಷ ಮಂಜುನಾಥ ಜಡಿ, ಕುಮಾರ ಮಾರನಬಸರಿ, ಶಹರ ಎಇಇ ನಾಗರಾಜ ಕುರಿಯವರ, ಗ್ರಾಮೀಣ ಎಇಇ ಪಿ.ಆರ್. ಹೊಸಳ್ಳಿ, ಶಾಖಾಧಿಕಾರಿ ವಿಷ್ಣು ತಿಮ್ಮನತಿರ್ಲಾ, ಗುತ್ತಿಗೆದಾರರಾದ ಮಲ್ಲಪ್ಪ ಕೀಂದ್ರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.