ಜನಪ್ರೀಯ ಶಾಸಕರೆ ಹುಲ್ಲೂರು ರಸ್ತೆ ದುರಸ್ತಿ ಯಾವಾಗ..?

*ಜನಪ್ರೀಯ ಶಾಸಕರೆ ಹುಲ್ಲೂರು ರಸ್ತೆ ದುರಸ್ತಿ ಯಾವಾಗ..?

*ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದ ರಸ್ತೆ ತುಂಬಾ ಹದಗೆಟ್ಟು ಹೋಗಿದ್ದು ವಾಹನ ಸವಾರರು ಬೇಸತ್ತು ಹೋಗಿದ್ದಾರೆ.ಹುಲ್ಲೂರು ಗ್ರಾಮದಿಂದ ಬೆಳ್ಳಟ್ಟಿ-ಲಕ್ಷ್ಮೇಶ್ವರ ಮುಖ್ಯ ರಸ್ತೆಗೆ ತೆರಳುವ ಎರಡು ಕಿಲೋ ಮೀಟರ್ ಕ್ರಾಸ್ ರಸ್ತೆಯು ಅಲ್ಲಲ್ಲಿ ಕಿತ್ತು ಹೋಗುವ ಮೂಲಕ ತಗ್ಗು-ಗುಂಡಿಗಳಲ್ಲಿ ಮಳೆಯ ನೀರು ತುಂಬಿಕೊಂಡಿದ್ದು ವಾಹನ ಸವಾರರು ತುಂಬಾ ತೊಂದರೆಯನ್ನು ಎದುರಿಸುತ್ತಿದ್ದು ಹಿಡಿಶಾಪ ಹಾಕುತ್ತಿದ್ದಾರೆ.

ಕಣ್ಮುಚ್ಚಿ ಕುಳಿತಿರುವ PWD ಇಲಾಖೆಯ ಅಧಿಕಾರಿಗಳು ಹಾಗೂ ಚುನಾಯಿತ ಜನ ಪ್ರತಿನಿಧಿಗಳು ಈಗಲಾದರೂ ಸಹ ಎಚ್ಚೆತ್ತುಕೊಳ್ಳುವ ಮೂಲಕ ಈ ಹುಲ್ಲೂರು ಕ್ರಾಸ್ ರಸ್ತೆಯಲ್ಲಿ ಅನಾಹುತಗಳು ಸಂಭವಿಸುವ ಮೊದಲು ಈ ರಸ್ತೆಯನ್ನು ದುರಸ್ತಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರಾದ ಬಸವರಾಜ್ ಮೂಕಿ, ಮುತ್ತಣ್ಣ ಮುದಕಣ್ಣವರ, ಅಶೋಕ ಬಾರಕೇರ್ ಒತ್ತಾಯಿಸಿದ್ದಾರೆ.

*ವರದಿ*✍️ಚಂದ್ರಶೇಖರ ಸೋಮಣ್ಣವರ

Leave a Reply

Your email address will not be published. Required fields are marked *