
ಪ್ರಕಟಣೆ”ಉಡಾನ್- ಗಾಳಿಪಟ ಹಬ್ಬ – 10ನೇ ವರ್ಷದ ಆಚರಣೆಗೆ ವಿಜೃಂಭಣೆಯ ಆರಂಭ”ಗದಗ: ಕೆ.ಹೆಚ್. ಪಾಟೀಲ್ ವೈದ್ಯಕೀಯ ವಿಜ್ಞಾನ ಸಂಸ್ಥೆ, ಗದಗ ಇದರ ಸ್ಥಾಪನೆಯಾದ 10ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಮೊದಲ ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದ “ಉಡಾನ್ ಗಾಳಿಪಟ ಹಬ್ಬ” ಜೂನ್ 13 ರಂದು ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮವನ್ನು ಉತ್ತಮ್ ಎಂಬಿಬಿಎಸ್ ಬ್ಯಾಚ್ ಅತ್ಯಂತ ಉತ್ಸಾಹದಿಂದ ಮತ್ತು ಸೃಜನಾತ್ಮಕತೆಯಿಂದ ಆಯೋಜಿಸಿತ್ತು.ಈ ಉತ್ಸವದಲ್ಲಿ 84 ತಂಡಗಳು ಭಾಗವಹಿಸಿದದ್ದವು, ಪ್ರತಿ ತಂಡವು ಹಸಿರು ಕ್ಯಾಂಪಸ್ (Green Campus) ಅಭಿಯಾನಕ್ಕಾಗಿ ಪ್ರೋತ್ಸಾಹದ ರೂಪದಲ್ಲಿ ಪ್ರತಿಯೊಬ್ಬರು ₹10 ದೇಣಿಗೆ ನೀಡಿದರು. ಈ ಮೂಲಕ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಕ್ಯಾಂಪಸ್ ನಿರ್ಮಾಣದತ್ತ ತಮ್ಮ ಜವಾಬ್ದಾರಿಯನ್ನು ತೋರಿಸಿದರು.ಗಾಳಿಪಟ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ, ದೀರ್ಘ ಕಾಲ ಹಾರಿದ ಗಾಳಿಪಟ (Long-standing kite), ಅತ್ಯುನ್ನತ ಹಾರಾಟ ಮಾಡಿದ ಗಾಳಿಪಟ (High-flying kite), ಹಾಗೂ ಅಲಂಕೃತ ಗಾಳಿಪಟ (Best decorated kite) ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಬಹುಮಾನಗಳನ್ನೂ ಹಾಗೂ ಪದಕಗಳನ್ನು ಪ್ರಧಾನಿಸಲಾಯಿತು.ಅಲ್ಲದೇ, ಇತ್ತೀಚೆಗೆ ನಡೆದ ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಿಗೂ ಈ ವೇದಿಕೆಯಲ್ಲಿ ಪದಕ ವಿತರಣೆಮಾಡಲಾಯಿತು, ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಉತ್ಸಾಹದ ಮಹಾಪೂರ ಮೂಡಿತು.ಕಾಲೇಜಿನ ಬೋಧಕ ಹಾಗೂ ಬೋಧನೇತರ ಸಿಬ್ಬಂದಿ ಮತ್ತು ಅವರ ಮಕ್ಕಳು ಸಹ ಈ ಉತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಿದರು, ಇದು ಕಾಲೇಜು ಸಮುದಾಯದ ಕುಟುಂಬ ಒಗ್ಗಟ್ಟಿಗೆ ಸಾಕ್ಷಿಯಾಯಿತು.ಮುಖ್ಯ ಅತಿಥಿ ಗಳಾಗಿ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗದ ಕುಲಪತಿ ಡಾ. ಸುರೇಶ್ ನಾಡಗೌಡರ ಅವರು ಭಾಗವಹಿಸಿ, “ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ಪರಿಸರದ ಜವಾಬ್ದಾರಿಯನ್ನು ಬೆಳೆಯಿಸುತ್ತವೆ,” ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಡಾ. ಬಸವರಾಜ ಬೊಮ್ಮನಹಳ್ಳಿ ಇವರು ವಹಿಸಿದ್ದರು. ಅವರು ಮಾತನಾಡುತ್ತಾ, “ಸಂಸ್ಥೆಯ ಶೈಕ್ಷಣಿಕ ಕೊರ್ಸುಗಳು ಪ್ರಾರಂಭವಾಗಿ 10 ವರ್ಷಗಳು ತುಂಬಿವೆ. 10ನೇ ವಾರ್ಷಿಕೋತ್ಸವದ ಆರಂಭವನ್ನು ಇಂತಹ ಉತ್ಸಾಹಪೂರ್ಣ ಕಾರ್ಯಕ್ರಮದಿಂದ ಆಚರಿಸೋದು ಸಂತೋಷದ ವಿಷಯ. ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ಬೆಳೆಸಲು ಇದು ಪ್ರೇರಕವಾಗಿದೆ,” ಎಂದು ಹೇಳಿದರು. ಈ ಕಾರ್ಯಕ್ರಮದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಭ್ರಮದ ಕಾರ್ಯಕ್ರಮಗಳು ನಡೆಯಲಿವೆ ಎಂಬ ಭರವಸೆ ನೀಡಿದರು.”ಉಡಾನ್” ಹಬ್ಬವು ಶೈಕ್ಷಣಿಕ ಕ್ಯಾಂಪಸ್‌ನಲ್ಲಿ ನವೋತ್ಸಾಹ, ಸಂಸ್ಕೃತಿ ಮತ್ತು ಸಮ್ಮಿಲನದ ಹೆಜ್ಜೆಗುರುತು ಮೂಡಿಸಿ, 10ನೇ ವರ್ಷದ ಸ್ಮರಣೀಯ ಆರಂಭವಾಗಿ ದೆ. ಪ್ರಾಂಶುಪಾಲರಾದ ಡಾ ರಾಜು ಜಿ ಎಂ, ನೋಡಲ್ ಅಧಿಕಾರಿಗಳಾದ ಡಾ ಈಶ್ವರ ಸಿಂಗ್, ವಿದ್ಯಾರ್ಥಿ ಬಳಗದ ಮಾರ್ಗದರ್ಶಕರಾದ ಡಾ ಸಮತಾ, ಡಾ ಕರೀಗೌಡರ್, ಡಾ ಮಹಾಂತೇಶ ಪಾಟೀಲ, ಡಾ ಭೀಮಸಿಂಗ್, ಡಾ ಶಿವರೆಡ್ಡಿ ಉಪಸ್ಥಿತರಿದ್ದರು.