
*ಸೇವಾನಗರದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಗುರುವಂದನಾ ಕಾರ್ಯಕ್ರಮ*

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸೇವಾನಗರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಯನ್ನು ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರಾದ ಎಸ್.ಎಲ್.ತಳವಾರ ಹಾಗೂ ವಾಯ್.ಟಿ.ಅರ್ಕಸಾಲಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

.ಶಿಕ್ಷಕರ ದಿನಾಚರಣೆಯ ನಿಮಿತ್ಯವಾಗಿ ಸೇವಾನಗರದಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದ ಎಲ್ಲಾ ಶಿಕ್ಷಕರಿಗೆ ಈ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲಾ ಆವರಣದಿಂದ ಶಿಕ್ಷಕರಿಗೆ ಹೂವು-ಮಳೆಗೈಯುತ್ತಾ ಭಜನಾ ತಂಡದೊಂದಿಗೆ ಸೇವಾಲಾಲ್ ದೇವಸ್ಥಾನದ ಬಳಿ ಇರುವ ವೇದಿಕೆಗೆ ಬರಮಾಡಿಕೊಂಡರು.

.ತದನಂತರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಇವರ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯರಾದ ರಘು ನಾಯಕ್ ವಹಿಸಿದ್ದರು.ನಿವೃತ್ತ ಪ್ರಾಚಾರ್ಯರಾದ ಸಿ.ಎಸ್.ಅರಸಿನಾಳ ಇವರು ಉಪನ್ಯಾಸ ನೀಡಿದರು.ಈ ಗೌರವ ಸಮರ್ಪಣೆಯ ಕಾರ್ಯಕ್ರಮದಲ್ಲಿ ಹಲವು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವ ಮೂಲಕ ಗುರು ಕಾಣಿಕೆಗಳನ್ನು ನೀಡಿದರು.ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಸ್.ಟಿ.ಕಬ್ಬಿನ, ಡಿ.ಎಸ್.ಭಜಂತ್ರಿ, ಆರ್.ಎನ್.ಮಡಿವಾಳರ,ರವಿ.ಕಮ್ಮಾರ, ಸಿ.ಬಿ.ಕಬ್ಬೇರ್, ಶಿಕ್ಷಕಿ ವಿಜಯಲಕ್ಷ್ಮಿ ತೆಗ್ಗಿ, ಗ್ರಾಮದ ಹಿರಿಯರಾದ ಶೀವು ಕಾರಬಾರಿ, ರಮೇಶ್ ಡಾವ ಸೇರಿದಂತೆ SDMC ಪದಾಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ*✍️ಚಂದ್ರಶೇಖರ ಸೋಮಣ್ಣವರ
