
ಅಕ್ರಮ ಖಾತೆ, ಕಾಮಗಾರಿಗಳ ಕುರಿತು ಲೋಕಾಯುಕ್ತರಿಗೆ ದೂರು ನೀಡಿದ ಮೌಲಾಸಾಬ
ಅಕ್ರಮ ಖಾತೆ, ಅಕ್ರಮ ಕಾಮಗಾರಿಗಳ ಕುರಿತು ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಆಯ್ಕೆಯಾದ ಜನ ಪ್ರತಿನಿಧಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ಮೌಲಾಸಾಬ ವಲ್ಲೇಸಾಬನವರ ಲೋಕಾಯುಕ್ತರಿಗೆ ದೂರು ಸಲ್ಲಿಸಿದರು.

ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣ ಪಂಚಾಯತಿಗೆ ಲೋಕಾಯುಕ್ತ DSP ವಿಜಯಕುಮಾರ ಬಿರಾದಾರ ನೇತೃತ್ವದ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
DSP ವಿಜಯಕುಮಾರ ಬಿರಾದಾರ ಅವರು ಇಲ್ಲಿನ ಸಿಬ್ಬಂದಿಗಳಿಗೆ ಸಾರ್ವಜನಿಕರನ್ನು ವಿನಾಕಾರಣ ಕಚೇರಿ ಕೆಲಸ, ಕಾರ್ಯಗಳಿಗೆ ಅಲೆದಾಡಿಸದೆ ಸ್ಪಂದಿಸುವ ಮೂಲಕ ಬೇಗನೆ ಅವರ ಕೆಲಸ, ಕಾರ್ಯಗಳನ್ನು ಮಾಡಿಕೊಡಬೇಕೆಂದು ಸೂಚಿಸಿದರು.

ವರದಿ✍️ಚಂದ್ರಶೇಖರ ಸೋಮಣ್ಣವರ
