ಮೋಕಾ ವಲಯದ ಅಂಗನವಾಡಿ ಮಕ್ಕಳಿಂದ ಅದ್ದೂರಿಯಾಗಿ‌ ನಡೆದ ಬಾಲ ಮೇಳ ಕಾರ್ಯಕ್ರಮ

*ಮೋಕಾ ವಲಯದ ಅಂಗನವಾಡಿ ಮಕ್ಕಳಿಂದ ಅದ್ದೂರಿಯಾಗಿ‌ ನಡೆದ ಬಾಲ ಮೇಳ ಕಾರ್ಯಕ್ರಮ –

ಐಸಿಡಿಎಸ್ ಎನ್ನುವುದು ಮೂಲತಃ ಸಮುದಾಯ ಆಧಾರಿತ ಕಾರ್ಯಕ್ರಮವಾಗಿದೆ .ಈ ಕಾರ್ಯಕ್ರಮದ ಯಶಸ್ಸು ಅನುಷ್ಠಾನ ಮೇಲ್ವಿಚಾರಣೆ ಮತ್ತು ಸಮುದಾಯದ ಭಾಗವಹಿಸುಕೆಯಿಂದ ಮಾತ್ರ ಸಾಧ್ಯ. ಇದನ್ನು ಸಾಧಿಸಲು ಅಂಗನವಾಡಿ ಕೇಂದ್ರಗಳಲ್ಲಿ ಆರಂಭಿಕ ಬಾಲ್ಯ ಮತ್ತು ಶಿಕ್ಷಣದಿಂದ ಸಾಧಿಸಬಹುದಾಗಿದೆ.

ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣವನ್ನು ಮಾಡುವ ಮೂಲಕ ಅದನ್ನು ಸಮುದಾಯದ ಎಲ್ಲಾ ಜನರಿಗೂ ತಲುಪಿಸುವಂತೆ ಮಾಡಿದಾಗ ಸಮುದಾಯದ ಎಲ್ಲಾ ಸದಸ್ಯರಲ್ಲಿ ಅಂಗನವಾಡಿ ಕೇಂದ್ರಗಳ ಬಗ್ಗೆ ಉತ್ತಮವಾದ ಮನೋಭಾವನೆ ಮತ್ತು ನಂಬಿಕೆಯನ್ನು ತರುವ ಉದ್ದೇಶದಿಂದ ಮೋಕಾ ಗ್ರಾಮದಲ್ಲಿ ಬಾಲ ಮೇಳ ಕಾರ್ಯಕ್ರಮವನ್ನು ಅಜೀಮ್ ಪ್ರೇಮ್ ಜೀ ಫೌಂಡೇಶನ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಯೋಗದೊಂದಿಗೆ ಅದ್ಭುತವಾಗಿ ನಡೆಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎಂ ರಾಮಕೃಷ್ಣ ನಾಯಕ್ ಸರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅಂಗನವಾಡಿ ಕೇಂದ್ರಗಳಲ್ಲಿ ಪೂರಕ ಪೌಷ್ಠಿಕ ಆಹಾರ ಜೊತೆಗೆ ಗುಣಮಟ್ಟದ ಶಾಲಾ ಪೂರ್ವ ಶಿಕ್ಷಣ ನೀಡಲಾಗುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಕ್ಕಿರಮ್ಮ, ಸದಸ್ಯರಾದ ರಾಮಣ್ಣ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಗಂಗವ್ವ ಮೇಡಂ,ವಲಯ ಮೇಲ್ವಿಚಾರಕಿಯರಾದ ಪಿ.ಚಾಂದಿ ಬಾಯಿ ಮೇಡಂ ಹಾಗೂ ಹಿರಿಯ ಮೇಲ್ವಿಚಾರಕಿಯಾದ ಗೀತಾ ಅಂಬಿಗರ್,ಮೇಹಬೂಬಿ ಮೇಡಂ ಹಾಗೂ ಮೋಕಾ ವಲಯದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಕ್ಕಳ ಹಾಜರಾಗಿದ್ದರು.

Leave a Reply

Your email address will not be published. Required fields are marked *