ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ ಸಮಿತಿ ಸಭೆ

ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ ಸಮಿತಿ ಸಭೆ

ಗದಗ (ಕರ್ನಾಟಕ ವಾರ್ತೆ) ಜೂನ್ 21: 2024-25 ನೇ ಸಾಲಿನ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆವ್ಯತ್ಯಾಸ ಪಾವತಿ (Price Deficiency payment scheme ) ಯೋಜನೆಯಡಿಯಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ದರ ಪ್ರತಿ ಕ್ವಿಂಟಲ್ ಗೆ (MIP) ರೂ. 10,589.20 ಗಳು ನಿಗಾಧಿಪಡಿಸಲಾಗಿದೆ. ಒಣಮೆಣಸಿನಕಾಯಿ ಉತ್ಪನ್ನವನ್ನು ಖರೀದಿಸುವ ಕುರಿತು ಜಿಲ್ಲಾ ಟಾಸ್ಕ್ಫೋರ್ಸ ಸಮಿತಿಯು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಮಾತನಾಡಿ ಒಣಮೆಣಸಿನಕಾಯಿ ಬೆಳೆಗಾರರ ಹಿತದೃಷ್ಟಿಯಿಂದ ಈ ಯೋಜನೆಯ ಅನುಕೂಲ ಪಡೆಯಲು ಸಾಧ್ಯವಾಗುವಂತೆ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ ಯೋಜನೆಯಡಿಯಲ್ಲಿ ಇ ಟೆಂಡರ್ ನಡೆಸುತ್ತಿರುವ ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಒಣಮೆಣಸಿನಕಾಯಿ ಮಾರಾಟ ಮಾಡಲು ಬರುವ ರೈತರು ನೋಂದಣಿ ಕಾರ್ಯವನ್ನು Neml ತಂತ್ರಾoಶ ದಲ್ಲಿ ಮಾಡಿಸಬೇಕು ಎಂದರು. ಒಣಮೆಣಸಿನಕಾಯಿ ಉತ್ಪನ್ನದ ಗೇಟ ಎಂಟ್ರಿಯನ್ನು ಗದಗ APMC ಯಲ್ಲಿ UMP ತಂತ್ರಾoಶದಲ್ಲಿ ರೈತರು ದಾಖಲಿಸುವ ಕಾರ್ಯವನ್ನು ನಿರ್ವಹಿಸಬೇಕು. ಪ್ರತಿ ದಿವಸ ಆವಕವಾಗುವ ಒಣಮೆಣಸಿನಕಾಯಿ ಪ್ರಮಾಣ, ರೈತರ ಸಂಖ್ಯೆ ಇತ್ಯಾದಿ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 35855.89 ಹೆಕ್ಟೇರ್ ಒಣಮೆಣಸಿನಕಾಯಿ ಹುಟ್ಟುವಳಿ ಬಿತ್ತನೆ ಮಾಡಿದ್ದು, ಪ್ರತಿ ಹೆಕ್ಟೇರ್‌ಗೆ 8 ಟನ್ ಇಳುವರಿ ಪ್ರಮಾಣವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು. ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಾದ ಸುಧಾ ಆರ್ ಬಂಡಿ ಅವರು ಮಾತನಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕಡ್ಡಾಯವಾಗಿ Price Deficiency payment scheme ) ( UMP) ಇ ಟೆಂಡರ್ ಮೂಲಕ ಮಾತ್ರ ಯೋಜನೆಯನ್ನು ಅನುಷ್ಟಾನಗೊಳಿಸಬೇಕಾಗಿದ್ದು ಗದಗ ಜಿಲ್ಲೆಯಲ್ಲಿ ಗದಗ ಮಾರುಕಟ್ಟೆ ಹೊರತುಪಡಿಸಿ ನರಗುಂದ, ಲಕ್ಷ್ಮೇಶ್ವರ, ಹೊಳೆ ಆಲೂರ ಹಾಗೂ ಮುಂಡರಗಿ ಮಾರುಕಟ್ಟೆಗಳಲ್ಲಿ ಒಣಮೆಣಸಿನಕಾಯಿ ಹುಟ್ಟುವಳಿ ಇ ಟೆಂಡರ್ ನಡೆಸಲು ಕಮೀಷನ್ ಏಜೆಂಟರು ( ದಲ್ಲಾಲರು) ಹಾಗೂ ಖರೀದಿದಾರರು ಇರುವುದಿಲ್ಲ ಎಂದು ಸಭೆಗೆ ವಿವರಿಸಿದರು. ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು, ಸಹಕಾರ ಸಂಘಗಳ ಇಲಾಖೆ ಉಪನಿಬಂಧಕರು, ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಹಾಜರಿದ್ದರು. **********

Leave a Reply

Your email address will not be published. Required fields are marked *