
ಸುದ್ದಿ 23 ಕಲ್ಬುರ್ಗಿ 1ವರ್ಷವಿಡೀ ಇಲ್ಲದ ಪರಿಸರ ಜಾಗೃತಿ ಗಣೇಶೋತ್ಸವದಲ್ಲಿ ಮಾತ್ರ ಏಕೆ : ದೇವೀಂದ್ರ ದೇಸಾಯಿ ಪ್ರಶ್ನೆ
ಕಲ್ಬುರ್ಗಿ : ನಿತ್ಯ ವಾಹನಗಳಿಂದ ಹಾಗೂ ವಿವಿಧ ಮೂಲಗಳಿಂದ ಪರಿಸರಕ್ಕೆ ಹಾನಿಯಾಗುತ್ತಾ ಇದೆ. ಇಡೀ ವರ್ಷ ಪರಿಸರ ಸಂರಕ್ಷಣೆ ಮಾಡದೇ ಕೇವಲ ಗಣೇಶ ಉತ್ಸವದಲ್ಲಿ ಮಾತ್ರ ಪರಿಸರ ಪ್ರೇಮಿಗಳಾದ ಅಧಿಕಾರಿ ಜಾಗೃತರಾಗುತ್ತಾರೆ ಏಕೆ? ನಿತ್ಯ ಸಂಚರಿಸುವ ವಾಹನಗಳಿಂದ ಹಾಗೂ ಕಾರ್ಖಾನೆಗಳು ಸೇರಿದಂತೆ ವಿವಿಧ ಮೂಲಗಳಿಂದ ನಿತ್ಯ ಪರಿಸರದ ಮೇಲೆ ಹಾನಿಗುತ್ತಿದೆ ಅದನ್ನು ತಡೆಗಟ್ಟಲು ಸಂಬಂಧ ಪಟ್ಟ ಇಲಾಖೆಗಳು ವಿಫಲವಾಗಿದೆ ಎಂದು ಭಾರತೀಯ ಜನತಾ ಪಕ್ಷದ ಕಲಬುರಗ ಓಬಿಸಿ ಮೋರ್ಚಾದ ನಗರಾಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಆಕ್ರೋಶ ಹೊರಹಾಕಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ವಿಶ್ವದಲ್ಲಿಯೇ ಭಾರತ ದೇಶವುದಲ್ಲಿ ತಿಂಗಳಲ್ಲಿ ವಿವಿಧ ಭಾಗಗಳಲ್ಲಿ ಒಂದಲ್ಲಾ ಒಂದು ಪ್ರದೇಶದಲ್ಲಿ ಹಬ್ಬ ಹರಿದಿನಗಳು ಆಚರಣೆ ಮಾಡಲಾಗುತ್ತದೆ. ದೇಶದಲ್ಲಿನ ಸಂಪ್ರದಾಯಗಳು ಆಚರಣೆಗಳು ವಿಭನ್ನವಾಗಿದ್ದರೂ ಕೆಲವು ಆಚರಣೆಗಳು ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ಆದರೆ ಎಲ್ಲರೂ ಅತೀ ಉತ್ಸಾಹದಿಂದ ಬಾಲಗಂಗಾಧರ ತಿಲಕ ಅವರು ಆರಂಭಿಸಿದ ಸಾರ್ವಜನಿಕ ಗಣೇಶ ಉತ್ಸವವು ದೇಶದ ಏಕತೆಗೆ ಹಾಗೂ ಸಾಮಾಜ ಏಕತೆಗೆ ಗಣೇಶ ಉತ್ಸವವು ಒಂದು ಪ್ರಮುಖ ಕಾರಣವಾಗಿ ಜನಪ್ರಿಯಗೊಂಡಿತು. ಸ್ವಾತಂತ್ರö್ಯಕ್ಕಾಗಿ ಆರಂಭವಾದ ಉತ್ಸವವು ಇಂದು ಸಮಾಜದ ಪ್ರತಿಯೊಬ್ಬ ನಾಗರಿಕರು ಉಲ್ಲಾಸ ಹಾಗೂ ಹರ್ಷದಿಂದ ಆಚರಣೆ ಮಾಡುವ ಹಬ್ಬವಾಗಿ ಮಾರ್ಪಟ್ಟಿದೆ.
ಮೊದಲಿಗೆ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರಮುಖ ಸ್ಥಾನದಲ್ಲಿ ಪ್ರತಿಷ್ಠಾಪಿಸಿ ಉತ್ಸವ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಕ್ರಮೇಣ ಬೇಡಿಕೆ ಹೆಚ್ಚಾದಂತೆ ಪಿಓಪಿ ಸುಣ್ಣದ ಮೂಲಕ ಗಣೇಶ ಮೂರ್ತಿಗಳನ್ನು ತಯ್ಯಾರು ಮಾಡಲಾಗುತ್ತಿದೆ. ಇದಕ್ಕೆ ಈ ಹಿಂದೆ ಇರುವ ಆಡಳಿತದಲ್ಲಿರುವ ಸರ್ಕಾರಗಳು ಪಿಓಪಿ ಗಣೇಶ ಮೂರ್ತಿಗಳನ್ನು ತಯ್ಯಾರಿಕೆಗೆ ಅನುಮತಿ ನೀಡಿದ್ದವು.

ಆದರೆ ಮಣ್ಣಿನ ಗಣೇಶ ಮೂರ್ತಿಗಳ ತಯ್ಯಾರಿಕೆ ಎಷ್ಟು ಇದೆ. ಬೃºತ್ತÀ ಮೂರ್ತಿಗಳು ಮಣ್ಣಿನಿಂದ ತಯಾರಿಕೆಯಾಗುತ್ತಿದೆಯೇ? ಎಂದು ಪ್ರಶ್ನಿಸಬೇಕಾಗುತ್ತದೆ. ದೇವೀಂದ್ರ ದೇಸಾಯಿ ಕಲ್ಲೂರ( ಭಾರತೀಯ ಜನತಾ ಪಕ್ಷದ ಕಲಬುರಗಿ ಓಬಿಸಿ ಮೋರ್ಚಾದ ನಗರಾಧ್ಯಕ್ಷರು).
