ಅರ್ಜಿ ಆಹ್ವಾನ
ಗದಗ (ಕರ್ನಾಟಕ ವಾರ್ತೆ) ಜೂನ್ 27: ನರೇಗಲ್ ಪಟ್ಟಣ ಪಂಚಾಯತಿಯ 2025-26 ನೇ ಸಾಲಿನ 24.10% ಎಸ್ ಎಫ್ ಸಿ ಮುಕ್ತ ನಿಧಿಯಲ್ಲಿ ಪರಿಶಿಷ್ಟ ಜಾತಿಯ (ಬಿಇ ) ಇಂಜನಿಯರ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವುದು. ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ನೀಡುವುದು. ಶೇ 5% ರಲ್ಲಿ ವಿಕಲಚೇತನರಿಗೆ ಕೃತಕ ಶ್ರವಣ ಸಾಧನ ಸಾಮಗ್ರಿಗಳನ್ನು ನೀಡುವ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರದ ಸುತ್ತೋಲೆಯಂತೆ ನರೇಗಲ್ ಪಟ್ಟಣದ ಖಾಯಂ ರಹವಾಸಿಯಾಗಿರಬೇಕು. ಅರ್ಜಿಯನ್ನು ಜುಲೈ 17 ರ ಸಂಜೆ 5 ಗಂಟೆಯೊಳಗಾಗಿ ಮುಖ್ಯಾಧಿಕಾರಿಗಳ ಕಚೇರಿ, ಪಟ್ಟಣ ಪಂಚಾಯತ್ ನರೇಗಲ್ ಈ ವಿಳಾಸಕ್ಕೆ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳನ್ನು ನರೇಗಲ್ ಪಟ್ಟಣ ಪಂಚಾಯತ್ ಕಾರ್ಯಾಲಯ ದೂರವಾಣಿ ಸಂಖ್ಯೆ 08381-268228 ಸಂಪರ್ಕಿಸಬಹುದಾಗಿದೆ.ಸಾರ್ವಜನಿಕರ ಗಮನಕ್ಕೆಗದಗ (ಕರ್ನಾಟಕ ವಾರ್ತೆ) ಜೂನ್ 27: 2025-26 ನೇ ಸಾಲಿನ ಡಿ.ಇ.ಎಲ್.ಇಡಿ / ಡಿ.ಪಿ.ಇಡಿ/ ಡಿ.ಪಿ.ಎಸ್.ಇ ಕೋರ್ಸಿನ ಸರಕಾರಿ ಕೋಟಾದ ಉಳಿಕೆ ಸೀಟುಗಳನ್ನು ದಾಖಲಾತಿ ಮಾಡಿಕೊಳ್ಳಲು ಜುಲೈ 5 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಾಲಾ ಶಿಕ್ಷಣ ವೆಬ್‌ಸೈಟ್‌ನಲ್ಲಿ ಸಂಪರ್ಕಿಸಬಹುದು ಹಾಗೂ ಜೆ.ಎಂ.ಮುAದಿನಮನಿ ನೋಡಲ್ ಅಧಿಕಾರಿಗಳು, ಡಯಟ್ ಗದಗ ಮೊಬೈಲ್ ಸಂಖ್ಯೆ 7619277145 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ