
*ನೂತನ ಅಗ್ನಿಶಾಮಕ ಠಾಣೆಗೆ ಉದ್ಘಾಟನೆಯ ಭಾಗ್ಯ ಯಾವಾಗ..?
*ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ಅಗ್ನಿಶಾಮಕ ಠಾಣೆಯ ಕೆಲಸ, ಕಾಮಗಾರಿಗಳು ಸಂಪೂರ್ಣವಾಗಿ ಮುಗಿದು ಒಂದು ತಿಂಗಳು ಕಳೆದರೂ ಸಹ ಈ ನೂತನ ಕಛೇರಿಗೆ ಇನ್ನೂ ಉದ್ಘಾಟನೆಯ ಭಾಗ್ಯ ದೊರೆತಿಲ್ಲ.
ತಹಶೀಲ್ದಾರ ಕಛೇರಿ ಬಳಿ ಇರುವ ಹಳೆಯ ಅಗ್ನಿಶಾಮಕ ಕಛೇರಿಯು ಮಳೆ ಬಂದರೆ ಸೋರುವ ಜೊತೆಗೆ ಡ್ರೈನೇಜ್ ನೀರು ಸಹ ಹಲವು ಬಾರಿ ಕಛೇರಿಯ ಒಳಗೆ ನುಗ್ಗಿ ಸಮಸ್ಯೆ ಉಂಟಾಗುತ್ತಿದೆ.
ಒಟ್ಟಾರೆಯಾಗಿ ಇಲ್ಲಿನ ಅಗ್ನಿಶಾಮಕ ಠಾಣೆಯ ಸಿಬ್ಬಂಧಿಗಳು ಮೂಲಭೂತ ಸೌಲಭ್ಯಗಳಿಲ್ಲದೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಇವರ ಗೋಳನ್ನು ಕೇಳುವವರೆ ಇಲ್ಲದಂತಾಗಿದೆ.

ಕಣ್ಮುಚ್ಚಿ ಕುಳಿತಿರುವ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಚುನಾಯಿತ ಜನ ಪ್ರತಿನಿಧಿಗಳು ಈಗಲಾದರೂ ಸಹ ಎಚ್ಚೆತ್ತುಕೊಳ್ಳುವ ಮೂಲಕ ನೂತನ ಅಗ್ನಿಶಾಮಕ ಠಾಣೆಯ ಕಟ್ಟಡವನ್ನು ಉದ್ಘಾಟನೆಗೊಳಿಸಿ ನೂತನ ಕಟ್ಟಡಕ್ಕೆ ಹಳೆಯ ಕಛೇರಿಯನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

*ವರದಿ*✍️ಚಂದ್ರಶೇಖರ ಸೋಮಣ್ಣವರ
