
ದಾವಣಗೆರೆ: ಜಿಲ್ಲೆಯ ಜಿಲ್ಲಾಧಿಕಾರಿಗೆ ವಾಹನ ಸವಾರ ಧಮ್ಕಿ ಹಾಕಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ನಮ್ಮ ಕರ್ನಾಟಕದ ಪ್ರತಿ ಜಿಲ್ಲೆ ಯಲ್ಲೂ ಹಿಂತಾ ಪುಡಾರಿ ಜನ ಬಹಳ್ ಇದ್ದಾರೆ.ದಾವಣಗೆರೆ ನಗರದ ರಿಂಗ್ ರಸ್ತೆಯ ಶಾರದಾಂಭ ದೇವಸ್ಥಾನ ಬಳಿ ದಾವಣಗೆರೆ ಜಿಲ್ಲಾಧಿಕಾರಿ ಡಾ.ಜಿ.ಎಂ ಗಂಗಾಧರಸ್ವಾಮಿ ಬೆಳಗ್ಗೆ ಸೈಕಲ್‌ನಲ್ಲಿ ಹೋಗುತ್ತಿದ್ದರು.ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬೈಕ್ ಸವಾರ್ ವೇಗವಾಗಿ ಓನ್ ವೇನಲ್ಲಿ ಬಂದಿದ್ದಾನೆ.ಈ ವೇಳೆ ಗಂಗಾಧರಸ್ವಾಮಿ ಒನ್ ವೇ ನಲ್ಲಿ ಬಂದಿರುವುದನ್ನು ಪ್ರಶ್ನಿಸಿದ್ದು, ಇದು ತಪ್ಪು ಎಂದು ಬುದ್ದಿ ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ವಾಹನ ಸವಾರ ‘ನೀನು ಯಾವನೋ ಕೇಳೋಕೆ’ ಎಂದು ಜಿಲ್ಲಾಧಿಕಾರಿಗೆ ಅವಾಜ್ ಹಾಕಿದ್ದಾನೆ. ಕೂಡಲೇ ಗಂಗಾಧರಸ್ವಾಮಿ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಬೈಕ್ ನಂಬರ್ ನೀಡಿ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಸದ್ಯ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಪೊಲೀಸರು ಬೈಕ್ ಸವಾರನ ಪತ್ತೆಗೆ ಮುಂದಾಗಿದ್ದಾರೆ.ಹಿಂತಾ ಪುಂಡರಿಗೆ ಕಾನೂನು ಅರಿವು ಮೂಡಿಸಲು ಪ್ರತಿ ಜಿಲ್ಲೆಯ ಜಿಲ್ಲಾ ಪೊಲೀಸ್ ಮುಂದಾಗಬೇಕು.