*ನಿಗದಿತ ಸಮಯಕ್ಕೆ ಬಸ್ ಒಡಿಸಲು ಹಡಗಲಿ ಗ್ರಾಮಸ್ಥರ ಆಗ್ರಹ*ಸರಿಯಾದ ಸಮಯಕ್ಕೆ ಬಸ್ ಬಿಡಲು ಡಿಪೋ ಮ್ಯಾನೇಜರಿಗೆ ಹೇಳಿ ಸಾಕಾಗಿ ಹೋಯ್ತು… ನಾವು ಹೆಂಗರ ಮಾಡಿ ಶಾಲೆಗೆ ಹೋಗಬೇಕಲ್ಲ. ಟ್ರ್ಯಾಕ್ಟರ್ ಹತ್ತಿ ಶಾಲೆಗೆ ಹೊಂಟೇವಿ….ಯಾರಿಗೆ ಹೇಳಿದರು ನಮ್ಮ ಸಮಸ್ಯೆ ಬಗೆ ಹರಿಯುತ್ತಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ದು:ಖವನ್ನು ತೋಡಿಕೊಂಡಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹಡಗಲಿ ಗ್ರಾಮಕ್ಕೆ ಪ್ರತಿ ದಿನ ಬೆಳ್ಳಿಗ್ಗೆ 9-ಗಂಟೆಗೆ ಶಿರಹಟ್ಟಿ ಘಟಕದ ಶಿರಹಟ್ಟಿ-ಬೆಳ್ಳಟ್ಟಿ ಒಂದು ಬಸ್ ಬರುತ್ತಿದ್ದು ಈ ಬಸ್ ಸರಿಯಾದ ಸಮಯಕ್ಕೆ ಬರುತ್ತಿಲ್ಲವಾದ್ದರಿಂದ ಇಲ್ಲಿನ ವಿದ್ಯಾರ್ಥಿಗಳು ಶಾಲೆಗೆ ಹೋಗದ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.ಬಸ್ ನಿಗದಿತ ಸಮಯಕ್ಕೆ ಬಾರದ ಹಿನ್ನಲೆಯಲ್ಲಿ ಹಡಗಲಿ ಗ್ರಾಮದಿಂದ ಬೆಳ್ಳಟ್ಟಿ, ಶಿರಹಟ್ಟಿ ಪಟ್ಟಣಗಳಿಗೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಉಂಟಾಗಿದೆ.ಕಣ್ಮುಚ್ಚಿ ಕುಳಿತಿರುವ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಚುನಾಯಿತ ಜನ ಪ್ರತಿನಿಧಿಗಳು ಈಗಲಾದರೂ ಸಹ ಎಚ್ಚೆತ್ತುಕೊಳ್ಳುವ ಮೂಲಕ ಇಲ್ಲಿನ ಸಮಸ್ಯೆಗೆ ಕ್ರಮ ಕೈಗೊಳ್ಳಬೇಕಾಗಿದೆ.

*ವರದಿ*✍️ಚಂದ್ರಶೇಖರ ಸೋಮಣ್ಣವರ