ರಕ್ತದಾನಕ್ಕೆ ಸಾಟಿ ಯಾವುದೂ ಇಲ್ಲ, ರಕ್ತಕ್ಕೆ ಸಾಟಿ ರಕ್ತವೇ ಆಗಿದೆ. ಪ್ರೋ. ಉಮಾ ಕೋಳಿರವರು

ರಕ್ತದಾನಕ್ಕೆ ಸಾಟಿ ಯಾವುದೂ ಇಲ್ಲ, ರಕ್ತಕ್ಕೆ ಸಾಟಿ ರಕ್ತವೇ ಆಗಿದೆ. ಪ್ರೋ. ಉಮಾ ಕೋಳಿರವರು

ಗದಗ (ಕರ್ನಾಟಕ ವಾರ್ತೆ) ಜೂನ್ 16 : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆ, ಶ್ರೀ ಜಗದ್ಗುರು ತೋಂಟದಾರ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಂಡರಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನದ ಜಾಥಾ ಕಾರ್ಯಕ್ರಮ ಜರುಗಿತು. ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಂಡರಗಿಯಲ್ಲಿ ಜೂನ್ 16 ರಂದು ಜಾಥಾಗೆ ಚಾಲನೆ ನೀಡಿ ಮಾತನಾಡಿದರು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳಾದ ಡಾ. ಅರುಂಧತಿ ಕೆ ಹಾಗೂ ಕಾಲೇಜಿನ ಪ್ರೋ. ಉಮಾ ಕೋಳಿರವರು ಜಂಟಿಯಾಗಿ ಚಾಲನೆ ಕೊಟ್ಟು ಮಾತನಾಡಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ರಕ್ತದಾನ ಶ್ರೇಷ್ಠದಾನ, ರಕ್ತದಾನ ಜೀವದಾನ, ರಕ್ತದಾನ ಮಹಾದಾನ ಎನ್ನುವಂತೆ ಎಲ್ಲರೂ ಮೂರು ತಿಂಗಳಿಗೆ ಒಂದು ಸಾರಿ ರಕ್ತದಾನ ಮಾಡಬಹುದು, ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ದೇಹದಲ್ಲಿ ಚೈತನ್ಯ ಬರುವುದು. ಹಾಗಾಗಿ ಎಲ್ಲರೂ ರಕ್ತದಾನ ಮಾಡಿ ರಕ್ತದ ಕೊರತೆಯನ್ನು ನೀಗಿಸುವಲ್ಲಿ ಎಲ್ಲರು ಕೈ ಜೋಡಿಸಬೇಕೆಂದು ಹೇಳಿದರು.

ಮುಂದುವರೆದು ಮಾತನಾಡಿ ರಕ್ತದಾನದಂತೆ ಅಂಗಾAಗದಾನವು ಮಹತ್ವದಾಗಿದ್ದು, ದಾನಿಗಳ ಸ್ಮರಣೆ ಮಾಡುವುದು ಸ್ತುತ್ಯಾರ್ಹವಾಗಿದೆಯೆಂದರು. ರಕ್ತದಾನ ಮಾಡುವವರು 18 ರಿಂದ 65 ವಯೋಮಾನದವರು ಇರಬೇಕು, ಅವರ ತೂಕ 45 ಕೆ.ಜಿ.ಗಿಂತ ಹೆಚ್ಚಿಗಿರಬೇಕು, ಅವರ ಹಿಮೋಗ್ಲೋಬಿನ್ ಪ್ರಮಾಣ 12.5 ಗಿಂತ ಹೆಚ್ಚಿಗೆ ಇರವವರು ಮಹಿಳೆ ಮತ್ತು ಪುರುಷ ಎಂಬ ಭೇದಬಾವವಿಲ್ಲದೆ ರಕ್ತದಾನ ಮಾಡಬಹುದು ಎಂದು ತಿಳಿಸಿದರು.ಮಹಾವಿದ್ಯಾಲಯದ ಪ್ರೋ. ಉಮಾ ಕೋಳಿರವರು ತಮ್ಮ ಅಧ್ಯಕ್ಷಿಯ ನುಡಿಗಳು ಮಾತನಾಡಿ ರಕ್ತದಾನಕ್ಕೆ ಸಾಟಿ ಯಾವುದೂ ಇಲ್ಲ, ರಕ್ತಕ್ಕೆ ಸಾಟಿ ರಕ್ತವೇ ಆಗಿದೆ.

ಎಲ್ಲ ಆರೋಗ್ಯವಂತರು ಹಾಗು ಯುವಕರು ರಕ್ತದಾನ ಮಾಡುವುದರ ಮುಖಾಂತರ ಗರ್ಭೀಣಿ ಮಹಿಳೆಯರಿಗೆ, ರಕ್ತಹೀನತೆ ಇರುವವರಿಗೆ ರಕ್ತದಾನ ಮಾಡುವುದರ ಮುಖಾಂತರ ಮಾದರಿಯಾಗಲು ತಿಳಿಸಿದರು.ಮುಂದುವರೆದು ಮಾತನಾಡಿ ಎಲ್ಲ ದಾನಗಳಿಗಿಂತಲೂ ರಕ್ತದಾನ ಶ್ರೇಷ್ಠವಾದದ್ದು, ಹಿಂದಿನ ಕಾಲದಲ್ಲಿ ಅನ್ನದಾನ, ನೇತ್ರದಾನ, ಗೋದಾನ, ಭೂದಾನ ಶ್ರೇಷ್ಠವಾಗಿದ್ದವು, ಅವೆಲ್ಲಕ್ಕಿಂತ ರಕ್ತದಾನ ಇಂದಿನ ಶ್ರೇಷ್ಠದಾನವಾಗಿದೆ, ರಕ್ತದಾನದಿಂದ ದಾನಿಯ ದೇಹದಲ್ಲಿ 24 ಗಂಟೆಯೊಳಗಾಗಿ ಹೊಸ ರಕ್ತ ಉತ್ಪತ್ತಿ ಪ್ರಾರಂಭವಾಗುತ್ತದೆ, ರಕ್ತದಾನದಿಂದ ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ, ಹೃದಯ ರೋಗವನ್ನು ಕಡಿಮೆ ಮಾಡುತ್ತದೆ, ಜ್ಞಾಪಕ ಶಕ್ತಿಯನ್ನು ವೃಧ್ದಿಸುತ್ತದೆ, ಇಷ್ಟೇಲ್ಲಾ ಲಾಭಗಳಿರುವುದರಿಂದ ಪ್ರತಿಯೊಬ್ಬರಿಗೂ ರಕ್ತದಾನ ಮಾಡಲು ಕರೆ ನೀಡಿದರು. ಇದಕ್ಕೂ ಮೊದಲು ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ಲಕ್ಷö್ಮಣ ಪೂಜಾರ ರವರು ಮಾತನಾಡಿ ರಕ್ತದಾನವು ಸಾಮಾಜಿಕ ಸೇವೆಯಾಗಿದ್ದು, ಸದೃಢ ಯುವಕ ಯುವತಿಯರು, ಸಾರ್ವಜನಿಕರು ಸ್ವ ಇಚ್ಛೆಯಿಂದ ರಕ್ತದಾನ ಮಾಡಬೇಕು ಎಂದು ತಿಳಿಸಿದರು.

ಜಾಥಾ ಕಾರ್ಯಕ್ರಮವು ಜಗದ್ಗುರು ತೋಂಟದಾರ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹುಡ್ಕೋ ಕಾಲನಿಯಲ್ಲಿ ರಕ್ತದಾನ ಕುರಿತು ಜಾಗೃತಿ ಮೂಡಿಸಲಾಯಿತು.

ಜಾಥಾವನ್ನು ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮಂಜುಳಾ ಸಜ್ಜನರ ಸ್ವಾಗತಿಸಿದರು ಮತ್ತು ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರಾದ ಬಸವರಾಜ ಲಾಳಗಟ್ಟಿರವರುವಂದಿಸಿದರು.ಜಾಥಾ ಕಾರ್ಯಕ್ರಮದಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ಲಕ್ಷö್ಮಣ ಪೂಜಾರ, ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರಾದ ಬಸವರಾಜ ಲಾಳಗಟ್ಟಿ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮಂಜುಳಾ ಸಜ್ಜನರ, ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರೋ. ಕಾವೇರಿ ಭೋಲಾ ಮತ್ತು ಪ್ರೋ. ತಿಮ್ಮನಾಯಕ ಹಾಗೂ ಇತರೆ ಪ್ರಾದ್ಯಾಪಕ ವೃಂದದವರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *