ಸಚಿವ ಡಾ. ಎಚ್.ಕೆ.ಪಾಟೀಲ ಅವರ ಜನ್ಮದಿನದ ಅಂಗವಾಗಿ ಶ್ರೀ ಅನ್ನಪೂರ್ಣೆಶ್ವರಿ ಪ್ರಸಾದ ನಿಲಯದಲ್ಲಿ ಸಿಹಿ ಪ್ರಸಾದ ವಿತರಣೆ.

ಸಚಿವ ಡಾ. ಎಚ್.ಕೆ.ಪಾಟೀಲ ಅವರ ಜನ್ಮದಿನದ ಅಂಗವಾಗಿ ಶ್ರೀ ಅನ್ನಪೂರ್ಣೆಶ್ವರಿ ಪ್ರಸಾದ ನಿಲಯದಲ್ಲಿ ಸಿಹಿ ಪ್ರಸಾದ ವಿತರಣೆ

ಗದಗ : ನಗರದ ಮಹಾತ್ಮಾಗಾಂಧಿ ವೃತ್ತದ ಬಳಿ ಇರುವ ಹಳೇ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಶ್ರೀ ಅನ್ನಪೂರ್ಣೆಶ್ವರಿ ಪ್ರಸಾದ ನಿಲಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ಅವರ ೭೨ ನೇ ಜನ್ಮದಿನದ ಅಂಗವಾಗಿ ಅವರ ಅಭಿಮಾನಿ ಬಳಗದವರು ಸಿಹಿಯೊಂದಿಗೆ ಪ್ರಸಾದ ಸೇವೆಯನ್ನು ಹಮ್ಮಿಕೊಂಡಿದ್ದರು. ೧೬೪೫ ನೇ ದಿನದ ಪ್ರಸಾದ ಸೇವೆಗೆ ಸಚಿವ ಎಚ್.ಕೆ.ಪಾಟೀಲ ಅವರು ಚಾಲನೆ ನೀಡಿದರು.

ಸಂದರ್ಭದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲ್ಲೂಕಾಧ್ಯಕ್ಷ ಅಶೋಕ ಮಂದಾಲಿ, ಪ್ರಸಾದ ನಿಲಯದ ಗೌರವಾಧ್ಯಕ್ಷರಾದ ಎಸ್.ಎಸ್.ಕಳಸಾಪೂರ, ಉಪಾಧ್ಯಕ್ಷರಾದ ಉಮೇಶ ಪೂಜಾರ, ಕಾರ್ಯದರ್ಶಿಗಳಾದ ಮಂಜುನಾಥ ಭಗವತಿ, ಖಜಾಂಚಿ ವೆಂಕಟೇಶ ಇಮರಾಪೂರ, ಸದಸ್ಯರುಗಳಾದ ಗುರುಮೂರ್ತಿ ಮರಿಗುದ್ದಿ, ರಾಜಣ್ಣ ಮಲ್ಲಾಡದ, ಮುತ್ತು ಜಡಿ, ಸೇವಾಕರ್ತರಾದ ಕೆಂಬಾವಿಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *