
* ಬೆಳಿಗ್ಗೆ ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಕಾನಿಪ ಧ್ವನಿ ಸಂಘಟನೆಯ 35 ದಕ್ಕೂ ಅಧಿಕ ಸದಸ್ಯರು ಸಭೆ ಸೇರಿ ಕಾನಿಪ ಧ್ವನಿ ಸಂಘಟನೆಯನ್ನು ವಿದ್ಯುಕ್ತದೊಂದಿಗೆ ಚಾಲನೆ ನೀಡಿದರು.
ಜೊತೆಗೆ ಎಲ್ಲಾ ಸದಸ್ಯರುಗಳಿಗೆ ಗುರುತಿನ ಕಾರ್ಡ್ ಗಳನ್ನು ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ವಿತರಿಸುವಂತ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ದೇವರಾಜ್, ಬೆಂಗಳೂರು ಗ್ರಾ.ಜಿಲ್ಲಾಧ್ಯಕ್ಷರಾದ ಸಿದ್ದರಾಜು,ಪ್ರಧಾನ ಕಾರ್ಯದರ್ಶಿಗಳಾದ ರಾಧಕೃಷ್ಣ,ರಾಜ್ಯ ಕಾರ್ಯಕಾರಿ ಸದಸ್ಯರಾದ ಮಹೇಶ್,ಶರಣಪ್ಪ,ರಾಜು ಅಗಸ್ತ್ಯ,ಜಿಲ್ಲಾ ಪದಾಧಿಕಾರಿಗಳಾದ ಆನಂದ ಕುಮಾರ್,ಚೌಡರಾಜ್,ದೊಡ್ಡಬಳ್ಳಾಪುರತಾಲೂಕು ಅಧ್ಯಕ್ಷರಾದ ಮಂಜುನ ನಾಥ ಹಾಗೂ ಇನ್ನೀತರ ಪ್ರಮುಖರು ಹಾಜರಿದ್ದರು.

ಕಾರ್ಡ್ ವಿತರಣೆಯ ನಂತರ 79 ನೇ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಇಂದು ದೊಡ್ಡಬಳ್ಳಾಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು,ಬ್ರೆಡ್ ಹಣ್ಣುಗಳನ್ನು ಕಾನಿಪ ಧ್ವನಿ ವತಿಯಿಂದ ವಿತರಿಸಲಾಯಿತು* .

