
*ಚಿಂಚಲಿ ಗ್ರಂಥಾಲಯಕ್ಕೆ ಕೃಷಿ ಪುಸ್ತಕ ಮತ್ತು ಮಾಸಪತ್ರಿಕೆ ದೇಣಿಗೆ ನೀಡಿದ ಕೃಷಿ*- *ಪದವಿಧರ ರವಿ ಎನ್ ಲಕ್ಷ್ಮಿಗುಡಿ
*ಗದಗ ತಾಲೂಕಿನ ಚಿಂಚಲಿ ಗ್ರಾಮದ ಗ್ರಂಥಾಲಯ ಓದುಗರಾದ *ಶ್ರೀ ರವಿ ಎನ್ ಲಕ್ಷ್ಮಿಗುಡಿ* ಇವರು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಕಟವಾದ ಕೃಷಿಗೆ ಸಂಬಂಧಿಸಿದ ಪುಸ್ತಕಗಳು ಮತ್ತು ಮಾಸಪತ್ರಿಕೆಗಳನ್ನು ತಾವು ಓದಿದ ಗ್ರಂಥಾಲಯಕ್ಕೆ ಸುಮಾರು 4000/-(ನಾಲ್ಕು ಸಾವಿರ ರೂಪಾಯಿ) ಮೌಲ್ಯದ ಪುಸ್ತಕ ಮತ್ತು ಮಾಸಪತ್ರಿಕೆ ದೇಣಿಗೆ ನೀಡಿದ್ದು ಗ್ರಾಮೀಣ ರೈತರಿಗೆ ತುಂಬಾ ಅನುಕೂಲಕರವಾಗಿದೆ ಎಂದು ಗ್ರಾಮಸ್ಥರಾದ ಮಹೇಶ್ ಬಾಲರಡ್ಡಿ ಹೇಳಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ರವಿಯವರ ಸಹೋದರ

*ರಂಗಪ್ಪ ಲಕ್ಷ್ಮೀ ಗುಡಿ* ಎಲ್ಲ ದಾನಗಳಿಗಿಂತ ವಿದ್ಯಾದಾನ ದೊಡ್ಡದು ದೇಶದ ಬೆನ್ನೆಲುಬಾದ ರೈತರಿಗೆ ಅವಶ್ಯವಾದ ಗ್ರಂಥಗಳನ್ನು ಕೊಟ್ಟಿದ್ದು ತುಂಬಾ ಸಂತೋಷ ತಂದಿದೆ ಅತಿಥಿಯಾದ ಸದಾನಂದ ಕಮ್ಮಾರ ಮಾತನಾಡಿ ವಿಜ್ಞಾನ, ತಂತ್ರಜ್ಞಾನದ ಜೊತೆಗೆ ಕೃಷಿ ಪದವಿ ಪಡೆದು ಹುಟ್ಟೂರಿನ ರೈ ತೆರಿಗೆ ಉಪಯುಕ್ತ ಮಾಹಿತಿಯುಳ್ಳ ಕೃಷಿ ಸಂಬಂಧಿತ ಪುಸ್ತಕ ಕೊಟ್ಟಿದ್ದು ಒಳ್ಳೆಯ ಬೆಳವಣಿಗೆ ಎಂದರು.

ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಯಲ್ಲಪ್ಪ ಕಾಮರಡ್ಡಿ, ಮಲ್ಲಿಕಾರ್ಜುನ ನಾಗರಡ್ಡಿ, ಸಾಮಾಜಿಕ ಕಾರ್ಯಕರ್ತರಾದ ದಾದಫೀರ ನದಾಫ ಕಾರ್ಯಕ್ರಮ ನಿರೂಪಿಸಿದರು ಗ್ರಂಥಪಾಲಕರಾದ ಮಂಜುನಾಥ್ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
