
ಉಪರಾಷ್ಟ್ರಪತಿ ಚುನಾವಣೆ 2025ಆಯೋಗವು ಆಗಸ್ಟ್ 1, 2025 ರಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಹದಿನೇಳನೇ ಉಪರಾಷ್ಟ್ರಪತಿ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸಿತ್ತು.
, ಸೆಪ್ಟೆಂಬರ್ 9, 2025 ಅನ್ನು ಮತದಾನದ ದಿನಾಂಕ ಮತ್ತು ಎಣಿಕೆಯ ದಿನಾಂಕವಾಗಿ ನಿಗದಿಪಡಿಸಿತ್ತು. ನಿಗದಿಪಡಿಸಿದಂತೆ, ಸೆಪ್ಟೆಂಬರ್ 9, 2025 ರಂದು ನವದೆಹಲಿಯ ಸಂಸತ್ ಭವನ, ಮೊದಲ ಮಹಡಿಯ ವಸುಧಾ, ಕೊಠಡಿ ಸಂಖ್ಯೆ ಎಫ್-101 ರಲ್ಲಿ ಮತದಾನವನ್ನು ನಡೆಸಲಾಯಿತು. ಮತದಾನ ಮಾಡಲು ಅರ್ಹರಾಗಿದ್ದ ಒಟ್ಟು 781 ಮತದಾರರಲ್ಲಿ 767 ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು, ಅದರಲ್ಲಿ 15 ಮತಪತ್ರಗಳನ್ನು ಅಮಾನ್ಯವೆಂದು ಘೋಷಿಸಲಾಯಿತು. ಈ ಚುನಾವಣೆಯ ಚುನಾವಣಾ ಅಧಿಕಾರಿ, ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ, ಮತ ಎಣಿಕೆಯ ನಂತರ, ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರನ್ನು ಸೆಪ್ಟೆಂಬರ್ 9, 2025 ರಂದು ಭಾರತದ ಮುಂದಿನ ಉಪರಾಷ್ಟ್ರಪತಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿರು.

ಆಗಸ್ಟ್ 7, 2025 ರಂದು ಗೆಜೆಟ್ನಲ್ಲಿ ಕಾರ್ಯಕ್ರಮ ಅಧಿಸೂಚನೆಯನ್ನು ಪ್ರಕಟಿಸುವುದರೊಂದಿಗೆ ಪ್ರಾರಂಭಿಸಲಾದ ಪ್ರಕ್ರಿಯೆಯು ಇಂದು ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭಾರತ ಗಣರಾಜ್ಯದ ಹದಿನೈದನೇ ಉಪರಾಷ್ಟ್ರಪತಿಯನ್ನಾಗಿ ಚುನಾವಣಾ ಪ್ರಮಾಣ ಪತ್ರಕ್ಕೆ ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಡಾ. ಸುಖಬೀರ್ ಸಿಂಗ್ ಸಂಧು ಮತ್ತು ಚುನಾವಣಾ ಆಯುಕ್ತರಾದ ಡಾ. ವಿವೇಕ್ ಜೋಶಿ ಅವರು ಸಹಿ ಹಾಕುವುದರೊಂದಿಗೆ ಪೂರ್ಣಗೊಂಡಿದೆ. . ನಂತರ, ಅದರ ಸಹಿ ಮಾಡಿದ ಪ್ರತಿಯನ್ನು ಕೇಂದ್ರ ಗೃಹ ಕಾರ್ಯದರ್ಶಿಗೆ ಉಪ ಚುನಾವಣಾ ಆಯುಕ್ತರಾದ ಶ್ರೀ ಭಾನು ಪ್ರಕಾಶ್ ಯೆಟೂರು ಮತ್ತು ಕಾರ್ಯದರ್ಶಿ ಶ್ರೀ ಸುಮನ್ ಕುಮಾರ್ ದಾಸ್ ಅವರು ಹಸ್ತಾಂತರಿಸಿದರು, ಇದನ್ನು ಭಾರತದ ಹೊಸ ಉಪರಾಷ್ಟ್ರಪತಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಓದಲಾಗುತ್ತದೆ.ಚುನಾವಣೆಯನ್ನು ನಡೆಸುವಲ್ಲಿ ಅತ್ಯುತ್ತಮ ಸಹಕಾರ ನೀಡಿದ್ದಕ್ಕಾಗಿ ಚುನಾವಣಾಧಿಕಾರಿ, ಇಸಿಐ ವೀಕ್ಷಕರು, ದೆಹಲಿ ಪೊಲೀಸ್, ಸಿಆರ್ ಪಿಎಫ್ ನ ಸಂಪೂರ್ಣ ತಂಡಕ್ಕೆ ಆಯೋಗವು ತನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತದೆ .
