
*ವಿಷಪೂರಿತ ಆಹಾರ ಸೇವಿಸಿ 80 ಕುರಿಗಳು ಸಾವು..!*

ಸಂಚಾರಿ ಕುರಿಗಾಹಿಗಳ ಕುರಿಗಳು ವಿಷಪೂರಿತ ಆಹಾರ ಸೇವಿಸಿದ ಕಾರಣ 80 ಕುರಿಗಳು ಸಾವನ್ನಪ್ಪಿದ ಘಟನೆ ಕಳೆದ ರವಿವಾರ ಸಾಯಂಕಾಲ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮದಲ್ಲಿ ನಡೆದಿದೆ.

ಕುರಿಗಳ ಮಾಲಿಕರ ಕುಟುಂಬ ಸದಸ್ಯರು ಕಣ್ಣೀರು ಹಾಕುತ್ತಿದ್ದು ನಮ್ಮ ಹೊಟ್ಟೆಪಾಡಿನ ಮುಂದಿನ ಗತಿಯೇನು ಎಂದು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಹೊಳೆ ಇಟಗಿ ಗ್ರಾಮದ ಕುಬೇರಪ್ಪ ಬುರಡಿ ಎಂಬುವರ ಜಮೀನಿನಲ್ಲಿ ಕುರಿಗಳ ಸಾಮೂಹಿಕ ದುರಂತ ಸಾವು ಸಂಭವಿಸಿದೆ.

ಸಾವನ್ನಪ್ಪಿದ ಕುರಿಗಳು ಚಿಕ್ಕೋಡಿ ಮೂಲದ ಸಂಚಾರಿ ಕುರುಬ ಪದ್ಮಣ್ಣ ಪೂಜಾರಿ ಎಂಬುವರಿಗೆ ಸೇರಿವೆ ಎಂದು ಮಾಹಿತಿ ಲಭ್ಯವಾಗಿದೆ.ಸಾವುಗೀಡಾದ ಕುರಿಗಳಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಶಿರಹಟ್ಟಿ ತಾಲೂಕಾ ಘಟಕದ ಅಧ್ಯಕ್ಷ ಹೊನ್ನೇಶ ಪೋಟಿ ಆಗ್ರಹಿಸಿದ್ದಾರೆ.

*ವರದಿ*✍️ಚಂದ್ರಶೇಖರ ಸೋಮಣ್ಣವರ
