ಹುಬ್ಬಳ್ಳಿ-ಬನ್ನಿಕೊಪ್ಪ ಬಸ್ ನಿತ್ಯವೂ ಓಡಿಸಲು ಆಗ್ರಹ.

*ಹುಬ್ಬಳ್ಳಿ-ಬನ್ನಿಕೊಪ್ಪ ಬಸ್ ನಿತ್ಯವೂ ಓಡಿಸಲು ಆಗ್ರಹ*

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಾರಿಗೆ ಘಟಕದಿಂದ ಹೊರಡುವ ಹುಬ್ಬಳ್ಳಿ-ಬನ್ನಿಕೊಪ್ಪ ವಸತಿ ಬಸ್ಸನ್ನು ಪ್ರತೀದಿನವೂ ಕಾರ್ಯಾಚರಣೆಗೊಳಿಸಬೇಕೆಂದು ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಭಾಗದ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಾರ್ಗ ಸಂಖ್ಯೆ-97 ಹುಬ್ಬಳ್ಳಿ-ಬನ್ನಿಕೊಪ್ಪ ಈ ವಸತಿ ಬಸ್ ಕಳೆದ 25-ವರ್ಷಗಳಿಂದ ಸಂಚರಿಸುತ್ತಿದ್ದು ಒಟ್ಟು16 ಸ್ಟೇಜ್ಗಳನ್ನು ಹೊಂದಿದ್ದು ತುಂಬಾ ಒಲ್ಡ್ ಶೆಡ್ಯೂಲ್ ಬಸ್ಸಾಗಿದ್ದು ಬೆಳ್ಳಟ್ಟಿ ಕೇಂದ್ರ ಸ್ಥಳದ ವ್ಯಾಪ್ತಿಯ ಹಲವು ಗ್ರಾಮಗಳ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ

.ಸದರಿ ಈ ಹುಬ್ಬಳ್ಳಿ- ಬನ್ನಿಕೊಪ್ಪ ವಸತಿ ಬಸ್ ವಾರದಲ್ಲಿ ಕೆಲವು ದಿನ ಬಾರದೆ ಇರುವ ಕಾರಣ ಹುಬ್ಬಳ್ಳಿಗೆ ಹೋಗಿ ಬರುವ ಪ್ರಯಾಣಿಕರಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಕಣ್ಮುಚ್ಚಿ ಕುಳಿತಿರುವ ಲಕ್ಷ್ಮೇಶ್ವರ ಸಾರಿಗೆ ಘಟಕದ ವ್ಯವಸ್ಥಾಪಕರು ಹಾಗೂ ಗದಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ವಿಭಾಗೀಯ ಸಂಚಲನಾಧಿಕಾರಿಗಳು ಈಗಲಾದರೂ ಸಹ ಎಚ್ಚೆತ್ತುಕೊಳ್ಳುವ ಮೂಲಕ ಪ್ರಯಾಣಿಕರ ಸಮಸ್ಯೆಗೆ ಕ್ರಮ ಕೈಗೊಳ್ಳಬೇಕಾಗಿದೆ.

*ವರದಿ*✍️ಚಂದ್ರಶೇಖರ ಸೋಮಣ್ಣವರ

Leave a Reply

Your email address will not be published. Required fields are marked *