ಅತೀ ವಿಜೃಂಭಣೆಯಿಂದ ಜರುಗಿದ ಅಂಬಾ ಭವಾನಿ ಜಾತ್ರೆ

*ಅತೀ ವಿಜೃಂಭಣೆಯಿಂದ ಜರುಗಿದ ಅಂಬಾ ಭವಾನಿ ಜಾತ್ರೆ…*

ಬಾಗಲಕೋಟೆ

ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ರಾಂಪುರ್ ನಗರದಲ್ಲಿ ಶ್ರೀ ಅಂಬಾಭವಾನಿ ಜಾತ್ರೆ ಅತೀ ವಿಜೃಂಭಣೆಯಿಂದ ಜರುಗಿತು

.ಹಿಂದೂ ಭೋಯಿ ಮಾರಾಠ ಸಮಾಜದ ವತಿಯಿಂದ ರಬಕವಿ ಶ್ರೀ ಗಟ್ಟಗಿ ಬಸವೇಶ್ವರ ದೇವಸ್ಥಾನದಿಂದ ವಿವಿಧ ಬಿದಿಗಳಲಿ ಬೆಳ್ಳಿ ರತದಲ್ಲಿ ಹಲಗಿ ಮೇಳ ಹಾಗೂ ಭಜಂತ್ರಿ ಬ್ಯಾಂಡ್. ಮುಖಾಂತರ ರಾಂಪುರದವರೆಗೆ ಶ್ರೀ ಅಂಬಾಭವಾನಿ ಮೂರ್ತಿಯನ್ನು ಮೆರವಣಿಗೆ ಮಾಡುವ ಮುಕಾಂತರ ಜಾತ್ರೆ ಅದ್ದೂರಿಯಾಗಿ ಆಚರಿಸಿದರು.ಶ್ರೀ ಅಂಬಾಭವಾನಿ ಮೆರವಣಿಗೆ ಮುಗಿದಮೇಲೆ ಸಾರ್ವಜನಿಕರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಿದರು ‌.

ತೇರದಾಳ ಮತಕ್ಷೇತ್ರದ ಶಾಸಕರಾದ ಶ್ರೀ ಸಿದ್ದು ಸವದಿ ಬಂದು ಶ್ರೀ ಅಂಬಾಭವಾನಿ ದರ್ಶನ್ ಪಡೆದರು.ಅದೇ ರೀತಿ ಹಿಂದೂ ಭೋಯಿ ಮಾರಾಠ ಸಮಾಜದ ಅಧ್ಯಕ್ಷ ಸೋಮನಾಥ ಗೌಳಿ.ಉಪಾಧ್ಯಕ್ಷ ಸೋಮನಾಥ ಬೋಕ್ರೆ.ಕಾರ್ಯದರ್ಶಿ ಸಚಿನ್ ಕಾಟಕರ.ಖಜಾಂಚಿ ಗಣೇಶ್ ಮೊಳೆ.ಶ್ರೀ ಅಂಬಾಭವಾನಿ ಅರ್ಚಕರಾದ ಮಾರುತಿ ಚೀನಕೆ.ಶ್ರೀ ದೇವಿ ಜಾತ್ರೆಯಲ್ಲಿ ಯಾರಿಗೂ ಯಾವುದೇ ರೀತಿಯ ತೊಂದರೆ ಆಗದಂತೆ ಅಚ್ಚು ಕಟ್ಟಾಗಿ ನೋಡಿಕೊಂಡರು.

ವರದಿ:-ಶಾನೂರ್ ಗೊಲಬಾಂವಿ

ವರದಿ:-ಶಾನೂರ್ ಗೊಲಬಾಂವಿ

Leave a Reply

Your email address will not be published. Required fields are marked *