
ನಾಡಿನ ಸಂಗೀತ ಕಾಶಿ, ಶ್ರೀ ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯಶ್ರೀ ಡಾ. ಕಲ್ಲಯ್ಯಜ್ಜನವರಿಗೆ ಇಂದು ೫೫ ನೇ ವರ್ಷದ ಜನ್ಮದಿನಾಚರಣೆ ಗದಗ : ಬಾಲ್ಯದಲ್ಲಿ ಅಂಧತ್ವಕ್ಕೆ ಶರಣಾಗಿ ಗದುಗಿನ ಸುಕ್ಷೇತ್ರ ಶ್ರೀ ವೀರೇಶ್ವರ ಪುಣ್ಯಾಶ್ರಮದ ಗಾನಯೋಗಿ ಪಂ. ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾಗಿ ಅಭ್ಯಾಸಗೈಯುತ್ತ ಸರಳ ಬದುಕಿನ ವಿದ್ಯಾರ್ಥಿಯಾಗಿ ಸಾಧನೆಗೆ ಇಂದು ನಾಡಿನ ಸಂಗೀತ ಕಾಶಿ, ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾಗಿ ಉಭಯ ಗುರುಗಳ ಮಾರ್ಗದರ್ಶನದಂತೆ ಅಂಧ-ಅನಾಥರಿಗೆ ಅಭಯ ಹಸ್ತ ನೀಡಿ ಆಶ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಪರಮಪೂಜ್ಯ ಶ್ರೀ ಕಲ್ಲಯ್ಯಜ್ಜನವರ ಜೀವನ ಸಮಾಜಕ್ಕೆ ಮಾದರಿಯಾಗಿದೆ.ಪೂಜ್ಯಶ್ರೀ ಕಲ್ಲಯ್ಯಜ್ಜನವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ೧೯೭೧ರ ಜುಲೈ ೩ ರಂದು ಶ್ರೀ ವೀರಯ್ಯನವರು ಹಿರೇಮಠ ಹಾಗೂ ಮಾತೋಶ್ರೀ ಬಸಮ್ಮನವರ ಪುತ್ರರಾಗಿ ಜನ್ಮತಾಳಿದರು