*ಡಾ.ಎಮ್.ಸಿ. ಸುಧಾಕರ್ ಪಾಲಿಟೆಕ್ನಿಕ್ ಅತಿಥಿ ಉಪನ್ಯಾಸಕರ ಪಾಲಿನ ದೇವರು:ಯಶವಂತ

*ಬೆಂಗಳೂರು*,- ಸರ್ಕಾರಿ ಪಾಲಿಟೆಕ್ನಿಕ್ ಅತಿಥಿ ಉಪನ್ಯಾಸಕರಿಗೆ ಡಾ.ಎಮ್.ಸಿ. ಸುಧಾಕರ್‌ರವರು ಸಚಿವರಾದ ಕೆಲವೇ ತಿಂಗಳಲ್ಲಿ ಕೇವಲ ೧೨,೫೦೦ ರೂಗಳಲ್ಲಿ ಕಾರ್ಯನಿರ್ವಹಿಸುತ್ತ ಬಂದ ನಮಗೆಲ್ಲ ೨೦೨೪-ಜನೇವರಿಯಲ್ಲಿ, ಸೇವಾನುಭವದ ಆಧಾರದ ಮೇಲೆ ಐದುಸಾವಿರ, ಆರುಸಾವಿರ, ಏಳುಸಾವಿರ, ಎಂಟುಸಾವಿರ ವರಗೆ ಹೆಚ್ಚಿಸಿದ್ದು ಮಾತ್ರವಲ್ಲದೇ ಅದೇ ವರ್ಷದ ೨೦೨೪-ಅಗಸ್ಟನಲ್ಲಿ ೨೨ಸಾವಿರ, ೨೪ಸಾವಿರ, ೨೬ಸಾವಿರ ಮತ್ತು ೨೮ ಸಾವಿರ ರೂ.ಗಳವರೆಗೆ ಹೆಚ್ಚಿಸಿ, ಈ ಪೂರ್ವದಲ್ಲಿ ಕೇವಲ ೧೨೫೦೦/- ರೂ ವೇತನ ಪಡೆಯುತ್ತಿದ್ದ ಪಾಲಿಟೆಕ್ನಿಕ್ ಅತಿಥಿ ಉಪನ್ಯಾಸಕ ಇಂದು ಅತಿಹೆಚ್ಚು ಅಂದರೆ, ೩೮ ಸಾವಿರ ರೂ.ಗಳವರೆಗೆ ವೇತನ ಪಡೆಯುತ್ತಿದ್ದು ಇದಕ್ಕೆ ಮೂಲ ಕಾರಣ ಸರಳ ಸಜ್ಜನಿಕೆಯ ಪ್ರತೀಕವಾಗಿರುವ ಉನ್ನತ ಶಿಕ್ಷಣ ಸಚಿವರಾದ ಡಾ.ಎಮ್.ಸಿ. ಸುಧಾಕರ್‌ರವರು ಉಪನ್ಯಾಸಕರ ಬಗ್ಗೆ ಅತಿವ ಗೌರವ ಹೊಂದಿ ನಮ್ಮ ಮನವಿಗೆ ಸ್ಪಂಧಿಸುವ ಮೂಲಕ ವೇತನ ಮಾತ್ರವಲ್ಲದೆ, ಆರೋಗ್ಯವಿಮೆ, ಐದುಲಕ್ಷ ಇಡಿಗಂಟು ಮಾತೃತ್ವರಜೆ, ನೇಮಕಾತಿಯಲ್ಲಿ ಕೃಪಾಂಕ ಕೌನ್ಸಿಲಿಂಗ್‌ನಲ್ಲಿ ಸರಳಿಕರಣ ಈಎಲ್ಲ ಸವಲತ್ತುಗಳನ್ನು ನೀಡುವ ಮೂಲಕ ನಮ್ಮನ್ನು ಪ್ರೂತ್ಸಾಹಿಸುತ್ತ ಕಾರ್ಯೋನ್ಮುಖರಾಗಿಸುತ್ತಿದ್ದಾರೆ ಹೀಗಾಗಿ ಅವರು ನಮ್ಮ ಪಾಲಿನ ದೇವರು ಎಂದು ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಯಶವಂತ ಆರೇರ ಹೇಳಿದರು. ಅವರು ಬೆಂಗಳೂರಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಂದರ್ಭದಲ್ಲಿ ಮಾತನಾಡಿದರು.

ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರಿಗೆ ನೀಡಿರುವ ಸರ್ವವಲತ್ತುಗಳನ್ನು ಮೆಲಕುಹಾಕಿ ಉಪನ್ಯಾಸಕರ ಪರವಾಗಿ ವಿಧಾನ ಪರಿಷತ್ ಸದಸ್ಯರಾದ ಶಿಕ್ಷಣ ಪ್ರೇಮಿ ಯಾಗಿರುವ ಎಸ್.ವ್ಹಿ.ಸಂಕನೂರವರು ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಸಚಿವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘದ ಉಪಾಧ್ಯಾಕ್ಷರಾದ ಪ್ರವೀಣಕುಮಾರ ಬೇವಿನ ಕಟ್ಟಿ ಕಾರ್ಯ ದರ್ಶಿ ವಿನೋದ.ಎಚ್.ಎಸ್. ಜಂಟಿಕಾರ್ಯದರ್ಶಿ-ವಿನೋದ ಬಾದವಾಡಗಿ, ಪದಾಧಿಕಾರಿ, ಸದಸ್ಯರಾದ ರಾಕೇಶ ಕಟಗೇರಿ, ಶ್ರೀಧರ ದಿವಾಣದ, ಅರ್ಚನಾ ನಾಯ್ಕ ,ಅಂಜುಮ್ ಮೀರನಾಯಕ್, ಸುದರ್ಶನ ಕುಂದಗೂಳ, ಭಾವನಾ ಅಕ್ಷತಾ, ವಿನೋದಕುಮಾರ ಮರಿನಾಯಕರ್, ಸಿರಾಜ್, ಅಶೋಕ, ಶ್ರೀನಿವಾಸ, ಪ್ರಸನ್ನ, ಮೀರ್ ಮುಕ್ರಂ, ಗುರು ಕಾರಟಗಿ, ಡಾ.ತನುಜಾ, ಸುಪ್ರೀತಾ, ಸೇರಿದಂತೆ ಕರ್ನಾಟಕದ ಎಲ್ಲ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರು ಪಾಲ್ಗೋಡಿದ್ದರು.

Leave a Reply

Your email address will not be published. Required fields are marked *