
ಗದಗ: ‘ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪ್ರತಿಯೊಬ್ಬರಿಗೂ ಯೋಗದ ಅಗತ್ಯವಿದೆ’ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಹೇಳಿದರು.ಭಾರತೀಯ ಅಂಚೆ ಇಲಾಖೆ ಗದಗ ವಿಭಾಗೀಯ ಆಶ್ರಯದಲ್ಲಿ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ ಯೋಗ ದಿನದಲ್ಲಿ ಪಾಲ್ಗೊಂಡು ಚಾಲನೆ ನೀಡಿ ಅವರು ಮಾತನಾಡಿ, ದಿನನಿತ್ಯ ಯೋಗ ಅಭ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ರೋಗ-ರುಜಿನಗಳಿಂದ ದೂರವಿರಲು ಅನುಕೂಲವಾಗಿದೆ ಎಂದು ಹೇಳಿದರು.ಯೋಗದಿಂದ ವೈಯಕ್ತಿಕ ಆರೋಗ್ಯವೃದ್ಧಿಯಾಗುವುದಲ್ಲದೆ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೂ ಪೂರಕವಾಗಲಿದೆ. ಹೀಗಾಗಿ ಎಲ್ಲರೂ ಯೋಗಾಭ್ಯಾಸವನ್ನು ಪ್ರತಿ ದಿನ ಕುಟುಂಬ ಸಮೇತ ಕೆಲವು ಗಂಟೆ ಯೋಗಭ್ಯಾಸಕ್ಕೆ ನೀಡಬೇಕು ಎಂದರು.ಬ್ರಹ್ಮ ಕುಮಾರಿ ಶೋಭಾ ಅಕ್ಕ ಯೋಗ ಶಿಬಿರ ನಡೆಸಿ,ಯೋಗವು ಪ್ರಾಚೀನ ಭಾರತದ ಅಮೂಲ್ಯ ಕೊಡುಗೆಯಾಗಿದೆ. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುವಲ್ಲಿ ಯೋಗದ ಪಾತ್ರ ಮಹತ್ವದ್ದು. ಪ್ರತಿವರ್ಷ ಒಂದೊಂದಿ ಥೀಮ್‌ನಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಒಂದು ದೇಶ ಒಂದು ಭೂಮಿಗಾಗಿ ಯೋಗ ಎಂಬುದು ಥೀಮ್ ಆಗಿದೆ. ಹಾಗಾಗಿ ಹಚ್ಚು ಹಸಿರಿನ ಪರಿಸರ ಮಧ್ಯದಲ್ಲಿ ನಾವು ಯೋಗಭ್ಯಾಸ ಜೊತೆಗೆ ಪರಿಸರ ಸಂರಕ್ಷಣೆಯೊಂದಿಗೆ ಭೂಮಿ ವಿಷಯುಕ್ತದಿಂದ ಮುಕ್ತ ಮಾಡಲುಮುಂದಾಗಬೇಕು ಎಂದರು.ಅಂಚೆ ಕಚೇರಿಗಳಲ್ಲಿ ಯೋಗ ಶಿಬಿರಗಳು, ಪ್ರದರ್ಶನಗಳು ಮತ್ತು ಅರಿವು ಮೂಡಿಸುವ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವದು ಸಂತಸ ತಂದಿದೆ ಎಂದರು.ಗದಗ ಅಂಚೆ ಸಹಾಯಕರಾದ ಶ್ರೀಕಾಂತ ಜಾದವ, ವಿ.ಸುನೀಲಕುಮಾರ, ಪ್ರಧಾನ ಅಂಚೆ ಪಾಲಕರಾದ ಮಂಜುಳಾ ದೇಗಿನಾಳ, ಉಪ ಅಂಚೆ ಪಾಲಕರಾದ ದೊಡ್ಡಪ್ಪ ಇಟಗಿ, ಬ್ರಹ್ಮಕುಮಾರಿ ಸಾವಿತ್ರಿ ಅಕ್ಕ ಬ್ರಹ್ಮಕುಮಾರಿ ಲತಾ ಅಕ್ಕ ಹಾಗೂ ವಿವಿಧ ಅಂಚೆ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.***

ಫೋಟೋ:ಕ್ಯಾಪ್ಷನ್ ಗದಗ ಪ್ರಧಾನ ಅಂಚೆ ಕಚೇರಿ ರಸ್ತೆ ಆವರಣದಲ್ಲಿ ಅಂಚೆ ಕಚೇರಿ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ ಯೋಗದಲ್ಲಿ ಅಂಚೆ ಇಲಾಖೆ ಸಿಬ್ಬಂದಿ ಪಾಲ್ಗೊಂಡಿರುವದು.