
ಗಜೇಂದ್ರಗಡ:ಭಾರತೀಯ ಜನತಾ ಪಾರ್ಟಿ ರೋಣ ಮತಕ್ಷೇತ್ರ ರೋಣ ಮಂಡಳದಿಂದ ಆರ್ ಸಿ ಬಿ ತಂಡದ ಐ ಪಿ ಎಲ್ ವಿಜಯೋತ್ಸವ ವೇಳೆ ಬೆಂಗಳೂರಲ್ಲಿ ನಡೆದ ಕಾಲ್ತುಳಿತದ ಸಾವಿಗೆ ರಾಜ್ಯ ಸರ್ಕಾರವೇ ಹೊಣೆಗಾರಿಕೆ ಹೊರುವಂತೆ ಹಾಗು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯ ರಾಜಿನಾಮೆಗೆ ಆಗ್ರಹಿಸಿ ನಗರದ ಕಾಲಕಾಲೇಶ್ವರ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.

ಪ್ರತಿಭಟನೆಯಲ್ಲಿ ರೋಣ ಮಂಡಲದ ಅಧ್ಯಕ್ಷರಾದ ಉಮೇಶ್ ಮಲ್ಲಾಪುರ, ಪಕ್ಷದ ಹಿರಿಯ ಮುಖಂಡರಾದ ಅಶೋಕ ನವಲಗುಂದ, ಶಿವಾನಂದ ಮಠದ ಭಾಸ್ಕರ ರಾಯಬಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ಕೆ ಚವ್ಹಾಣ, ಗಜೇಂದ್ರಗಡ ನಗರದ ಅಧ್ಯಕ್ಷರಾದ ರಾಜೇಂದ್ರ ಘೋರ್ಪಡೆ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ್ ವಕ್ಕರ, ಮುಖಂಡರಾದ ಮಹಾಂತೇಶ ಸೋಮನಕಟ್ಟಿ ,ಮುದಿಯಪ್ಪ ಕರಡಿ, ಬುಡ್ಡಪ್ಪ ಮೂಲಿಮನಿ, ಯುವ ಮುಖಂಡರಾದ ಕರಣ ಬಂಡಿ, ಮಾಂತೇಶ್ ಪೂಜಾರ, ಎಸ್ ಟಿ ಮೋರ್ಚಾ ಅಧ್ಯಕ್ಷ ಸಂತೋಷ ಕಡಿವಾಲ, ಯುವ ಮೋರ್ಚಾ ಅಧ್ಯಕ್ಷ ಹುಲ್ಲಪ್ಪ ಕೆಂಗಾರ, ಹಿಂದುಳಿದ ಮೋರ್ಚಾ ಅಧ್ಯಕ್ಷ ರಂಗನಾಥ ಮೇಟಿ ಎಸ್ ಸಿ ಮೋರ್ಚಾ ಅಧ್ಯಕ್ಷ ಭೀಮಪ್ಪ ಮಾದರ ಪುರಸಭೆ ಸದಸ್ಯರಾದ ಯು.ಆರ್. ಚನ್ನಮ್ಮನವರು, ಯಮನೂರು ತಿರಕೋಜಿ, ಸುಗುರೇಶ ಕಾಜಗಾರ, ದುರ್ಗಪ್ಪ ಕಟ್ಟಿಮನಿ, ಮುತ್ತಯ್ಯ ಕಾರಡಗಿ ಮಠ,ದಾನು ರಾಥೋಡ, ಅಂದಪ್ಪ ಅಂಗಡಿ, ಶಿವಕುಮಾರ್ ಜಾದವ, ಮುತ್ತಯ್ಯ ಬಾಳೆಕಾಯಿಮಠ, ಶಿವಾನಂದ ಜಿಡ್ಡಿ ಬಾಗಿಲ, ಬಸವರಾಜ ಕೊಟಗಿ, ವೆಂಕನಗೌಡ ಗೌಡ ಗೌಡರ, ಪಂಚಾಕ್ಷರಿ ಹರ್ಲಾಪುರ್ ಮಠ ,ರಾಜು ಘೋರ್ಪಡೆ, ಮಹೇಶ್ ಮಕ್ತಲಿ ಅನಿಲ್ ಪಲ್ಲೇದ, ಮಲ್ಲು ಕುರಿ, ಸಂಜುಪ್ಪ ಲಕ್ಕಿಹಾಳ, ಮಹೇಶ್ ಶಿವಸಿಂಪರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು