
ಕುಷ್ಟಗಿ: ತಾಲೂಕಿನ ಎಸ್ ಎಂ ಸಭಾಭವನದಲ್ಲಿ ಕುಷ್ಟಗಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು ಕೊಪ್ಪಳ ಜಿಲ್ಲಾ ಸಹಕಾರಿ ಆರ್ ಕೆ ಡಿ ಸಿ ಸಿ ಬ್ಯಾಂಕ್ ರಾಯಚೂರ್ ಮತ್ತು ಸಹಕಾರಿ ಇಲಾಖೆ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ತರಬೇತಿ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ತರಬೇತಿ ಕಾರ್ಯಗಾರದಲ್ಲಿ ಜ್ಯೋತಿ ಬೆಳಗುಸೋ ಮುಖಾಂತರ ಜಿಲ್ಲಾ ಸಹಕಾರಿ ಯೂನಿಯನ್ ನ ಉಪಾಧ್ಯಕ್ಷರಾದ ಹಾಲಯ್ಯ ಉಡೇ ಜಾಲಿಉದ್ಘಾಟಿಸಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಇಂತಹ ತರಬೇತಿಯಲ್ಲಿ ಭಾಗವಹಿಸುವ ಮುಖಾಂತರ ತರಬೇತಿನ ಪ್ರಯೋಜನ ಪಡೆದುಕೊಂಡು ಸಹಕಾರ ಸಂಸ್ಥೆಗಳ ಏಳಿಗೆಗೆ ಶ್ರಮಿಸೋಣವೆಂದರು ಕರ್ನಾಟಕ ರಾಜ್ಯ ಸಹಕಾರ ಮಾಮ ಮಂಡಲ ಮತ್ತು ಜಿಲ್ಲಾ ಸಹಕಾರಿ ಅಧ್ಯಕ್ಷರಾದ ಶೇಖರ ಗೌಡ ಮಾಲಿ ಪಾಟೀಲ್ ರವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಜಿಲ್ಲಾ ಸಹಕಾರಿಗಳನ್ನು ಇಂದಿಗೆ 25 ವರ್ಷ ಸೇವೆ ಸಲ್ಲಿಸಿ ಸಾರ್ಥಕ ಸೇವೆಯನ್ನು ಸಲ್ಲಿಸುವ ಮುಖಾಂತರ ರಜತ ಮಹೋತ್ಸವವನ್ನು ಆಚರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಹಕಾರ ಶಿಕ್ಷಣ ತರಬೇತಿ ಮತ್ತು ಪ್ರಚಾರ ಮೂಲಕ ಸೇವೆಯನ್ನು ನೀಡುತ್ತಾ ಬಂದಿದೆ ಈ ನಿಟ್ಟಿನಲ್ಲಿ ನಾವು ನೀವೆಲ್ಲರೂ ಸಹಕರ ಕ್ಷೇತ್ರವನ್ನು ಬಲಪಡಿಸುವ ಜೊತೆಗೆ ಇಂಥ ತರಬೇತಿಯ ಪ್ರಯೋಜನ ಪಡೆದುಕೊಂಡು ತಮ್ಮ ಸಹಕಾರ ಸಂಘಗಳನ್ನ ಇನ್ನು ಉತ್ತಮ ಸ್ಥಾನದಲ್ಲಿ ಬೆಳೆಸೋಣವೆಂದರು ವೇದಿಕೆಯಲ್ಲಿ ವಿಶ್ರಾಂತ ಸಹಕಾರ ಸಂಘಗಳ ಸಾಯಕ್ಕೆ ಬಂದ ಕರಾದ ಅಲೆಯ ಕತ್ತಲಿ ಜಿಲ್ಲಾ ಸಹಕಾರಿ ನಿರ್ದೇಶಕರುಗಳಾದ ವೆಂಕಟೇಶ್ ಶೆಟ್ಟರ್ ಮಾಂತೇಶ್ ಸಜ್ಜನ್ ಡಿಸಿಸಿ ಬ್ಯಾಂಕಿನ ಶಾಕಾ ವ್ಯವಸ್ಥಾಪಕರಾದ ಶಿವರುದ್ರಯ್ಯ ಸ್ವಾಮಿ ಚಿನ್ನಪ್ಪ ವಜ್ರಮುಟ್ಟಿ ಸವಿತಾ ಜೋಶಿ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಸ್ವಾತಿ ಎಚ್ ಜಿಲ್ಲಾ ಸಹಕಾರಿ ಯೂನಿಯನ್ ನ ಸಿ ಇ ಓ ಅಕ್ಷಯ್ ಕುಮಾರ್ ವ್ಯವಸ್ಥಾಪಕರಾದ ರಾಜಶೇಖರ್ ಹೊಸಮನಿ ಡಿಸಿಸಿ ಬ್ಯಾಂಕಿನ ಕ್ಷೇತ್ರ ಅಧಿಕಾರಿಗಳಾದ ಅಲ್ಲಮಪ್ರಭು ಡಾಣೆ ಚಿನ್ಮಯಿ ಪಾಟೀಲ್ ಇವರು ಉಪಸಿತರಿತದ್ದರು.

ಸಂದರ್ಭದಲ್ಲಿ ಬಸವರಾಜ್ ನೀಲರಗಿ ಹಿರೇಬನ್ನಿಗೋಳ ಸಿಇಒ ಇವರು ಪ್ರಾರ್ಥಿಸಿದರು ಪ್ರಾಸ್ತವಿಕವಾಗಿ ಜಿಲ್ಲಾ ಸಹಕಾರ ಯೂನಿಯನ್ ನ ಸಿಇಓ ಅಕ್ಷಯ್ ಕುಮಾರ್ ಮಾತನಾಡಿದರು ರಾಜಶೇಖರ ಹೊಸಮನಿ ನಿರೂಪಿಸಿದರು ಕೊನೆಯಲ್ಲಿ ಶರಣಪ್ಪ ಮುದೇನೂರು ವಂದಿಸಿದರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.