
*ಸುಗನಹಳ್ಳಿಯಲ್ಲಿ ತುಂಬಾ ಅದ್ದೂರಿಯಿಂದ ಗಣಪತಿ ವಿಸರ್ಜನೆ
*ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗನಹಳ್ಳಿ ಗ್ರಾಮದಲ್ಲಿ ನವಚೇತನ ಯುವಕ ಸಂಘದವರು ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿಯನ್ನು ತುಂಬಾ ಅದ್ದೂರಿಯಾಗಿ ಮೆರವಣಿಗೆಯ ಮೂಲಕ ವಿಸರ್ಜಿಸಿದರು.ಮಾಗಡಿ ಗ್ರಾಮದ ಸುರಭಿ ಬ್ಯಾಂಡ್ ಕಂಪನಿಯೊಂದಿಗೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ಟ್ರ್ಯಾಕ್ಟರ್ ಮೂಲಕ ಗಣಪತಿ ಮೂರ್ತಿಯ ಭವ್ಯ ಮೆರವಣಿಗೆ ಜರುಗಿತು.ಬ್ಯಾಂಡ್ ಕಂಪನಿಯವರ ತಾಳಕ್ಕೆ ಯುವಕರು ಸ್ಟೆಫ್ ಹಾಕುವ ಮೂಲಕ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ನವಚೇತನ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು
.*ವರದಿ*✍️ಚಂದ್ರಶೇಖರ ಸೋಮಣ್ಣವರ
