ಮಾತೋಶ್ರೀ ಮನೋರಮಾ ಮಧ್ವರಾಜ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಮೆರುಗು.

ಸುದ್ದಿ 23 ಅಫಜಲಪುರ

ಮಾತೋಶ್ರೀ ಮನೋರಮಾ ಮಧ್ವರಾಜ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಮೆರುಗು

ಅಫಜಲಪುರ: ತಾಲೂಕಿನ ಮಾತೋಶ್ರೀ ಮನೋರಮಾ ಮಧ್ವರಾಜ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಇಂದು ತಾಲೂಕ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಉತ್ತಮ ಪ್ರತಿಭೆಯನ್ನು ತೋರಿದ್ದಾರೆ. ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ದೈಹಿಕ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ತಾಲೂಕಿನ ವಿವಿಧ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಾತೋಶ್ರೀ ಮನೋರಮಾ ಮಧ್ವರಾಜ ಶಾಲಾ ವಿದ್ಯಾರ್ಥಿಗಳು ಹಲವು ವಿಭಾಗಗಳಲ್ಲಿ ಜಯ ಸಾಧಿಸಿ ತಾಲೂಕ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವಿಜೇತರ ಪಟ್ಟಿ:ವಾಲಿಬಾಲ್ ಬಾಲಕರು – ಪ್ರಥಮ ಸ್ಥಾನವಾಲಿಬಾಲ್ ಬಾಲಕಿಯರು – ಪ್ರಥಮ ಸ್ಥಾನ100 ಮೀ. ಓಟ – ಪ್ರಥಮ: ಸೃಷ್ಟಿ ತಂದೆ ಯಲ್ಲಾಲಿಂಗ ದ್ವಿತೀಯ: ಸೇವಂತಿ ತಂದೆ ಶ್ರೀಮಂತ400 ಮೀ. ಓಟ – ಪ್ರಥಮ: ಸೇವಂತಿ ತಂದೆ ಶ್ರೀಮಂತ ದ್ವಿತೀಯ: ಸೃಷ್ಟಿ ತಂದೆ ಯಲ್ಲಾಲಿಂಗಉದ್ದ ಜಿಗಿತ – ಪ್ರಥಮ: ಸೇವಂತಿ ತಂದೆ ಶ್ರೀಮಂತಚಕ್ರ ಎಸೆತ – ದ್ವಿತೀಯ: ಸೃಷ್ಟಿ ತಂದೆ ಯಲ್ಲಾಲಿಂಗಗುಂಡು ಎಸೆತ – ದ್ವಿತೀಯ: ರೇಣುಕಾ200 ಮೀ. ಓಟ – ಪ್ರಥಮ: ರಾಧಿಕಾ400 ಮೀ. ಓಟ – ಪ್ರಥಮ: ದರ್ಶನ್ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಅಧ್ಯಕ್ಷರು ಶ್ರೀ ಮಲ್ಲಿಕಾರ್ಜುನ ಯಂಕಂಚಿ, ಕಾರ್ಯದರ್ಶಿ ಶ್ರೀ ಬಸವರಾಜ ಸಪ್ಪನಗೋಳ, ಆಡಳಿತ ಮಂಡಳಿ ನಿರ್ದೇಶಕರು, ಶಾಲೆಯ ಮುಖ್ಯಗುರುಗಳು ಹಾಗೂ ದೈಹಿಕ ಶಿಕ್ಷಕರು ಎಸ್.ಎಂ. ಕರಿಕಲ್ ಸೇರಿದಂತೆ ಶಿಕ್ಷಕ-ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದಿನ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿಯೂ ಇದೇ ರೀತಿ ಜಯಗಳಿಸಲಿ ಎಂದು ಶುಭ ಹಾರೈಸಿದ್ದಾರೆ…

Leave a Reply

Your email address will not be published. Required fields are marked *