
ನಿಧನ ವಾರ್ತೆ
ಗಜೇಂದ್ರಗಡ: ಸಮೀಪದ ಕೊಡಗಾನೂರ ಗ್ರಾಮದ ನಿವಾಸಿ ಭೀಮಲೆಪ್ಪ ಸಿದ್ದಪ್ಪ ಮಾಳವತ್ತ(50) ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ಬೆಳಿಗ್ಗೆ ಹೊಲಕ್ಕೆ ಹೋಗಿ ಮೆಕ್ಕೆಜೋಳದ ಜಮೀನಿನಲ್ಲಿ ಕೆಲಸ ಮಾಡುವಾಗ ಸಡನ್ ಆಗಿ ಎದೆನೋವು ಕಾಣಿಸಿಕೊಂಡಿದ್ದು, ಪಕ್ಕದಲ್ಲಿದ್ದ ಕಿರಿಯ ಸಹೋದರನಿಗೆ ತಿಳಿಸಿದ್ದಾರೆ. ತದನಂತರ ಅಲ್ಲಿಯೇ ಕುಸಿದು ಬಿದ್ದು ಅಸುನೀಗಿದರು ಎಂದು ಕುಟುಂಬದ ಸದಸ್ಯರು ತಿಳಿಸಿದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂದುಬಳಗವಿದೆ.
ಫೋಟೋ: ಭೀಮಲೆಪ್ಪ ಮಾಳವತ್ತ
