
ಡಾ.ಆರ್ ಬಿ ಬಸವರಡ್ಡೇರ್ ಕುರಿತಅನನ್ಯ ಗ್ರಂಥ ಲೋಕಾರ್ಪಣೆ.ಅಬ್ಬಿಗೇರಿಯ ಜಗದ್ಗುರು ಶ್ರೀ ರೇಣುಕಾಚಾರ್ಯ ಸಾಂಸ್ಕೃತಿಕ ಭವನದಲ್ಲಿ ಡಾ: ಆರ್ ಬಿ ಬಸವರಡ್ಡೇರ ರವರ ೯೦ ನೇ ಜನ್ಮದಿನಾಚರಣೆ ಮತ್ತು ಅವರ ಕುರಿತ ಅನನ್ಯ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಜರಗಿತು.ಈ ಸಮಾರಂಭದಲ್ಲಿ ದಿವ್ಯ ಸಾನಿಧ್ಯ: ಮ.ನಿ.ಪ್ರ. ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ, ಪಾಲಕೆರೆಸಾನಿಧ್ಯ: ಪರಮಪೂಜ್ಯ ಶ್ರೀ ಗುರುಪಾದದೇವರು ಗುಲಗಂಜಿಮಠ, ರೋಣ. ಪರಮಪೂಜ್ಯಶ್ರೀ ಚಂದ್ರಶೇಖರ ಸ್ವಾಮಿಗಳು, ಕೊಡಗಾನೂರ, ಪರಮಪೂಜ್ಯಶ್ರೀ ಬಸವರಾಜ ಶರಣರು ಮುಗಳಖೋಡ ಶಾಖಾಮಠ, ಅಬ್ಬಿಗೇರಿ ಸಾನಿಧ್ಯ ವಹಿಸಿದ್ದರು.ಮಾನ್ಯ ಶ್ರೀ G S ಪಾಟೀಲ ಶಾಸಕರು ರೋಣ ಹಾಗೂ ಅಧ್ಯಕ್ಷರು, ಖನಿಜ ಅಭಿವೃದ್ದಿ ನಿಗಮ, ಬೆಂಗಳೂರುಮಾನ್ಯ ಶ್ರೀ ಡಿ. ಆರ್. ಪಾಟೀಲ ಮಾಜಿ ಶಾಸಕರು ಗದಗ, ಮಾಜಿ ಸಚಿವರಾದ BR ಯಾವಗಲ್, ಶರಣಗೌಡ ಪಾಟೀಲ ಬಯ್ಯಾಪೂರ ವಿಧಾನ ಪರಿಷತ್ ಸದಸ್ಯರು. ಐ ಎಸ್ ಪಾಟೀಲಬಸಯ್ಯ ಶಿರೋಳ, ಬಿ.ವಿ.ಶಿರೂರ, ಬಿ ಎಫ್ ಚೇಗರಡ್ಡಿ, ಮಹೇಶ ತಿಪಶೆಟ್ಟಿ ಮುಂತಾದವರು ಭಾಗವಹಿಸಿದ್ದರು. ಇದೆ ಸಂದರ್ಭದಲ್ಲಿ ತೊಂಬತ್ತು ವರ್ಷ ಮೀರಿದ ಹಿರಿಯರಿಗೆ, ಸಿಎ ಪದವಿ ಪಡೆದ ಸಾಧಕರಿಗೆ, ಪಿ ಎಚ್ ಡಿ ಪಡೆದವರಿಗೆ, ಎಸ್ ಎಸ್ ಎಲ್ ಸಿ ಯಲ್ಲಿ ಗರಿಷ್ಟ ಅಂಕ ಪಡೆದ ಸಾಧಕರಿಗೆ ಸನ್ಮಾನಿಸಲಾಯಿತು.ಬಸವರಾಜ ಪಲ್ಲೇದ ಸ್ವಾಗತಿಸಿದರು.ಅಂದಪ್ಪ ವೀರಾಪೂರ ನಿರೂಪಿಸಿದರು.ಅನನ್ಯ.ಅನನ್ಯ ಅಂದರೆ, ವಿಶಿಷ್ಟ ಅಥವಾ ಬೇರೆ ಯಾವುದಕ್ಕೂ ಹೋಲಿಸಲಾಗದ ಎಂದು ಅರ್ಥ. ಇತರರಿಗಿಂತ ಭಿನ್ನವಾಗಿ, ತನ್ನದೇ ಆದ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ ಎಂದು ಸೂಚಿಸುತ್ತದೆ.ವಿಶಿಷ್ಟವಾದ ವ್ಯಕ್ತಿ, ಕಲೆ ಮತ್ತು ವಿಷಯವನ್ನು ಅನನ್ಯ ಎಂದು ಕರೆಯಲಾಗುತ್ತದೆ.ಬೇರೆ ಯಾವುದಕ್ಕೂ ಹೊಂದಿಕೆಯಾಗದಕ್ಕೆ ಅನನ್ಯ ಎನ್ನುವರು. ಡಾ. ಆರ್.ಬಿ.ಬಸವರಡ್ಡೇರ ಅನನ್ಯ ವ್ಯಕ್ತಿಗಳೆ. ಹಾಗಾಗಿ ಇವರ ಕುರಿತು ಇರುವ ಗ್ರಂಥದ ಶಿರ್ಷಿಕೆ ಯೋಗ್ಯವೆ ಆಗಿದೆ. ಈ ಪದದ ಅರ್ಥ ಇತರರಂತೆ ಇವರಲ್ಲ ಎಂದು ಸೂಚಿಸುತ್ತದೆ.ಒಬ್ಬ ವ್ಯಕ್ತಿಯನ್ನು ಅನನ್ಯ ಎಂದು ಕರೆಯಬೇಕಾದರೆ, ಅವರಲ್ಲಿ ವಿಶಿಷ್ಟವಾದ ಗುಣಲಕ್ಷಣಗಳಿರಬೇಕು. ಅಂದಾಗ ಸಮಾಜವು ಗೌರವದಿಂದ ಕಾಣುವದು. ಆ ವ್ಯಕ್ತಿಯ ಬಗ್ಗೆ ಇತರರು ಹೊಂದಿರುವ ಪ್ರೀತಿ, ಗೌರವ, ನಂಬಿಕೆ, ವಿಶ್ವಾಸ, ಶ್ರದ್ಧೆ, ಮನ್ನಣೆ, ಮೆಚ್ಚುಗೆಯ ಭಾವನೆ ಅನನ್ಯತೆಯನ್ನು ಸೂಚಿಸುತ್ತದೆ. ಅನನ್ಯ ಎಂದು ಕರೆಯಬೇಕಾದರೆ ಅವರಲ್ಲಿ ಅರ್ಹತೆಗಳು ಇರಲೇ ಬೇಕಾಗುತ್ತದೆ.ಡಾ. ಆರ್.ಬಿ.ಬಸವರಡ್ಡೇರ ವೃತ್ತಿಯಲ್ಲಿ ವೈದ್ಯರು. ವೃತ್ತಿಯ ಜೊತೆಗೆ ವಿಶಿಷ್ಟ ಪ್ರವೃತ್ತಿಯನ್ನು ಹೊಂದಿ ಸಮಾಜ ಸೇವೆ ಮಾಡಿದ್ದು ಇವರನ್ನು ಇತರರಿಗಿಂತ ಎತ್ತರ ಸ್ಥಾನದಲ್ಲಿ ನಿಲ್ಲಿಸುತ್ತದೆ.ವೈದ್ಯಕೀಯ ಸೇವೆಗಳ ಜೊತೆಗೆ,ಶೈಕ್ಷಣಿಕ,ಸಾಮಾಜಿಕ,ರಾಜಕೀಯ,ಕ್ರೀಡೆ,ಕ್ರೀಡಾಕೂಟ ಸಂಘಟನೆ,ಗ್ರಂಥಾಲಯ ನಿರ್ಮಾಣಸಾಹಿತ್ಯನಿಧಿ ಸಂಗ್ರಹಣ ಅಭಿಯಾನಹೀಗೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇವರೆಂದೂ ಪ್ರಶಸ್ತಿಗಳಿಗೆ ಆಸೆ ಪಟ್ಟವರಲ್ಲ. ಪ್ರಶಸ್ತಿಗಳ ಗುಣಮಟ್ಟವನ್ನು ಇವರು ಅರಿತವರು.ಪ್ರಶಸ್ತಿಗಳೆಲ್ಲ ಯೋಗ್ಯವಲ್ಲ.ಪ್ರಶಸ್ತಿ ಪಡೆದವರೆಲ್ಲ ಯೋಗ್ಯರೂ ಅಲ್ಲ.ಪ್ರಶಸ್ತಿ ಪಡೆಯದವರು ಅಯೋಗ್ಯರಲ್ಲ.ಕೆಲವು ಪ್ರಶಸ್ತಿಗಳು ದೊರೆಕಿದ್ದರೆ, ಇನ್ನು ಕೆಲವನ್ನು ಪಡೆದಿರುತ್ತಾರೆ. ಮಹಾತ್ಮ ಗಾಂಧಿಗೆ ದೊರಕದ ನೊಬೆಲ್ ಪ್ರಶಸ್ತಿ ಇದ್ದರೆಷ್ಟು ಹೋದರೆಷ್ಟು.ಪ್ರಶಸ್ತಿಗಿಂತ ಪವಿತ್ರತೆ ಮುಖ್ಯ. ಎಂದು ಅರಿತವರು.ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ. ಎಂಬ ಕಗ್ಗದಂತೆ ಸಮಾಜದಲ್ಲಿ ಬಾಳಿದವರು.ಮಾನವನಾದರೆ ಸಾಕು, ಮಹಾತ್ಮನಾಗುವುದು ಯಾರಿಗೆ ಬೇಕು.ಇದ್ದ ನೆಲವ ಅರಿತರೆ ನಾಕು.ಸ್ವರ್ಗ ಇನ್ನಾರಿಗೆ ಬೇಕು.ಮಾನವನಾದರೆ ಸಾಕು, ಮಹಾತ್ಮನಾಗುವುದು ಬೇಡ, ಸ್ವರ್ಗವು ಬೇಡ ಎಂದು ಸಮಾಜದಲ್ಲಿ ಜೀವಿಸಿದವರು.ಸಮಾಜದಲ್ಲಿ ಹಲವರನ್ನು ನಾವು ಕಾಣುತ್ತೇವೆ. ಪ್ರತಿಯೊಬ್ಬರಲ್ಲಿ ಒಂದೊಂದು ವಿಶೇಷತೆಗಳನ್ನು ಕಾಣುತ್ತೇವೆ. ಆ ವಿಶೇಷತೆಗಳಿಂದ ಅವರನ್ನು ಗುರುತಿಸುತ್ತೇವೆ.ಹಣವಿದ್ದವರು ಹಣವಂತರುಗುಣವಿದ್ದವರು ಗುಣವಂತರುಧೈರ್ಯವಿದ್ದವರು ಧೈರ್ಯವಂತರುಮಾನವಿದ್ದವರು ಮಾನವಂತರು.ಹೃದಯವಿದ್ದವರು ಹೃದಯವಂತರು.ವಿದ್ಯೆ ಇದ್ದವರು ವಿದ್ಯಾವಂತರು.ಈ ಎಲ್ಲ ಗುಣ ಹೊಂದಿದವರು ಅನನ್ಯರು.ಈ ಅನನ್ಯರ ಸಾಲಿನಲ್ಲಿ ಡಾ.ಆರ್ ಬಿ ಬಸವರಡ್ಡೇರ ಕೂಡಾ ಒಬ್ಬರು.ಅಲ್ಲವೆ.