ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಪದ್ಧತಿ ಜಗತ್ತಿನ ಸಾಮಾಜಿಕ ಪಿಡುಗು, ಇದನ್ನು ಕೊನೆಗಾಣಿಸಬೇಕು. ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕು

ಸರ್ಕಾರದಿಂದ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿಷೇಧಿಸಲಾಗಿದೆಗದಗ (ಕರ್ನಾಟಕ ವಾರ್ತೆ) ಜೂನ 23: ದೇಶ ಸೇರಿದಂತೆ ಕರ್ನಾಟಕದಲ್ಲಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಪದ್ಧತಿ ಕೊನೆಗಾಣಿಸಲು ಕಳೆದ ಹಲವು ವರ್ಷಗಳಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ಪ್ರತಿಯೊಂದು ಮಗು ಸುರಕ್ಷಿತವಾಗಿರುವಂತೆ ಮತ್ತು ಮಕ್ಕಳ ಪೂರಕ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಬಾಲಕಾರ್ಮಿಕ ಪದವನ್ನು ಸಾಮಾನ್ಯವಾಗಿ ಮಕ್ಕಳ ಬಾಲ್ಯ, ಅವರ ಸಾಮರ್ಥ್ಯ ಮತ್ತು ಅವರ ಘನತೆಯನ್ನು ಕಸಿದುಕೊಳ್ಳುವ ಕೆಲಸ ಎಂದು ವ್ಯಾಖ್ಯಾನಿಸಲಾಗುತ್ತದೆ ಮತ್ತು ಅದು ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹಾನಿಕಾರಕವಾಗಿದೆ.ಕುಟುಂಬದಲ್ಲಿನ ಬಡತನ, ಅನಕ್ಷರತೆ, ಶಿಕ್ಷಣದ ಮಹತ್ವದ ಕುರಿತು ಅರಿವಿಲ್ಲದಿರುವುದು, ವಲಸೆ ಹೋಗುವುದು, ತೀವ್ರತರಹದ ಕಾಯಿಲೆಯಿಂದ ಬಳಲುತ್ತಿರುವ ಪೋಷಕರು, ಅಸ್ಪöÈಶ್ಯತೆ ಹೀಗೆ ಅನೇಕ ಕಾರಣಗಳಿಂದ ಮಕ್ಕಳು ಶಾಲೆಗೆ ಹೋಗದೇ ಕೆಲಸಕ್ಕೆ ಹೋಗಿ ಬಾಲಕಾರ್ಮಿಕರಾಗುತ್ತಾರೆ.ಬಾಲ ಕಾರ್ಮಿಕತೆಯನ್ನು ಅಧ್ಯಯನ ಮಾಡಿ ಅದನ್ನು ತಡೆಗಟ್ಟಲು 1979 ರಲ್ಲಿ ಆಗಿನ ಕೇಂದ್ರ ಸರ್ಕಾರ ಗುರುಪಾದಸ್ವಾಮಿ ಕಮಿಟಿಯನ್ನು ರಚಿಸಿತು. ನಂತರ 1986 ರಲ್ಲಿ ಬಾಲ ಕಾರ್ಮಿಕ ನಿರ್ಮೂಲನಾ ಕಾಯ್ದೆಯು ಜಾರಿಗೆ ಬಂದಿತು. ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆ 1986 ರನ್ವಯ ಎಲ್ಲ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಹಾಗೂ ಸಂಜ್ಞೆಯ ಅಪರಾಧವಾಗಿದೆ.ಒಂದು ವೇಳೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ಮಾಲೀಕರಿಗೆ 6 ತಿಂಗಳಿAದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 20,000 ರಿಂದ 50,000 ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ ಪದ್ಧತಿಯನ್ನು ಪೋತ್ಸಾಹಿಸುವ ಪೋಷಕರಿಗೂ ಸಹ ಲಘು ಶಿಕ್ಷಾ ಪ್ರಾವಧಾನವಿದ್ದು, ಪುನರಾವರ್ತಿತ ಅಪರಾದಕ್ಕೆ ರೂ.10,000 ಗಳ ದಂಡ ವಿಧಿಸಬಹುದಾಗಿದೆ .ಬನ್ನಿ ಬಾಲ ಕಾರ್ಮಿಕರನ್ನು ದುಡಿತದಿಂದ ಬಿಡಿಸೋಣ. ಬನ್ನಿ ಮಕ್ಕಳ ಬಾಲ್ಯವನ್ನು ರಕ್ಷಿಸಿ ಬೆಳೆಸಲು ಬದ್ಧರಾಗೋಣ. ಶಿಕ್ಷಣವೇ ಶಕ್ತಿ ಬಾಲ ದುಡಿಮೆಗೆ ಮುಕ್ತಿ ಎಂಬ ಘೋಷವಾಕ್ಯಗಳ ಮೂಲಕ ಜನಜಾಗೃತಿಯನ್ನು ಹೆಚ್ಚು ಪ್ರಸಾರ ಮಾಡುವ ಮೂಲಕ ಜನಸಾಮಾನ್ಯರಲ್ಲಿ ಹೆಚ್ಚು ಚರ್ಚೆಯಾಗಬೇಕಾಗಿದೆ ಬಾಲಕಾರ್ಮಿಕರು ಎಂದರೆ ಯಾರು ?ಬಾಲಕಾರ್ಮಿಕರು ಎಂದರೆ 14 ವರ್ಷದೊಳಗಿನ ಮಕ್ಕಳು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರ ಕಾರ್ಮಿಕರು, ಯಾವುದೇ ಹುಡುಗ ಹುಡುಗಿಯರು ಯಾವುದೇ ಕೆಲಸವನ್ನು ‘ದುಡಿಮೆ’ಯಾಗಿ (ಸಂಬಳಕ್ಕೆ) ಕೆಲಸ ಮಾಡುತ್ತಿದ್ದರೆ ಅಂಥವರನ್ನು ‘ಬಾಲ ಕಾರ್ಮಿಕರು’ ಎಂದು ಕರೆಯುತ್ತಾರೆ.ಅರಿವು ಮತ್ತು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು, : ಬಡವರನ್ನು ಬಡತನದಿಂದ ಹೊರತರುವ ಯತ್ನ ಮಾಡಬೇಕು. ಅಂದಾಗ ಮಾತ್ರ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಗೆ ಭವಿಷ್ಯದಲ್ಲಿ ಉತ್ತಮ ಬೆಲೆ ಬರುತ್ತದೆ. ಇದನ್ನು ಸಂಪೂರ್ಣವಾಗಿ ತೊಡೆದುಹಾಕುವ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯ. ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗಾಣಿಸಿ!’ ಎಂಬ ಘೋಷಣೆಯೊಂದಿಗೆ 2025 ರ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ಎಲ್ಲ ಕಚೇರಿಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಅಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಬೇಕು. ಮತ್ತು ಅನುಷ್ಠಾನ ತರುವಲ್ಲಿ ಎಲ್ಲರೂ ಶ್ರಮಿಸಬೇಕಾಗಿದೆ

.ಬಾಲ ಕಾರ್ಮಿಕರ ಯಾವ ರೂಪಗಳು ಹೆಚ್ಚು ಸಾಮಾನ್ಯವಾಗಿದೆ ತೋಟಗಳಲ್ಲಿ ಮತ್ತು ಕೃಷಿಯಲ್ಲಿ ಕುಟುಂಬ ಆಧಾರಿತ ಬಾಲ ಕಾರ್ಮಿಕರು ಹಲವರು ಚಿಕ್ಕ ಮಕ್ಕಳಾಗಿದ್ದರೆ. ಪಾಲಕರು ಎಚ್ಚರವಹಿಸಬೇಕು ಶಿಕ್ಷಣಕ್ಕೆ ಆದ್ಯತೆ ಸಿಗಬೇಕುಹೆಚ್ಚಿನ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಪದ್ಧತಿ-ಹುಡುಗರು ಮತ್ತು ಹುಡುಗಿಯರು ಇಬ್ಬರೂ ಕೃಷಿಯಲ್ಲಿಯೇ ಭಾರತಾದ್ಯಂತ ಬಾಲ ಕಾರ್ಮಿಕ ಪದ್ಧತಿಯಲ್ಲಿ ತೊಡಗಿರುವ ಸುಮಾರು ಮಕ್ಕಳು ಹೊಲಗಳಲ್ಲಿ ತೋಟಗಳಲ್ಲಿ ಅಥವಾ ಸಣ್ಣ ಕುಟುಂಬ ಉದ್ಯಮಗಳಲ್ಲಿ ನಡೆಯುತ್ತಾರೆ. ಕುಟುಂಬಗಳು ಸುರಕ್ಷಿತ ಕೆಲಸದ ವಾತಾವರಣವನ್ನು ಒದಗಿಸುತ್ತವೆ ಎಂಬ ಸಾಮಾನ್ಯ ಗ್ರಹಿಕೆಗಳ ಹೊರತಾಗಿಯೂ, ಕುಟುಂಬ ಆಧಾರಿತ ಬಾಲ ಕಾರ್ಮಿಕರು ಆಗಾಗ್ಗೆ ಅಪಾಯಕಾರಿ – ಮಗುವಿನ ಆರೋಗ್ಯ, ಸುರಕ್ಷತೆ ಅಥವಾ ನೈತಿಕ ಬೆಳವಣಿಗೆಗೆ ಹಾನಿ ಮಾಡುವ ಸಾಧ್ಯತೆಯಿದೆ. ಎಂದರೆ ತಪ್ಪಾಗಲಾರದುಬಾಲ ಕಾರ್ಮಿಕ ಪದ್ಧತಿಗೆ ಸಂಬAಧಿಸಿದ ದೊಡ್ಡ ಅಪಾಯಗಳು ಯಾವುವು?ಬಾಲ ಕಾರ್ಮಿಕ ಪದ್ಧತಿ ಎಲ್ಲಿ ಅಥವಾ ಹೇಗೆ ಸಂಭವಿಸಿದರೂ, ಮಕ್ಕಳ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುತ್ತದೆ. ಕಾರ್ಮಿಕ ಪದ್ಧತಿಗೆ ಬಲಿಯಾದ ಅನೇಕ ಮಕ್ಕಳು ಶಾಲಾ ಶಿಕ್ಷಣ ಮತ್ತು ಆರೋಗ್ಯ ಸೇವೆಯಿಂದ ವಂಚಿತರಾಗುತ್ತಾರೆ – ಆಗಾಗ್ಗೆ ಅವರಿಗೆ ಅದು ಹೆಚ್ಚು ಅಗತ್ಯವಿರುವ ಸಮಯದಲ್ಲಿ.ಗಣಿಗಾರಿಕೆಯಲ್ಲಿ : ಮಕ್ಕಳು ನಿಯಮಿತವಾಗಿ ಅಪಾಯಕಾರಿ ರಾಸಾಯನಿಕಗಳು ಮತ್ತು ಯಂತ್ರೋಪಕರಣಗಳಿಗೆ ಒಡ್ಡಿಕೊಳ್ಳುತ್ತಾರೆ ಮತ್ತು ತೀವ್ರ ತಾಪಮಾನದಲ್ಲಿ ದೀರ್ಘಕಾಲದವರೆಗೆ ಕಠಿಣ ಕೆಲಸಗಳನ್ನು ಮಾಡುವಂತೆ ಒತ್ತಾಯಿಸಲಾಗುತ್ತದೆ. ಗಣಿಗಾರಿಕೆಯಲ್ಲಿ, ಅವರು ಆಳವಾದ ಭೂಗತ ಗುಂಡಿಗಳಲ್ಲಿ ಕೆಲಸ ಮಾಡಲು, ಭಾರವಾದ ಬಂಡೆಗಳನ್ನು ಸಾಗಿಸಲು ಮತ್ತು ಅದಿರಿನಿಂದ ಖನಿಜಗಳು ಅಥವಾ ಅಮೂಲ್ಯ ಲೋಹಗಳನ್ನು ಬೇರ್ಪಡಿಸಲು ವಿಷಕಾರಿ ರಾಸಾಯನಿಕಗಳನ್ನು ಬಳಸಲು ಒತ್ತಾಯಿಸಲ್ಪಡಬಹುದು.ಮೀನುಗಾರಿಕೆಯಲ್ಲಿ : ಮಕ್ಕಳು ತಮ್ಮ ಕುಟುಂಬಗಳಿAದ ದೂರವಿರುವಾಗ, ಪ್ರತಿಕೂಲ ಹವಾಮಾನದ ಬೆದರಿಕೆಯ ಅಡಿಯಲ್ಲಿ ಸಮುದ್ರದಲ್ಲಿ ದೀರ್ಘಕಾಲ ಕಳೆಯಬೇಕಾಗುತ್ತದೆ. ಬೀದಿಗಳಲ್ಲಿ, ಸಂಚಾರ ಮತ್ತು ವಿಷಪೂರಿತ ಹೊಗೆಯು ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಪಾಯವೂ ಹೆಚ್ಚಾಗುತ್ತದೆ.ಕೆಲಸಕ್ಕೆ ಕರೆದೊಯ್ಯಲ್ಪಡುವ ಮಕ್ಕಳು ಎದುರಿಸಬಹುದಾದ ಅಪಾಯಗಳಲ್ಲಿ ಇವು ಕೆಲವೇ ಕೆಲವು. ಇನ್ನೂ ಹೆಚ್ಚಿನದಾಗಿ, ಕೆಲವು ರೀತಿಯ ಬಾಲ ಕಾರ್ಮಿಕರ ಪ್ರತ್ಯೇಕ ಸ್ವಭಾವವು ಅವರನ್ನು ದುರುಪಯೋಗ ಮತ್ತು ಕಳ್ಳಸಾಗಣೆಗೆ ಒಳಪಡಿಸುವ ಗಮನಾರ್ಹ ಅಪಾಯಕ್ಕೆ ಸಿಲುಕಿಸುತ್ತದೆ.ಬಾಲ ಕಾರ್ಮಿಕ ಪದ್ಧತಿ ಏಕೆ ಸಂಭವಿಸುತ್ತದೆ? : ಮಕ್ಕಳನ್ನು ವಿವಿಧ ಕಾರಣಗಳಿಗಾಗಿ ಕೆಲಸಕ್ಕೆ ತಳ್ಳಬಹುದು. ಹೆಚ್ಚಾಗಿ, ಬಾಲ ಕಾರ್ಮಿಕ ಪದ್ಧತಿಯು ಕುಟುಂಬಗಳು ಆರ್ಥಿಕ ಸವಾಲುಗಳನ್ನು ಅಥವಾ ಅನಿಶ್ಚಿತತೆಯನ್ನು ಎದುರಿಸಿದಾಗ ಸಂಭವಿಸುತ್ತದೆ – ಬಡತನ, ಆರೈಕೆ ಮಾಡುವವರ ಹಠಾತ್ ಅನಾರೋಗ್ಯ ಅಥವಾ ಪ್ರಾಥಮಿಕ ವೇತನದಾರರ ಉದ್ಯೋಗ ನಷ್ಟದಿಂದಾಗಿ.ಸAಘರ್ಷ ಮತ್ತು ಕಿತ್ತುಹಾಕಲ್ಪಟ್ಟ ವಲಸೆ ಮತ್ತು ನಿರಾಶ್ರಿತ ಮಕ್ಕಳು ಸಂಘರ್ಷ ಮತ್ತು ವಿಪತ್ತು ಅಥವಾ ಬಡತನದಿಂದ ಕಿತ್ತುಹಾಕಲ್ಪಟ್ಟ ವಲಸೆ ಮತ್ತು ನಿರಾಶ್ರಿತ ಮಕ್ಕಳು – ವಿಶೇಷವಾಗಿ ಅವರು ಒಂಟಿಯಾಗಿ ವಲಸೆ ಹೋಗುತ್ತಿದ್ದರೆ ಅಥವಾ ತಮ್ಮ ಕುಟುಂಬಗಳೊAದಿಗೆ ಅನಿಯಮಿತ ಮಾರ್ಗಗಳನ್ನು ಬಳಸುತ್ತಿದ್ದರೆ – ಬಲವಂತವಾಗಿ ಕೆಲಸಕ್ಕೆ ಸೇರಿಸಲ್ಪಡುವ ಮತ್ತು ಕಳ್ಳಸಾಗಣೆ ಮಾಡುವ ಅಪಾಯವಿದೆ.ದೇಶ ಸೇರಿದಂತೆ ಕರ್ನಾಟಕದಲ್ಲಿ ಬಾಲ ಕಾರ್ಮಿಕ ಪದ್ಧತಿ ಕೊನೆಗಾಣಿಸಲು ಕಳೆದ ಹಲವು ವರ್ಷಗಳಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ, ಕೋವಿಡ್? ಕಾರಣದಿಂದ ಅಂದುಕೊAಡ ಪ್ರಮಾಣದಷ್ಟು ತಡೆಯಲಾಗಲಿಲ್ಲ.ಈ ವೇಳೆ ಸಾವಿರಾರು ಕುಟುಂಬಗಳು ಬಡತನಕ್ಕೆ ತಳ್ಳಲ್ಪಟ್ಟವು. ಹೆಚ್ಚಿನ ಸಂಖ್ಯೆಯ ಪೋಷಕರು ತಮ್ಮ ಮಕ್ಕಳನ್ನು ಬಲವಂತವಾಗಿ ಶಾಲೆಗೆ ಕಳಿಸುವುದನ್ನು ನಿಲ್ಲಿಸಿ ಕೆಲಸಕ್ಕೆ ಕಳಿಸಿದರು. ಇದು ಅಸಹಾಯಕದ ದಿನಮಾನಗಳು ಎಂದ ಜಾನ್ ರಾಬರ್ಟ್್ಸ, ಕಳವಳವ್ಯಕ್ತಪಡಿಸುತ್ತಾರೆ ಈ ಅಂಕಿ-ಸAಖ್ಯೆಗೆ ಹೋಲಿಕೆ ಮಾಡಿದರೆ ಇತ್ತೀಚೆಗೆ ಈ ಪ್ರಮಾಣ ಹೆಚ್ಚಾಗಿರಬಹುದು ಎಂದು ಅಂದಾಜು ಮಾಡಲಾಗಿದೆ.ಅದಕ್ಕೆ ಕಾರಣ ಕೊರೊನಾ! ಈ ಕಾಲಘಟ್ಟಲ್ಲಿ ಬಲವಂತ ಮತ್ತು ಕಾರ್ಮಿಕರಾಗಿ ತಳ್ಳಲ್ಪಟ್ಟ ಮಕ್ಕಳ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿರಬಹುದು. ಹಾಗಾಗಿ ಅವರ ಜೀವನೋಪಾಯಕ್ಕಾಗಿ ಅವಕಾಶಗಳನ್ನು ಸೃಷ್ಟಿಸುವುದು ಬಹಳ ಮುಖ್ಯವಾಗಿದೆಕೋಟ್… ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಉಪಕಾರ್ಯದರ್ಶಿ ಸಿ.ಎಸ್.ಶಿವನಗೌಡ್ರತಂದೆ ತಾಯಿಗಳು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು. ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದು ಪಾಲಕರ ಜವಾಬ್ದಾರಿಯಾಗಿದೆ. ಬಾಲ ಕಾರ್ಮಿಕತೆ ಕಂಡು ಬಂದಲ್ಲಿ ಅಥವಾ ಮಕ್ಕಳಿಗೆ ಏನಾದರೂ ತೊಂದರೆಯಾದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕ್ಕೆ ಸಂಪರ್ಕಿಸಬಹುದಾಗಿದೆ ಕೋಟ್..ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಬಾಲ ಕಾರ್ಮಿಕತೆಗೆ ಅಸಹಾಯಕತೆ ಮುಖ್ಯ ಕಾರಣವಾಗಿದೆ. ಅರಿವೇ ಗುರು ಎಂಬ ನಾಣ್ನುಡಿಯಂತೆ ಮಕ್ಕಳಲ್ಲಿ ಅರಿವು ಮೂಡಿಸಿ ಅನ್ಯಾಯದ ವಿರುದ್ಧ ಹೋರಾಡುವ ಶಕ್ತಿ ಬೆಳೆಸಬೇಕು. ಸರ್ಕಾರವು ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಹಾಗೂ ಶ್ರೇಯೋಭಿವೃದ್ಧಿಗಾಗಿ ಹಲವಾರು ಸೌಲಭ್ಯಗಳನ್ನು ಜಾರಿಗೆ ತಂದಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾದರೆ ಎಲ್ಲ ಸೌಲಭ್ಯಗಳಿಂದ ಅವರು ವಂಚಿತರಾಗದAತೆಯೇ ಆಗುತ್ತದೆ. ಬಾಲ ಕಾರ್ಮಿಕತೆ ಕುರಿತು ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿರುವವರಿಗೆ ಅರಿವು ಮೂಡಿಸಬೇಕು. ಬಾಲ ಕಾರ್ಮಿಕರು ಕಂಡು ಬಂದಲ್ಲಿ ಸಹಾಯವಾಣಿ ಸಂಖ್ಯೆಗೆ 1098 ಗೆ ಕರೆ ಮಾಡಬೇಕು ಕೋಟ್..ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಶಿಕ್ಷಣ ಮೂಲಭೂತ ಹಕ್ಕಾಗಿ ಪರಿಗನಿಸಲ್ಪಟ್ಟಿದೆ. 14 ವರ್ಷದೂಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀಡಲಾಗುತ್ತಿದೆ. ಆದ್ದರಿಂದ ಎಲ್ಲರೂ ಶಿಕ್ಷಣಕ್ಕೆ, ಹೆಚ್ಚಿನ ಆಧ್ಯತೆ ನೀಡುವುದರ ಮೂಲಕ ಬಾಲಕಾರ್ಮಿಕ ಪದ್ಧತಿಯನ್ನು ತೂಡೆದು ಹಾಕಲು ಶ್ರಮಿಸಬೇಕಾಗಿದೆ.ಕೋಟ್..ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫಿಕಾ ಹಳ್ಳೂರಗದಗ ಜಿಲ್ಲೆಯಲ್ಲಿ 2025/26 ನೇ ಸಾಲಿನಲ್ಲಿ ತಾಲೂಕುವಾರು ವಿಶೇಷ ಮಕ್ಕಳ ಕಲ್ಯಾಣ ಸಮಿತಿ ಸಭೆಗಳನ್ನು ಆಯೋಜಿಸಿ ಮಕ್ಕಳ ರಕ್ಷಣಾ ಕಾರ್ಯಚರಣೆ ಕೈಗೂಳ್ಳಲಾಗುತ್ತಿದ್ದು, ವಿವಿಧ ಇಲಾಖೆ ಸಹಯೋಗದೂಂದಿಗೆ, ಅವರ ಸಕ್ರಿಯ ಭಾಗವಹಿಸುವಿಕೆಯಿಂದ ಬಾಲ ಹಾಗು ಕಿಶೋರ ಕಾರ್ಮಿಕ ಹಾಗೂ ಬಿಕ್ಷಾಟನೆ ತೂಡಗಿದ, ಮಕ್ಕಳ ರಕ್ಷಣೆ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಎದುರಿಗೆ ಹಾಜರುಪಡಿಸಿ ಪಾಲಕರಿಗೆ ತಿಳುವಳಿಕೆ ಹೇಳಿ ಪಾಲಕರ ವಶಕ್ಕೆ ಬಿಡುಗಡೆ ಮಾಡಲಾಗಿರುತ್ತದೆ.ಅಲ್ಲದೇ ‘’ಮುಸ್ಸಂಜೆ ಮಾತು’’ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಹಳ್ಳಿಗಳಿಗೆ ಹೋಗಿ ಸಂಜೆ ವೇಳೆಯಲ್ಲಿ ಸಾರ್ವಜನಿಕರು, ಪಾಲಕರು ಮಕ್ಕಳಿಗೆ ವಿಡಿಯೋ ಕಾಲ ಮೂಲಕ ಬಾಲ್ಯ ವಿವಾಹ, ಬಾಲ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಹಾಗೂ ಶಾಲೆಬಿಟ್ಟ ಮಕ್ಕಳ ಕುರಿತು ಅರಿವು ಮೂಡಿಸಲಾಗುತ್ತಿದೆ.ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ (ರಿ)ಗದಗ, ಯೋಜನಾ ನಿರ್ದೇಶಕರು, ಸಂದೇಶ. ಚ. ಪಾಟೀಲಜಿಲ್ಲೆಯಲ್ಲಿ ಬಾಲಕಾರ್ಮಿರು ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಟಾಸ್ಕ-ಪೋರ್ಸ ಕಮಿಟಿ ರಚಿಸಲಾಗಿದೆ. ಎಲ್ಲ ಇಲಾಖೆಯ ಸಹಯೋಗದೂಂದಿಗೆ ಸದರಿ ತಂಡ ಪ್ರತಿ ತಿಂಗಳು ಚಟುವಟಿಕೆಯಿಂದ ಕಾರ್ಯ ನಿರ್ವಹಿಸುತ್ತಿದೆ. ದೂರು ಸಲ್ಲಿಸಹುದಾದ ಇಲಾಖೆಗಳು ಪೊಲೀಸ್ ಇಲಾಖೆ, ಕಾರ್ಮೀಕ ಇಲಾಖೆ , ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆ, ನಗರಾಭಿವೃದ್ಧಿ ಇಲಾಖೆ, ರೇಷ್ಮೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ,ಮಕ್ಕಳ ಸಹಾಯವಾಣಿ ; ಮಕ್ಕಳ ಸಹಾಯವಾಣಿ ಸಂಖ್ಯೆ -1098, ಕಾರ್ಮೀಕರ ಸಹಾಯ ವಾಣಿ-155214, ಕರ್ನಾಟಕ ಮಕ್ಕಳ ಸಹಾಯವಾಣಿ-ಬೆಂಗಳೂರು ದೂರವಾಣಿ 080-22115291/92 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *