
*ಗಜೇಂದ್ರಗಡ.*
ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ಗಜೇಂದ್ರಗಡ ತಾಲೂಕ ಸಮಿತಿ ವತಿಯಿಂದ* *ತಹಶೀಲ್ದಾರಾದ ಕಿರಣಕುಮಾರ ಕುಲಕರ್ಣಿ ಅವರಿಗೆ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು ಶಾಲಾ-ಕಾಲೇಜುಗಳು ಅದರಲ್ಲೂ ಮುಖ್ಯವಾಗಿ ಖಾಸಗಿ ಶಾಲೆಗಳು ವಿಪರಿತವಾದ ಡೊನೇಷನ್ ತೆಗೆದುಕೊಳ್ಳುತ್ತಿದ್ದು ಅದಕ್ಕೆ ಕಡಿವಾಣ ಹಾಕಲು ತಾಲೂಕು ಮಟ್ಟದಲ್ಲಿ ಮಾನ್ಯ ತಹಸಿಲ್ದಾರರ ಅಧ್ಯಕ್ಷತೆಯಲ್ಲಿ ಡೊನೇಷನ್ ನಿಯಂತ್ರಣ ಸಮಿತಿ ರಚಿಸಬೇಕು** *ಶಿಕ್ಷಣ ಪ್ರೇಮಿಗಳು, ವಿದ್ಯಾರ್ಥಿ ಸಂಘಟನೆಯ ಮುಖಂಡರು, ಪೋಷಕರ ಸಂಘಟನೆಯ ಮುಖಂಡರು**ಶಿಕ್ಷಣ* *ಇಲಾಖೆ* *ಮತ್ತು* *ಶಿಕ್ಷಣ* *ಸಂಸ್ಥೆಗಳ*ಮುಖ್ಯಸ್ಥರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಡೊನೇಷನ್* *ನಿಯಂತ್ರಣ ಮಾಡಲು ಮಾನ್ಯ ತಹಶೀಲ್ದಾರರು* *ಮುಂದಾಗಬೇಕೆಂದು**ಮತ್ತು* *ಜಿಲ್ಲೆಯಲ್ಲೂ ಕೂಡ ಜಿಲ್ಲಾಧಿಕಾರಿಗಳ* *ಅಧ್ಯಕ್ಷತೆಯಲ್ಲಿ ಡೊನೇಷನ್* *ನಿಯಂತ್ರಣ ಸಮಿತಿಯನ್ನು ರಚಿಸಬೇಕೆಂದು* **ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ ಎಫ್ ಐ ಸಂಘಟನೆ ಈ ಮೂಲಕ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು..

**ಈ ಸಂದರ್ಭದಲ್ಲಿ ಎಸ್ ಎಫ್ ಐ ಗದಗ ಜಿಲ್ಲಾಅಧ್ಯಕ್ಷರಾದ* *ಚಂದ್ರು ರಾಠೋಡ ಮಾತನಾಡಿ**ಗಜೇಂದ್ರಗಡ ತಾಲೂಕಿನಲ್ಲಿ ಬರುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ಎಲ್ಲಾ ವಸತಿ ಶಾಲೆಗಳ ಅಡಿಯಲ್ಲಿ ಬರುವ ವಸತಿ ನಿಲಯಗಳಲ್ಲಿ ಸರಿಯಾದ ಮೂಲಭೂತ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ* **ಸುಮಾರು ವರ್ಷಗಳಿಂದ ಹಾಸ್ಟೆಲ್ ಗಳಿಗೆ ಪೇಂಟಿಂಗ್, ಆಟದ ಸಾಮಗ್ರಿಗಳು, ಕರೇಂಟ್, ಫ್ಲೆಮಿಂಗ್ ಹಾಗೂ ಊಟದ ವೇಳಾಪಟ್ಟಿ ಬದಲಾವಣೆಯಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ** ತಾಲೂಕಿನಾದ್ಯಂತ ಎಲ್ಲಾ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯಾದ BioMetric (ಬಯೋಮೆಟ್ರಿಕ್) ನಲ್ಲೂ ಅವ್ಯವಹಾರಗಳು ನಡೆಯುತ್ತಿದೆ*. *ಸೊಪ್* *ಕೀಟ್*, *ಶುಚಿ ಕೀಟ್* ಗಳನ್ನು ನೀಡಿರುವುದಿಲ್ಲಾ. *ವಸತಿ ನಿಲಯ ಮೇಲ್ವಿಚಾರಕರು ಸುಮಾರು ವರ್ಷಗಳಿಂದ ಒಂದೇ ಹಾಸ್ಟೆಲ್ ನಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ*. ಆದ ಕಾರಣ ತಾವುಗಳು ಆದಷ್ಟು ಬೇಗ ಎಲ್ಲಾ ಸಮಸ್ಯೆಗಳನ್ನೂ ಸರಿಪಡಿಸಲು ಮುಂದಾಗಬೇಕು ಹೇಳಿದರು . *ಸಮಸ್ಯೆಗಳನ್ನು ಬಗೆಹರಿಸಿದಿದ್ದರೆ *ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು* *ನಂತರ ಹೋರಾಟದ ಘೋಷಣೆ ಕೂಗಿ ಮಾನ್ಯ ತಹಶಿಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು*

**ಈ ಸಂದರ್ಭದಲ್ಲಿ ಎಸ್ ಎಫ್ ಐ ನ ಮುಖಂಡರಾದ*:- ಶರಣು ಎಮ್, ಉಮೇಶ್ ಮಾದರ, ಕೃಷ್ಣ ತಳವಾರ, ಕಳಕಯ್ಯ ಹೀರೇಮಠ, ರಾಜಾಬಕ್ಷಿ ಶಿರಗುಂಪಿ, ನಾಗರಾಜ ಗುರಿಕಾರ,ಕೀರಣ ಕುಕಂಬಳ್ಳಿ, ಶಿವು ಕರಡಿ, ಮಾಳಿಂಗರಾಯ ನರಗುಂದ, ಸಿದ್ಧಲಿಂಗಪ್ಪ, ಚಂದ್ರು ಆರ್ರೇರ್, ಸಚೀನ, ಮೇಲ್ಲೇಶ, ಬಸವರಾಜ, ಮಾರುತಿ, ಯಲ್ಲಾಲಿಂಗ, ಆಕಾಶ, ಇದ್ದರು.

*ಹೋರಾಟದ ಪ್ರಮುಖ ಬೇಡಿಕೆಗಳು*.1) *ವಸತಿ ನಿಲಯಗಳಿಗೆ ಪೇಂಟಿಂಗ್, ಪ್ಲಮೀಂಗ್, ಇಲೇಕ್ಟ್ರೀಷಿಯನ್, ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯಗಳನ್ನು ನಿರ್ಮಿಸಬೇಕು*2) *ವಿದ್ಯಾರ್ಥಿಗಳ ಹಾಜರಾತಿಯಾದ ಬೈಯೋ ಮೇಟ್ರಿಕ್ ಅವ್ಯವಹಾರಗಳು ತಡೆಯಬೇಕು*3) *ವಿದ್ಯಾರ್ಥಿಗಳ ಊಟದ ವೇಳಾಪಟ್ಟಿ ಬದಲಾವಣೆಯಾಗಬೇಕು*5) *ಪದವಿ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಅರ್ಜಿ ಸಲ್ಲಿಸಲು ಪ್ರಾರಂಭಿಸಬೇಕು*6) *ವಸತಿ ನಿಲಯಗಳ ಮೇಲ್ವಿಚಾರಕರನ್ನ ( ವಾರ್ಡನ್) ಸ್ಥಳಾಂತರಿಸಬೇಕು*7)* ಗಜೇಂದ್ರಗಡ ನಗರಕ್ಕೆ ಬಾಲಕರ ಮೇಟ್ರಿಕ್ ನಂತರದ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯ ಪ್ರಾರಂಭಿಸಬೇಕು*8) ಬಾಲಕಿಯರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೇಟ್ರಿಕ್ ಪೂರ್ವ ವಸತಿ ನಿಲಯ ಪ್ರಾರಂಭಿಸಬೇಕು.9) ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಗಜೇಂದ್ರಗಡ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು.10) ಮೂರಾರ್ಜೀದೇಸಾಯಿ ವಸತಿ ಶಾಲೆ ಕಾಲಕಾಲೇಶ್ವರ ಹಾಗೂ ಕಿತ್ತೂರಾಣಿ ಚೇನ್ನಮ್ಮ ವಸತಿ ಶಾಲೆಗೆ ಗಜೇಂದ್ರಗಡ ರಸ್ತೆ ನಿರ್ಮಾಣ ಮಾಡಬೇಕು.11) ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ನೀಡಬೇಕು.12) ಪಠ್ಯಪುಸ್ತಕಗಳನ್ನು ನೀಡಬೇಕು ಸಮವಸ್ತ್ರಗಳನ್ನು ನೀಡಬೇಕು.13) ಡೊನೇಷನ್ ಹಾವಳಿ ನಿಯಂತ್ರಣ ಸಮಿತಿ ರಚಿಸಿ ತಕ್ಷಣ ಸಭೆ ಕರೆಯಬೇಕು.14) ಪ್ರಾಥಮಿಕ , ಪ್ರೌಢಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರನ್ನು ಭರ್ತಿ ಮಾಡಬೇಕು.15) ಶಾಲಾ ಕಾಲೇಜು ಮತ್ತು ಹಾಸ್ಟೆಲ್ಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.16) ಶಾಲಾ ಕಾಲೇಜುಗಳಲ್ಲಿ , ವಸತಿ ನಿಲಯಗಳಲ್ಲಿ ಲೈಬ್ರರಿಗಳನ್ನು ನಿರ್ಮಿಸಿ ಖಾಲಿ ಇರುವ ಬೋಧಕೇತರ ಸಿಬ್ಬಂದಿಗಳನ್ನು ಭರ್ತಿ ಮಾಡಬೇಕು. *ಚಂದ್ರು ರಾಠೋಡ* ಜಿಲ್ಲಾಧ್ಯಕ್ಷರು Sfi ಗದಗ 8123280578