ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿ ಸಿದ್ದೇಗೌಡ* *ವಜಾಗೊಳಿಸಬೇಕು ಎಂಬ ಆಗ್ರಹದೊಂದಿಗೆ SDPI ಪ್ರತಿಭಟನೆ

*ಬೆಂಗಳೂರು, ಜೂನ್ 25:*ಮುಸ್ಲಿಂ ವಿರೋಧಿ ಕಾಂಗ್ರೆಸ್ ಶಾಸಕ ರಮೇಶ್ ಬಂಡಿ ಸಿದ್ದೇಗೌಡರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೆಂಗಳೂರು ಜಿಲ್ಲಾ ಸಮಿತಿಯು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿತು.ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಂಡಿಸಿದ್ದೇಗೌಡ ‘ಮುಸ್ಲಿಂ ಸಮುದಾಯದವರಿಗೆ ಜಮೀನು ನೀಡಿದರೆ ಅಧಿಕಾರಿಗಳನ್ನು ನೇಣಿಗೆ ಹಾಕುತ್ತೇನೆ’ ಎಂಬ ಹೇಳಿಕೆಯು ಧರ್ಮದ್ವೇಷವನ್ನು ಬಹಿರಂಗಪಡಿಸುತ್ತದೆ. ಮುಸ್ಲಿಂ ಮತವನ್ನು ಪಡೆದ ಶಾಸಕರ ಧರ್ಮದ್ವೇಷ ಅಕ್ಷಮ್ಯ. ಇದು ಕಾಂಗ್ರೆಸ್ ನ ಲಜ್ಜೆಗೆಟ್ಟ ರಾಜಕೀಯವನ್ನು ಜಗಜ್ಜಾಹಿರುಗೊಳಿಸಿದೆ ಎಂದು ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಜಾವೆದ್ ಅಸಮ್ ರವರು ಶಾಸಕರ ಕೆಟ್ಟ ಮನಸ್ಥಿತಿಯ ವಿರುದ್ಧ ಕಿಡಿಕಾರಿದರು.ಬೆಂಗಳೂರು ಉತ್ತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಜುಬೇರ್ ಮಾತನಾಡಿ, ಪಕ್ಷದೊಳಗಿನ ಆರ್.ಎಸ್.ಎಸ್ ಮನೋಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ ರಾಹುಲ್ ಗಾಂಧಿಯ ಹೇಳಿಕೆಗೆ ರಮೇಶ್ ಬಂಡಿಸಿದ್ದೇಗೌಡರ ಮಾತುಗಳು ವಕಾಲತ್ತು ನೀಡಿದೆ. ಕಾಂಗ್ರೆಸ್ ಪಕ್ಷವು ಈ ಕೋಮು ದ್ವೇಷಿಯನ್ನು ಶಾಸಕ ಸ್ಥಾನದಿಂದ ವಜಾಗೊಳಿಸದಿದ್ದರೆ ಹೋರಾಟವು ತೀವ್ರವಾಗುವ ಎಚ್ಚರಿಕೆ ನೀಡಿದರು. ಬಿಜೆಪಿ ಸರಕಾರದ ದುರಾಡಳಿತ ಮತ್ತು ದ್ವೇಷ ರಾಜಕಾರಣದಿಂದ ಬೇಸತ್ತು ಕಾಂಗ್ರೆಸ್‌ಗೆ ಅಧಿಕಾರ ನೀಡಿದ ಜನತೆಗೆ ಕಾಂಗ್ರೆಸ್ ಶಾಸಕರ ಧರ್ಮ ದ್ವೇಷವು ಬಿ.ಜೆ.ಪಿ ಯನ್ನು ಮೀರಿಸಿದ್ದಾಗಿದೆ.

ಕಾಂಗ್ರೆಸ್ ನ ನಕಲಿ ‘ಜಾತ್ಯಾತೀತ’ ಹಣೆಪಟ್ಟಿಯನ್ನು ಕಳಚಿ ಪ್ರಜಾಪ್ರಭುತ್ವ, ಸಂವಿಧಾನದ ರಕ್ಷಣೆಗಾಗಿ ಪರಿಹಾರದ ರಾಜಕೀಯ ಶಕ್ತಿಯಾದ SDPI ಯನ್ನು ಬೆಂಬಲಿಸಿ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷರು ಸಲೀಂ ಅಹ್ಮದ್ ಕರೆ ನೀಡಿದರು.ಪ್ರತಿಭಟನೆಯಲ್ಲಿ ಮುಷ್ತಾಕ್ ಅಲಿ ಖಾನ್ ಜಿಲ್ಲಾ ಕಾರ್ಯದರ್ಶಿ, ಆಯೇಷಾ ಶಬ್ಬೀರ್ SWC ಸದಸ್ಯೆ, ಜಿಲ್ಲಾ ನಾಯಕರು, ಕಾರ್ಯಕರ್ತರು ಹಾಗೂ ಹಲವಾರು ಸಾರ್ವಜನಿಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *