
*ರೈಲ್ವೆ ರಕ್ಷಣಾ ಪಡೆಯ ಮೊದಲ ಮಹಿಳಾ ಮಹಾನಿರ್ದೇಶಕಿಯಾಗಿ ಸೋನಾಲಿ ಮಿಶ್ರಾ ನೇಮಕ▪️
ಮಧ್ಯಪ್ರದೇಶ ಕೇಡರ್‌ನ 1993 ರ ಬ್ಯಾಚ್ ಐಪಿಎಸ್ ಅಧಿಕಾರಿ ಸೋನಾಲಿ ಮಿಶ್ರಾ ಅವರು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆರ್‌ಪಿಎಫ್‌ನ 143 ವರ್ಷಗಳ ಇತಿಹಾಸದಲ್ಲಿ ಸೋನಾಲಿ ಮಿಶ್ರಾ ಅವರು ಈ ಪಡೆಯನ್ನು ಮುನ್ನಡೆಸುವ ಮೊದಲ ಮಹಿಳೆಯಾಗಿದ್ದಾರೆ.*
