
ಕಾರ್ಚಿಕಾಯಿ ವಾರದಲ್ಲಿ ಮೂರು ನಾಲ್ಕು ಬಾರಿ ಬಿಸಿ ರೊಟ್ಟಿ ಜೊತೆಗೂ ಸೈ ಕಟಿ ರೊಟ್ಟಿ ಜೊತೆಗೂ ಜೈ….ಇನ್ನೇನು ಕಾರ್ಚಿಕಾಯಿ ಪರ್ವ ಶುರುವಾಗಿದೆ ನೆನ್ನೆ ಶುಕ್ರವಾರ ನಮ್ಮ ಶಹಾಪುರದಲ್ಲಿ ದೊಡ್ಡ ಸಂತೆ ಸುತ್ತ ನಾಲ್ಕು ತಾಲೂಕ ಯಾದಗಿರಿ, ದೇವದುರ್ಗ, ಸಿಂದಗಿ ಮತ್ತು ಜೇವರ್ಗಿಯ ಜನ ವ್ಯಾಪಾರ ಮತ್ತು ಖರೀದಿಗಾಗಿ ನಮ್ಮ ಶಹಾಪುರಕ್ಕೆ ಬರುತ್ತಾರೆ ಅಷ್ಟು ಪ್ರಸಿದ್ಧಿ ನಮ್ಮ ಸಂತೆಹಾಗೆ ಶುಕ್ರವಾರದಂದು ತರಕಾರಿ ವ್ಯಾಪಾರ ಕೂಡ ವಿಶೇಷವಾಗಿರುತ್ತದೆ.

ಅದರಲ್ಲಿಯೂ ವಿಶೇಷ ಎಂದರೆ ಕಳೆಯಾಗಿ ನೈಸರ್ಗಿಕವಾಗಿ ಬೆಳೆಯುವ ಕಾರ್ಚಿಕಾಯಿ ಮತ್ತು ಹತ್ತರಕಿ ಪಲ್ಯ ಮಳೆಗಾಲದ ಸ್ಪೆಷಲ್.100 ರೂಪಾಯಿಗೆ ಒಂದು ಸೇರು ಅಥವಾ ಕೇಜಿ ಕೊಡುತ್ತಾರೆ ಈ ಕಾರ್ಚಿಕಾಯಿ ಆದರೂ ಕಾಲು ಕೇಜಿಯಾದರು ಖರೀದಿಸಿ ತಿನ್ನಬೇಕೆಂಬುವ ಹಂಬಲ ಜನಕ್ಕಿರುತ್ತದೆ.

ನಾನು ಬೆಳಿಗ್ಗೆ ಕಾಲು ಕೇಜಿ ತಂದೆ ಅದರ ತೊಟ್ಟು ತೆಗೆದು ತೊಳೆದು ಹಂಚಿನ ಮೇಲೆ ಸ್ವಲ್ಪ ಎಣ್ಣೆ ಸ್ವಲ್ಪ ಈರುಳ್ಳಿ ಜಜ್ಜಿದ ಬೆಳ್ಳುಳ್ಳಿ ಹಸಿ ಮೆಣಸಿನಕಾಯಿ ( ಅಥವಾ ಖಾರದ ಪುಡಿ ) ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹುರಿದು ಅದಕ್ಕೆ ಕಾರ್ಚಿಕಾಯಿ ಸೇರಿಸಿ ಚೆನ್ನಾಗಿ ಹುರಿದರೆ ಸಿದ್ಧವಾಗುತ್ತೆ.ಬಿಸಿ ರೊಟ್ಟಿ ಜೊತೆಗೂ ಸೈ ಕಟಿ ರೊಟ್ಟಿ ಜೊತೆಗೂ ಜೈ