*ಕೋಡಿಹಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿದ ನೂತನ ಶ್ರೀ ದುರ್ಗಾಂಬಿಕಾ ದೇವಿಯ ಪ್ರತಿಷ್ಟಾಪನಾ ಜಾತ್ರಾ ಮಹೋತ್ಸವ*

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಎರಡು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ನಡೆಯಿತು,ಸ್ವಸ್ಥಿಶ್ರೀ ವೃಷಭ ಹಾಗೂ ಕನ್ಯಾ ಲಗ್ನದಲ್ಲಿ ಧನುಷಾಚಾರಿ ಶಿಲ್ಪಿ ಮತ್ತು ಮದನ ಆಚಾರಿ ಇವರ ಸಹಯೋಗದಲ್ಲಿ ನೂತನ ಶ್ರೀ ದುರ್ಗಾಂಬಿಕ ದೇವಿಯ ಪ್ರಾಣ ಪ್ರತಿಷ್ಟಾಪನೆ, ಹೋಮ ಹವನ ವಿಶೇಷ ಪೂಜೆಯನ್ನು ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ಶ್ರೀ ದೇವಿಯನ್ನು ಪ್ರಥಮ ದಿನದಂದು ಪುರೋಹಿತರ ಸಾನಿಧ್ಯದಲ್ಲಿ ಕನ್ಯಾ ಲಗ್ನದಲ್ಲಿ ಪ್ರಾಣ ಪ್ರತಿಷ್ಟಾಪನೆ ಮಾಡಿಸಿ ನಂತರ ಗ್ರಾಮದ ಕೆರೆಯಲ್ಲಿ ಗಂಗಾ ಪೂಜೆಯನ್ನು ನೆರವೇರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಬಂದು ದೇವಸ್ಥಾನದ ಸನ್ನಿಧಾನದಲ್ಲಿ ದೇವಿಯು ಹಾಸಿನಳಾದಳು..ನಂತರ ಬೆಳಿಗ್ಗೆ ಹೋಮ ಹಾಗೂ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು ಈ ಪೂಜೆಯಲ್ಲಿ ಮುತೈದೆಯರು,ನವ ದಂಪತಿಗಳು, ಮಹಿಳೆಯರು,ಯುವಕರು, ಹಟ್ಟಿ ಯಜಮಾನರು,ಮುಖಂಡರು, ಊರಿನ ಗ್ರಾಮಸ್ಥರು, ಹಾಗೂ ಸರ್ವ ಭಕ್ತಾದಿಗಳು ಹಾಜರಿದ್ದರು, ಪೂಜೆಯು ಅತ್ಯಂತ ಯಶಸ್ವಿಯಾಗಿ ನೆರವೇರಿತು ನಂತರ ಬಂದಿರುವ ಎಲ್ಲ ಸರ್ವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು..ಶ್ರೀ ದುರ್ಗಾಂಬಿಕಾ ದೇವಿಯನ್ನು ಸಂಜೆ ವಿಶೇಷ ಪೂಜೆಯೊಂದಿಗೆ ಗುಡಿ ತುಂಬಿಸಿ ಮಹಾ ಮಂಗಳಾರತಿ ಮಾಡಲಾಯಿತು, ನೂರಾರು ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು,ಮತ್ತು ಕೋರಿಕೆಗಳನ್ನು ಶ್ರೀ ದೇವಿಯ ಪಾದಕಮಲಗಳಿಗೆ ಅರ್ಪಿಸಿದರು ಹಾಗೂ ಹರಕೆಗಳನ್ನು ಕಟ್ಟಿಕೊಳ್ಳುವ ಮೂಲಕ ದೇವಿಯ ಕೃಪೆಗೆ ಪಾತ್ರರಾದರು

..ಈ ಪೂಜಾ ಮಹೋತ್ಸವದಲ್ಲಿ ಸಣ್ಣ ನಾಗಯ್ಯ, ಎಂ.ಏಚ್ ತಿಪ್ಪೇಸ್ವಾಮಿ, ಮಲ್ಲಯ್ಯ,ಹನುಮಂತಪ್ಪ, ಪುಟ್ಟಣ್ಣ, ತಿಪ್ಪೇಸ್ವಾಮಿ, ಓಬಣ್ಣ, ದುರುಗಣ್ಣ, ನಿಂಗಣ್ಣ, ಕೊಲ್ಲಾರಪ್ಪ , ಲಿಂಗರಾಜು.ಡಿ, ಮಲ್ಲಿಕಾರ್ಜುನಯ್ಯ.ಟಿ,ಕುಮಾರಸ್ವಾಮಿ.ಟಿ ಧನಂಜಯ್, ವಿನಯ್ ಕುಮಾರ್.ಬಿ.ಎಂ, ಮಂಜುನಾಥ್, ರುದ್ರಮುನಿ.ಏಚ್, ಮೋಹನ್ .ಡಿ ನಂದೀಶ್. ಓ ಶ್ರೀಧರ್.ಏಚ್ , ರಾಜು.ಡಿ , ವಿಜಯ್ ಕುಮಾರ್.ಡಿ, ತಿಪ್ಪೇಸ್ವಾಮಿ.ಯು, ರಮೇಶ್.ಎಂ ಗುರುಮೂರ್ತಿ, ಚಿದಾನಂದ್, ಉಪೇಂದ್ರ, ರವೀಶ್, ಮಲ್ಲಿಕಾರ್ಜುನ್.ಜಿ, ಅರುಣ್ ಕುಮಾರ್.ಟಿ, ದಯಾನಂದ.ಟಿ, ಶಿವಪುತ್ರ, ಡ್ಯಾನ್ಸ್ ಮಾಸ್ಟರ್ ವೆಂಕಟೇಶ್, ತಿಪ್ಪೇಶ್ , ಮನೋಜ್ ಕುಮಾರ್.ಟಿ, ಜಯಂತ್, ನಾಗೇಶ್, ಮಂಜು, ಕಿರಣ್, ಸ್ವಾಮಿ.ಆರ್, ಕೋಟೆಶ್, ಗೋಪಿನಾಥ್, ಮೈಲಾರಿ, ದುರುಗೇಶ್, ಅಭಿಷೇಕ್, ವಿಜಯ್.ಎಸ್, ಮಾರಣ್ಣ, ಶಿವಪ್ಪ, ಪರಶುರಾಮ್, ಕಣುಮೇಶ್ , ಮಹೇಶ್, ಕೊಲ್ಲಾರಿ ಭಾಗವಹಿಸಿದ್ದರು. ಎಲ್ಲರ ಸಹಕಾರದೊಂದಿಗೆ ಜಾತ್ರಾ ಮಹೋತ್ಸವವು ಹಾಗೂ ಪೂಜಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು..ವರದಿ : ಟಿ.ಶಿವಮೂರ್ತಿ ಕೋಡಿಹಳ್ಳಿಜಿಲ್ಲಾ ವರದಿಗಾರರು..✍️

Leave a Reply

Your email address will not be published. Required fields are marked *